Advertisement

ಮದ್ಯದಂಗಡಿಗೆ ಅನುಮತಿ ನೀಡದಂತೆ ಮನವಿ

08:00 AM Aug 03, 2017 | Team Udayavani |

ಕಡಬ: ಬಿಳಿನೆಲೆ ಗ್ರಾ.ಪಂ.ವ್ಯಾಪ್ತಿಯಲ್ಲಿ ಹೊಸದಾಗಿ ಮದ್ಯದಂಗಡಿ ತೆರೆಯಲು ಅವಕಾಶ ನೀಡಬಾರದೆಂದು ಆಗ್ರಹಿಸಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿಳಿನೆಲೆ ವಲಯದ ಒಕ್ಕೂಟದ ಸದಸ್ಯರು ಮಂಗಳವಾರ ಬಿಳಿನೆಲೆ ಗ್ರಾ.ಪಂ. ಕಚೇರಿಗೆ ಮೆರವಣಿಗೆಯಲ್ಲಿ ತೆರಳಿ ಮನವಿ ಸಲ್ಲಿಸಿದರು.

Advertisement

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಜನಜಾಗೃತಿ ವೇದಿಕೆಯ ಮೂಲಕ ಪ್ರತಿ ಗ್ರಾಮಗಳಲ್ಲಿ  ದುಶ್ಚಟಗಳ ವಿರುದ್ಧ ಜಾಗೃತಿ ಮೂಡಿಸುವುದರೊಂದಿಗೆ ಮದ್ಯವರ್ಜನ ಶಿಬಿರಗಳನ್ನು ನಡೆಸಿ ಪಾನಮುಕ್ತ ಸಮಾಜದ ನಿರ್ಮಾಣಕ್ಕಾಗಿ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಪಣ ತೊಟ್ಟಿದ್ದಾರೆ. ಇಡೀ ಸಮಾಜವೇ ಅವರೊಂದಿಗೆ ಕೈಜೋಡಿಸಿದೆ. ಬಿಳಿನೆಲೆ ಗ್ರಾಮದಲ್ಲಿಯೂ ಈ ನಿಟ್ಟಿನಲ್ಲಿ ಮದ್ಯವರ್ಜನ ಶಿಬಿರ, ಸ್ವಾಸ್ಥÂ ಸಂಕಲ್ಪ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಗ್ರಾಮದ ಜನರ ನೆರವಿನಿಂದ ನಡೆಸಲಾಗಿದೆ. ಇದೀಗ ನೆಟ್ಟಣದಲ್ಲಿ  ಮುಚ್ಚುಗಡೆಯಾಗಿರುವ ಮದ್ಯದಂಗಡಿಯನ್ನು ಬಿಳಿನೆಲೆ ಗ್ರಾಮದ ಮೇರುಂಜಿಯಲ್ಲಿ ತೆರೆಯಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಸುದ್ದಿ ಹರಡಿದೆ. ಗ್ರಾಮದ ಹಿತ ದೃಷ್ಟಿಯಿಂದ ಈ ವ್ಯಾಪ್ತಿಯಲ್ಲಿ ಯಾವುದೇ ಹೊಸ ಮದ್ಯದಂಗಡಿ ತೆರೆಯಲು ಅನುಮತಿ ನೀಡಬಾರದು ಎಂದು ಒಕ್ಕೂಟದ ಸದಸ್ಯರು ಹಾಗೂ ಸಾರ್ವಜನಿಕರು ಗ್ರಾ.ಪಂ. ಎದುರು ನಡೆದ ಸಭೆಯಲ್ಲಿ ಆಗ್ರಹಿಸಿದರು.

ಜನಜಾಗೃತಿ ವೇದಿಕೆ ಮಾಜಿ ವಲಯಾಧ್ಯಕ್ಷ, ತಾ.ಪಂ. ಸದಸ್ಯ ಗಣೇಶ್‌ ಕೈಕುರೆ, ಬಿಳಿನೆಲೆ ಒಕ್ಕೂಟಗಳ ವಲಯಾಧ್ಯಕ್ಷ ಭವಾನಿಶಂಕರ್‌, ಗ್ರಾಮಾಭಿವೃದ್ಧಿ ಯೋಜನೆಯ ಬಿಳಿನೆಲೆ ವಲಯ ಮೇಲ್ವಿಚಾರಕ ರಾಜು ಗೌಡ, ಬಿಳಿನೆಲೆ ಒಕ್ಕೂಟದ ಅಧ್ಯಕ್ಷ ಗುಡ್ಡಪ್ಪ ಗೌಡ ಅಮೈ, ಐತ್ತೂರು ಒಕ್ಕೂಟದ ಅಧ್ಯಕ್ಷ ಶೇಷಪ್ಪ ಗೌಡ, ಕೈಕಂಬ ಒಕ್ಕೂಟದ ಅಧ್ಯಕ್ಷ ನಾಗರಾಜ್‌ ಎ., ಕೊಂಬಾರು ಒಕ್ಕೂಟದ ಅಧ್ಯಕ್ಷ ಲಿಂಗಪ್ಪ ಗೌಡ, ಸೇವಾ ಪ್ರತಿನಿಧಿಗಳಾದ ಹರಿಣಿ ಬಿಳಿನೆಲೆ-ಐತ್ತೂರು, ಪರಮೇಶ್ವರ ಕೊಂಬಾರು, ವಿನೋದ್‌ ಕೆ.ಸಿ. ಕೈಕಂಬ ಮುಂತಾದವರು ಉಪಸ್ಥಿತರಿದ್ದರು. ಬಿಳಿನೆಲೆ, ಐತ್ತೂರು, ಕೈಕಂಬ ಹಾಗೂ ಕೊಂಬಾರು ಒಕ್ಕೂಟದ  ವತಿಯಿಂದಲೂ ಪ್ರತ್ಯೇಕ ಮನವಿ ಸಲ್ಲಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next