Advertisement
ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾಯಿಸಿದ ಕಾರ್ಯಕರ್ತರು, ಪ್ರತಿಭಟನೆ ನಡೆಸಿ ಸರ್ಕಾರ ಮತ್ತು ಗ್ರಾಮ ಪಂಚಾಯಿತಿ ವಿರುದ್ಧ ಘೋಷಣೆ ಕೂಗಿದರು.
Related Articles
Advertisement
ಹಾಗೆಯೇ ಮಂಡ್ಯ ತಾಲೂಕು ಹುಲಿವಾನ ಜನತಾ ಕಾಲೋನಿಯಲ್ಲಿ ಸುಮಾರು 50 ವರ್ಷಗಳಿಂದ ಸುಮಾರು 100 ಪರಿಶಿಷ್ಟ ಜಾತಿಯ ಕುಟುಂಬಗಳು ವಾಸವಾಗಿರುತ್ತಾರೆ.
ಜಮೀನು ಅಗತ್ಯ: ಸರ್ಕಾರ ನೀಡಿರುವ ನಿವೇಶನಗಳಲ್ಲಿ ಮನೆ ಕಟ್ಟಿಕೊಂಡು ವಾಸ ಮಾಡುತ್ತಿರುತ್ತಾರೆ. ಇವರಿಗೆ ಯಾವುದೇ ಜಮೀನು ಇರುವುದಿಲ್ಲ. ಇವರು ಕೂಲಿ ನಂಬಿಕೊಂಡೇ ಜೀವನ ನಡೆಸುತ್ತಿದ್ದಾರೆ. ಇವರಿಗೆ ಶುಭ ಸಮಾರಂಭ, ಸಭೆ ನಡೆಸಲು ಜಮೀನು ಇರುವುದಿಲ್ಲ.
ಆದಕಾರಣ ಜನಾಂಗದ ಅಭಿವೃದ್ಧಿ ಮತ್ತು ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳಲು, ಗುಡಿ ಕೈಗಾರಿಕೆ ಮಾಡಿ ಅಭಿವೃದ್ಧಿ ಹೊಂದಲು 20 ಗುಂಟೆ ಜಮೀನು ಅವಶ್ಯಕತೆ ಇದ್ದು, ಈ ಜಮೀನನ್ನು ಇಂತಹ ಅಭಿವೃದ್ಧಿ ಕಾರ್ಯಗಳಿಗೆ ಮೀಸಲಿಡಬೇಕು ಎಂದು ಪ್ರತಿಭಟನಾಕಒತ್ತಾಯಿಸಿದರು.
ಸವರ್ಣೀಯರ ಅಡ್ಡಿ: ಹುಲಿವಾನ ಗ್ರಾಮದ ಸರ್ವೆ ನಂ. 105ರಲ್ಲಿ 1.23 ಎಕರೆ ಜಾಗವಿದ್ದು, ಅದರಲ್ಲಿ ಕೊಡಿಸಿಕೊಡಬೇಕು. ಈ ಮೂಲಕ ಕೇಳಿಕೊಳ್ಳುತ್ತೇವೆ. ಈ ಹಿಂದೆ ಸುಮಾರು ಬಾರಿ ಅರ್ಜಿ ಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲ. ಗ್ರಾಮದ ಸವರ್ಣಿಯರು ಅದಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಎರಡೂ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತುರ್ತಾಗಿ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದರು.
ಜಾಗ ಹಂಚಿಕೆ: ಮದ್ದೂರು ತಾಲೂಕು ಗೆಜ್ಜಲಗೆರೆ ಗ್ರಾಮದ ಸರ್ವೆ ನಂ. 267ರ ಜಾಗವನ್ನು ಸರ್ವೆ ಮಾಡಿಸಿ ಹದ್ದುಬಸ್ತು ಮಾಡಿಸಬೇಕು. ಅಕ್ರಮ ಖಾತೆಯನ್ನು ರದ್ದುಮಾಡಬೇಕು. ನಿವೇಶನ ರಹಿತ ಎಡಗೈ ಜನಾಂಗದ ಉಳಿದ ಜಾಗವನ್ನು ಹಂಚಿಕೆ ಮಾಡಬೇಕು. ಬಾಬು ಜಗಜೀವನರಾಂ ಭವನಕ್ಕೆ ಮಂಜೂರು ಮಾಡಬೇಕು. ಹುಲಿವಾನ ಜನತಾ ಕಾಲೋನಿಯ ಜನರಿಗೆ ಬಾಬು ಜಗಜೀವನರಾಂ ಭವನ ಹಾಗೂ ಆರ್ಥಿಕ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಸರ್ವೆ ನಂ. 105ರಲ್ಲಿ 20 ಗುಂಟೆ ಜಮೀನು ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಅಂಬುಜಿ, ಚಂದ್ರಕುಮಾರ್ ಸಿ.ಎಚ್.ಆರ್. ಕೃಷ್ಣ, ವೈ.ಜೆ.ಸ್ವಾಮಿ, ಶಂಕರ್, ನವೀನ್, ಭಾನುಪ್ರಕಾಶ್, ರಮಾನಂದ ಮತ್ತಿತರರು ಭಾಗವಹಿಸಿದ್ದರು.