Advertisement

ಮಸೂದೆ ಅಂಶ ಪರಿಗಣಿಸಲು ಮನವಿ

04:09 PM Jul 30, 2018 | |

ನಗರ : ಸಾರ್ವಜನಿಕ ಹಿತಾಸಕ್ತಿ ಮತ್ತು ಭಾರತದ ವೈದ್ಯಕೀಯ ಕ್ಷೇತ್ರದ ಅಭಿವೃದ್ಧಿಗೆ ಮಾರಕ ಆಗಿರುವ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲು ವ್ಯವಸ್ಥೆ ಮಾಡಿದ್ದು, ಈ ನಿಟ್ಟಿನಲ್ಲಿ ಮಸೂದೆಯ ಅಂಶಗಳನ್ನು ಸರಿಪಡಿಸುವಂತೆ ಒತ್ತಾಯಿಸಿ ಭಾರತೀಯ ವೈದ್ಯಕೀಯ ಸಂಘದ ಪುತ್ತೂರು ತಾಲೂಕು ಘಟಕ ವತಿಯಿಂದ ಸಹಾಯಕ ಆಯುಕ್ತರ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ನೀಡಲಾಯಿತು.

Advertisement

2017ರಲ್ಲಿ ಮಂಡಿಸಲಾದ ಈ ಕಾನೂನಿನಲ್ಲಿ ಋಣಾತ್ಮಕ ಅಂಶಗಳನ್ನು ಗುರುತು ಮಾಡಿ, ಲೋಪಗಳ ಬಗ್ಗೆ ಲೋಕಸಭೆಯ ಸ್ಥಾಯಿ ಸಮಿತಿಗೆ ಸಂಘ ಸೂಚಿಸಿತ್ತು. ಸಂಘ ನೀಡಿರುವ ಸೂಚನೆಗಳ ಪೈಕಿ ಒಂದನ್ನು ಪೂರ್ಣವಾಗಿ ಹಾಗೂ 3 ವಿಷಯಗಳನ್ನು ಭಾಗಶಃ ಅಳವಡಿಸಿದೆ. ಉಳಿದ ಎಲ್ಲ ಅಂಶಗಳನ್ನು ಕೈಬಿಡಲಾ ಗಿದೆ. ಇದನ್ನು ಸಂಘ ವಿರೋಧಿಸಿದೆ. ಮಸೂದೆಯಲ್ಲಿನ ಅಂಶಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ಸಂಘ ಒತ್ತಾಯಿಸಿದೆ.

ಭಾರತೀಯ ವೈದ್ಯಕೀಯ ಸಂಘದ ಪುತ್ತೂರು ಘಟಕ ಅಧ್ಯಕ್ಷ ಡಾ| ಗಣೇಶ್‌ ಪ್ರಸಾದ್‌ ಮುದ್ರಾಜೆ, ಕಾರ್ಯದರ್ಶಿ ಡಾ| ಮಹಾಲಿಂಗೇಶ್ವರ ಪ್ರಸಾದ್‌, ಕೋಶಾಧಿಕಾರಿ ಡಾ| ಬದ್ರುದೀªನ್‌ ಎನ್‌., ರಾಜ್ಯ ಸಮಿತಿ ಸದಸ್ಯ ಡಾ| ಎಸ್‌. ಎಸ್‌. ಜೋಶಿ, ಡಾ| ಶ್ರೀಪತಿ ರಾವ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next