ಚಿಂಚೋಳಿ: ತಾಲೂಕಿನ ರಟಕಲ್ ಗ್ರಾಮದ ಐತಿಹಾಸಿಕ ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ತೆಂಗಿನಕಾಯಿ ಒಡೆಯುವ ಗುತ್ತಿಗೆ ಹರಾಜು ಪ್ರಕ್ರಿಯೆ ರದ್ದುಪಡಿಸುವಂತೆ ಒತ್ತಾಯಿಸಿ ತಾಲೂಕು ವೀರಶೈವ ಸಮಾಜ ವತಿಯಿಂದ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ಅನೇಕ ವರ್ಷಗಳಿಂದ ಅರ್ಚಕರು ದೇವರ ಪೂಜೆ ಮಾಡುತ್ತಾ ಬರುತ್ತಿದ್ದು ಮತ್ತು ಉಪಜೀವನಕ್ಕಾಗಿ ಭಕ್ತರು ನೀಡಿದ ತೆಂಗಿನಕಾಯಿ ಒಡೆದು ಹಸಿ ತೆಂಗನ ಕಾಯಿ ಒಣಗಿಸಿ ಮಾರಾಟ ಉಪಜೀವನ ಸಾಗಿಸುತ್ತಿದ್ದ ಕುಟುಂಬದ ಮೇಲೆ ಸರಕಾರ ಹೊಟ್ಟೆ ಮೇಲೆ ಕಬ್ಬಿಣದ ಬರೆ ಹಾಕಿದೆ.
ಅನೇಕ ವರ್ಷಗಳಿಂದ ದೇವರ ಪೂಜೆ ಮತ್ತು ಹೋಮ ಹವನ ಮಾಡುತ್ತಿದ್ದ ಸರಕಾರದಿಂದ ಯಾವುದೇ ವೇತನ ಪಡೆದುಕೊಳ್ಳದೇ ಮಾಡುತ್ತಿದ್ದ ಅರ್ಚಕರಿಗೆ ಇನ್ನು ಮುಂದೆ ತೆಂಗಿನ ಕಾಯಿ ಒಡೆಯುವುದನ್ನು ನಿಲ್ಲಿಸಿ ಬೇರೆಯವರಿಗೆ ಗುತ್ತಿಗೆ ನೀಡಲು ಹರಾಜು ಮಾರಾಟ ಮಾಡಲಾಗಿದೆ. ಇದರಿಂದ ಅರ್ಚಕರ ಕುಟುಂಬ ನಿರ್ವಹಣೆಗೆ ಭಾರಿ ತೊಂದರೆ ಆಗಲಿದೆ.
ಹಸಿ ತೆಂಗಿನ ಕಾಯಿ ಮಾರಾಟ ಗುತ್ತಿಗೆ ಪ್ರಕ್ರಿಯೆಯನ್ನು ಕೂಡಲೇ ರದ್ದುಪಡಿಸಬೇಕೆಂದು ತಾಲೂಕು ವೀರಶೈವ ಮುಖಂಡರು ಸರಕಾರಕ್ಕೆ ಒತ್ತಾಯಿಸಿದ್ದಾರೆ. ಒಂದು ವೇಳೆ ಹರಾಜು ಪ್ರಕ್ರಿಯೇ ಕೂಡಲೇ ರದ್ದುಗೊಳಿಸದಿದ್ದರೆ ರಟಕಲ್ ದೇವಸ್ಥಾನ ಬಳಿ ತಾಲೂಕು ವೀರಶೈವ ಸಮಾಜದಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಅಗ್ರಹಿಸಿ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ಕಂದಾಯ ನಿರೀಕ್ಷಕ ಸುಭಾಶ ನಿಡಗುಂದಾ ಅವರಿಗೆ ಮನವಿ ಪತ್ರ ಸ್ವೀಕರಿಸಿದರು. ಅಧ್ಯಕ್ಷ ಸಂಜೀವಕುಮಾರ ಪಾಟೀಲ, ನಾಗರಾಜ ಸುಭಾಶ ಸೀಳೀನ್, ಆನಂದ ಹಿತ್ತಲ್, ಶಂಕರ ಶಿವಪೂರಿ, ನಾಗರಾಜ ಮಲಕೂಡ, ನಾಗೇಶ ಸುಂಕದ, ಸುನೀಲಕುಮಾರ ಮನ್ನಳ್ಳಿ, ಹಣಮಂತ ಕೊರೆ, ವಿಶ್ವನಾಥರೆಡ್ಡಿ ಇದ್ದರು