Advertisement

ದೇವಾಲಯಕ್ಕೆ ಅಧಿಕಾರಿ ನೇಮಿಸಲು ಮನವಿ 

11:11 AM Jun 24, 2017 | Team Udayavani |

ಬೆಂಗಳೂರು: ಮಾಗಡಿ ರಸ್ತೆಯ ಪೊಲೀಸ್‌ ಕಾಲೋನಿಯ ಸಾರ್ವಜನಿಕ ಉದ್ಯಾನವನದಲ್ಲಿರುವ ಶ್ರೀ ಸಾಯಿಬಾಬಾ ದೇವಾಲಯವನ್ನು ಮುಜರಾಯಿ ಇಲಾಖೆಯ ಅಧೀನಕ್ಕೆ ಪಡೆದುಕೊಂಡು ಆಡಳಿತಾಧಿಕಾರಿ ನೇಮಿಸಲು ರಾಜ್ಯಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಹೈಕೋರ್ಟ್‌ಗೆ  ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.

Advertisement

ಎಸ್‌. ರವಿಚಂದ್ರ ಎಂಬುವವರು ಸಲ್ಲಿಸಿರುವ ಈ ಅರ್ಜಿವಿಚಾರಣೆಯನ್ನು ಶುಕ್ರವಾರ ನಡೆಸಿದ ನ್ಯಾಯಮೂರ್ತಿ ಹೆಚ್‌.ಜಿ ರಮೇಶ್‌ ಹಾಗೂ ಕೆ.ಎಸ್‌ ಮುದ್ಗಲ್‌  ಅವರಿದ್ದ ವಿಭಾಗೀಯ ಪೀಠ, ಅರ್ಜಿ ಸಂಬಂಧ ವರದಿ ನೀಡುವಂತೆ ರಾಜ್ಯಸರ್ಕಾರ, ಮುಜರಾಯಿ ಇಲಾಖೆಯ ಆಯುಕ್ತರಿಗೆ ನೋಟೀಸ್‌ ಜಾರಿಗೊಳಿಸಿ ಜೂನ್‌ 29ಕ್ಕೆ ವಿಚಾರಣೆ ಮುಂದೂಡಿತು.

ಪೊಲೀಸ್‌ ಕಾಲೋನಿಯಲ್ಲಿ ಸಾರ್ವಜನಿಕರ ಉಪಯೋಗಕ್ಕೆ ಮೀಸಲಿಡಲಾಗಿರುವ 1 ಎಕರೆ ವಿಶಾಲ ಪ್ರದೇಶದ ಉದ್ಯಾನವನದಲ್ಲಿ ಸಾಯಿಬಾಬಾ ದೇವಾಲಯ ನಿರ್ಮಿಸಲಾಗಿದೆ. ಇದರ ಉಸ್ತುವಾರಿ ನೋಡಿಕೊಳ್ಳುತ್ತಿರುವ ಶ್ರೀ ಸಾಯಿಬಾಬಾ ಗಣಪತಿ ದೇವಾಲಯ ಟ್ರಸ್‌, ದೇವಾಲಯಕ್ಕೆ ಬರುವ ಆದಾಯದ ಬಗ್ಗೆ ಲೆಕ್ಕಪತ್ರಗಳನ್ನು ನಿರ್ವಹಣೆ ಮಾಡುತ್ತಿಲ್ಲ. ಹೀಗಾಗಿ ಸಾಕಷ್ಟು  ಪ್ರಮಾಣದಲ್ಲಿ ಭಕ್ತರ ದೇಣಿಗೆ ದುರ್ಬಳಕೆಯಾಗುತ್ತಿದೆ.  

ಈ  ಸಂಬಂಧ ಬಿಬಿಎಂಪಿ ಹಾಗೂ ಮುಜರಾಯಿ ಇಲಾಖೆಗೆ ದೂರು ನೀಡಿದ್ದರೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಸಚಿವ ಎಂ.ಟಿ ಕೃಷ್ಣಪ್ಪ, ಶಾಸಕ ಪ್ರಿಯಕೃಷ್ಣ, ಮಾಜಿ ಸಚಿವ  ವಿ. ಸೋಮಣ್ಣ  ಹಸ್ತಕ್ಷೇಪ ಮಾಡುತ್ತಿದ್ದು ಮುಜರಾಯಿ ಇಲಾಖೆ ವಶಕ್ಕೆ ಸಿಗದಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.  

Advertisement

Udayavani is now on Telegram. Click here to join our channel and stay updated with the latest news.

Next