ರಾಣಿಬೆನ್ನೂರ: ಕೋವಿಡ್-19ನಿಂದ ಮೃತಪಟ್ಟವರ ಅಂತ್ಯಸಂಸ್ಕಾರವನ್ನು ಮೇಡ್ಲೇರಿ ರಸ್ತೆಯ ಫಾರೆಸ್ಟ್ ಐಬಿ ಬಳಿ ಜಿಲ್ಲಾಡಳಿತ ಸೂಚಿಸಿದ ಸರ್ಕಾರಿ ಕಂದಾಯ ಜಾಗೆಯನ್ನು ಬಿಟ್ಟು ಬೇರೆ ಕಡೆ ಸ್ಥಳಾಂತರಿಸಬೇಕೆಂದು ತಾಲೂಕಿನ ವಿವಿಧ ತಾಂಡಾಗಳ ನೂರಾರು ಜನರು ಶಾಸಕ ಅರುಣಕುಮಾರ ಪೂಜಾರ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ರಾಮಪ್ಪ ಲಮಾಣಿ ಮಾತನಾಡಿ, ಶ್ರೀನಿವಾಸಪುರ, ಬಸಲಿಕಟ್ಟಿ, ಸಿದ್ದಾಪುರ, ಗೋವಿಂದ ಬಡಾವಣೆ ನಾಲ್ಕು ತಾಂಡಾಗಳ ನಡುವೆ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ ಮೃತ ದೇಹಗಳನ್ನು ಅಂತ್ಯಕ್ರಿಯೆ ಮಾಡಲು ಜಿಲ್ಲಾಡಳಿತ ಸೂಚಿಸಿದೆ.
ಈ ಜಾಗೆಯು ಜನವಸತಿ ಪ್ರದೇಶದ ಸಮೀಪದಲ್ಲಿದೆ. ಇಲ್ಲಿ ಬಡವರು ಮತ್ತು ಕೂಲಿ ಕಾರ್ಮಿಕರು ಹೆಚ್ಚು ವಾಸಿಸುತ್ತಿದ್ದಾರೆ. ನಾಳೆ ಏನಾದರೂ ತೊಂದರೆಯಾದರೆ ಜನತೆಗೆ ತೀವ್ರ ತೊಂದರೆಯಾಗುತ್ತದೆ. ಮೃತ ದೇಹಗಳನ್ನು ಹೂಳುತ್ತಾರೆ ಎಂದು ಜನರಲ್ಲಿ ಭಯದ ವಾತಾವರಣ ಮೂಡಿದೆ. ಈಗಾಗಲೇ ಸೂಚಿಸಿದ ಜಾಗೆಯನ್ನು ಬಿಟ್ಟು ಬೇರೆ ಕಡೆಗೆ ಸ್ಥಳಾಂತರ ಮಾಡಬೇಕೆಂದು ಮನವಿ ಮಾಡಿದರು.
ಎಪಿಎಂಸಿ ಸದಸ್ಯ ರಮೇಶ ನಾಯಕ, ರೈತ ಸಂಘದ ಅಧ್ಯಕ್ಷ ಕೃಷ್ಣ ಮೂರ್ತಿ ಲಮಾಣಿ, ಡಾಕಪ್ಪ ಲಮಾಣಿ, ಬೀರಪ್ಪ ಲಮಾಣಿ, ವಸಂತ ಲಮಾಣಿ, ಬೀರೆಪ್ಪ ಲಮಾಣಿ, ಗೋಪಾಲ ಲಮಾಣಿ, ದುಗ್ಗಪ್ಪ ಲಮಾಣಿ, ಲಕ್ಷ್ಮಣ ಲಮಾಣಿ, ಲಾಲಪ್ಪ ಲಮಾಣಿ, ಸಂಜಯಕುಮಾರ ಲಮಾಣಿ, ಕುಬೇರ ಚವ್ವಾಣ, ಸೋಮಪ್ಪ ಚವ್ವಾಣ, ಪರಮೇಶ ಲಮಾಣಿ, ರಮೇಶ ಲಮಾಣಿ, ಲಕ್ಷ್ಮಣ ನಾಯಕ, ಪ್ರಕಾಶ ಲಮಾಣಿ, ವಿಶ್ವ ಲಮಾಣಿ, ನಾಗರಾಜ ಲಮಾಣಿ, ವೆಂಕಟೇಶ ಲಮಾಣಿ, ರವಿ ಲಮಾಣಿ, ಅಶೋಕ ಲಮಾಣಿ, ಹನುಮಂತ ಬಸಲೀಕಟ್ಟಿ, ರಮೇಶ ಎಲ್ ಲಮಾಣಿ, ಸೋಮಣ್ಣ ಲಮಾಣಿ, ಕುಮಾರ ಲಮಾಣಿ ಇದ್ದರು.