Advertisement

ಮೂಲ ಸೌಲಭ್ಯಗಳಿಗಾಗಿ ಮನವಿ ಸಲ್ಲಿಕೆ

12:07 PM Jun 05, 2020 | Suhan S |

ಯರಗಟ್ಟಿ: ಸ್ಥಳೀಯ ದುರ್ಗ ಮುರಗಿ ಜನಾಂಗ ವಾಸವಾಗಿರುವ ಅಂಬೇಡ್ಕರ್‌ ನಗರ ಕಾಲೋನಿಯಲ್ಲಿ ಸೌಲಭ್ಯಗಳ ಕೊರತೆ ಇದೆ. ಹತ್ತಾರು ಬಾರಿ ಪಿ.ಡಿ.ಒಗೆ ಭೇಟಿಯಾಗಿ ಸಮಸ್ಯೆ ವಿವರಿಸಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

Advertisement

ಉಪ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದ ಕಾಲೋನಿ ನಿವಾಸಿಗಳು, ಕಾಲೋನಿಯ 75ರಲ್ಲಿ 54 ಕ್ಕೂ ಹೆಚ್ಚು ದುರ್ಗ ಮುರಗಿ ಕುಟುಂಬಗಳು ಇವೆ. ನಗರದಲ್ಲಿ ಗಟಾರು, ರಸ್ತೆ, ಕುಡಿಯುವ ನೀರು, ಶೌಚಾಲಯಗಳ ಸಮಸ್ಯೆಯಿದೆ ಎಂದು ಮನವಿಯಲ್ಲಿ ಹೇಳಿದ್ದಾರೆ.

ತಮ್ಮ ಬೇಡಿಕೆ ಬೇಗನೆ ಈಡೇರದಿದ್ದಲ್ಲಿ ಗ್ರಾಪಂ ಎದುರು ಪ್ರತಿಭಟನೆ ಮಾಡುವುದಾಗಿ ಮನವಿಯಲ್ಲಿ ಎಚ್ಚರಿಸಲಾಗಿದೆ. ಕಾಲೋನಿ ನಿವಾಸಿಗಳಾದ ಹಣಮಂತ ಚೆನ್ನದಾಸರ, ಈರಣ್ಣಾ, ಯಲ್ಲಪ್ಪಾ, ದುರಗಪ್ಪಾ, ಮಾರುತಿ, ರಮೇಶ, ಅಬೀದಬೇಗ, ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next