Advertisement

Guarantee ಯಂತೆ ರೈತಪರ ಯೋಜನೆ ಘೋಷಿಸಲು ರೈತ ಮುಖಂಡರ ಮನವಿ

12:53 AM Feb 12, 2024 | Team Udayavani |

ಬೆಂಗಳೂರು: ರಾಜ್ಯ ಸರಕಾರ ಜಾರಿ ಗೊಳಿಸಿರುವ ಗ್ಯಾರಂಟಿ ಯೋಜನೆಗಳು ರೈತ ಮಹಿಳೆ, ರೈತರ ಕುಟುಂಬಕ್ಕೆ ಆರ್ಥಿಕ ಶಕ್ತಿ ತುಂಬುವುದರ ಜತೆಗೆ ಇಡೀ ದೇಶದಲ್ಲೇ ಮಾದರಿ ಎನಿಸಿದೆ. ಅದೇ ರೀತಿ ದೇಶಕ್ಕೇ ಮಾದರಿ ಯಾಗಬಲ್ಲ ರೈತಪರ ಯೋಜನೆಯನ್ನು ಮುಂದಿನ ಬಜೆಟ್‌ನಲ್ಲಿ ಘೋಷಿಸುವಂತೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಗೆ ರೈತ ಮುಖಂಡರು ಮನವಿ ಮಾಡಿದರು.

Advertisement

ವಿಧಾನಸೌಧದ ಸಮ್ಮೇಳನ ಸಭಾಂಗಣ ದಲ್ಲಿ ರವಿವಾರ ನಡೆದ ಬಜೆಟ್‌ ಪೂರ್ವ ಭಾವಿ ಸಭೆಯಲ್ಲಿ ಪಾಲ್ಗೊಂಡಿದ್ದ ರೈತ ಮುಖಂಡರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯ ಸರಕಾ ರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿ ಗೊಳಿಸಿರುವುದರ ಸಂಬಂಧ ಅಭಿನಂದನೆ ಸಲ್ಲಿಸಿದರು. ಬಳಿಕ ತಮ್ಮ ಬೇಡಿಕೆಗಳನ್ನು ಸಿಎಂ ಮುಂದೆ ಮಂಡಿಸಿದರು.

ರೈತರ ಮತ್ತು ಜನ ಸಮುದಾಯದ ಪೌಷ್ಟಿಕತೆ ಹೆಚ್ಚಿಸುವ ದಿಕ್ಕಿನಲ್ಲಿ ಕಾರ್ಯ ಕ್ರಮ ಗಳನ್ನು ರೂಪಿಸುವಂತೆ ರೈತ ಮುಖಂಡರು ಸಲಹೆ ನೀಡಿದರು. ಈ ಸಲಹೆ ಯನ್ನು ಗಂಭೀರವಾಗಿ ತೆಗೆದು ಕೊಂಡಿರುವುದಾಗಿ ತಿಳಿಸಿ ಅಗತ್ಯ ಕ್ರಮ ವಹಿಸುವ ಭರವಸೆ ಯನ್ನು ಸಿಎಂ ನೀಡಿದರು.

ಇವೆಲ್ಲದರ ಜತೆಗೆ ಕೃಷಿ ಇಲಾಖೆ ಅಧಿಕಾರಿಗಳು ಬಿತ್ತನೆ ಬೀಜ, ಗೊಬ್ಬರ ವಿತರಿಸುವುದಕ್ಕೆ ಮಾತ್ರ ಸೀಮಿತರಾಗದೆ ಇವತ್ತಿನ ಕೃಷಿ ಬೇಡಿಕೆಗಳಿಗೆ ತಕ್ಕಂತೆ ಅಪ್‌ಡೇಟ್‌ ಆಗಬೇಕು. ಕೆರೆಗಳ ಅಭಿವೃದ್ಧಿ, ಮಂಡ್ಯ ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ಸರಕಾರ ಹಣ ಸಹಾಯ ನೀಡಿರು ವುದನ್ನು ಸ್ವಾಗತಿಸಿ ಕಾರ್ಖಾನೆಯನ್ನು ಸರಕಾರವೇ ನಡೆಸಲು ಮುಂದಾಗ ಬೇಕು. ರೈತ ಯುವಕ-ಯುವತಿಯರಿಗೆ ಭರವಸೆ ಹುಟ್ಟಿಸುವ ಕಾರ್ಯಕ್ರಮವನ್ನು ಬಜೆಟ್‌ನಲ್ಲಿ ಘೋಷಿಸಬೇಕು ಎನ್ನು ವುದೂ ಸಹಿತ ನೂರಕ್ಕೂ ಅಧಿಕ ಬೇಡಿಕೆ ಗಳನ್ನು ರೈತ ಮುಖಂಡರು ಮುಖ್ಯ ಮಂತ್ರಿಗಳ ಮುಂದಿರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next