Advertisement
ಕಾಪು ಕ್ಷೇತ್ರ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಗೆ ಆಗಮಿಸಿದ್ದ ಸಂಸದ ನಳಿನ್ ಅವರನ್ನು ಭೇಟಿ ಮಾಡಿದ ಸಂಘದ ಪದಾಧಿಕಾರಿಗಳಾದ ಗುರುದಾಸ್ ಬಂಗೇರ, ಯಶೋಧರ್, ಬಾಬು ಕುಬಾಲ್, ಮೋಹನ್ ಬೆಂಗ್ರೆ, ರಮೇಶ್ ಕುಂದರ್ ನೇತೃತ್ವದ ನಿಯೋಗವು ಪಸೀರ್ನ ಮೀನುಗಾರಿಕೆ ನಿಷೇಧವಾದಲ್ಲಿ ಎದುರಾಗುವ ತೊಂದರೆಗಳ ಬಗ್ಗೆ ವಿವರಿಸಿ, ಈ ಬಗ್ಗೆ ಕೇಂದ್ರ ಸರಕಾರ ವಿಷಯ ಮನವರಿಕೆ ಮಾಡುವಂತೆ ಮನವಿ ಮಾಡಿತು.
ಸರಕಾರ ವಿಧಿಸಿದ್ದ ಷರತ್ತುಗಳ ಅನ್ವಯ ಲೈಟ್ ಫಿಶಿಂಗ್ ನಡೆಸಲಾಗುತ್ತಿದೆ. ಮೀನುಗಾರಿಕೆಗೆ ಪೂರಕವಾಗುವಂತೆ ಹ್ಯಾಲೋಜಿನ್ ಲೈಟ್ ಬಳಸಿ ಮೀನುಗಾರಿಕೆ ನಡೆಸಲು ಕೇಂದ್ರ ಸರಕಾರ 2 ವರ್ಷಗಳ ಹಿಂದೆ ಆದೇಶ ನೀಡಿದ್ದು, ಷರತ್ತುಗಳನ್ನು ಪಾಲಿಸಿ ಮೀನುಗಾರಿಕೆ ನಡೆಸಲಾಗುತ್ತಿದೆ. ಸಣ್ಣಮೀನು ನಾಶ ಆರೋಪ ಸತ್ಯಕ್ಕೆ ದೂರ: ರಾಮಚಂದ್ರ ಮೀನುಗಾರ ಮುಖಂಡ ರಾಮಚಂದ್ರ ಬೈಕಂಪಾಡಿ ಮಾತನಾಡಿ, ಕೇಂದ್ರದ ನಿರ್ದೇಶನದಂತೆ, ಕರ್ನಾಟಕ ಸರಕಾರ ನೀಡಿರುವ ಸೂಚನೆಯಂತೆ ನಾಡದೋಣಿ, ಕೈರಂಪಣಿ, ಕಂತುಬಲೆ ಇನ್ನಿತರ ಸಣ್ಣ ಮೀನುಗಾರಿಕೆಗೆ ತೊಂದರೆಯಾಗದಂತೆ ಲೈಟ್ ಪಿಶಿಂಗ್ ನಡೆಸಲಾಗುತ್ತಿದೆ. ಇದರಲ್ಲಿ 45 ಎಂಎಂ ಬಲೆಯನ್ನು ಅಳವಡಿಸುವುದರಿಂದ ಸಣ್ಣ ಗಾತ್ರದ ಮೀನುಗಳು ಪಾರಾಗುತ್ತವೆ. ಹೀಗಾಗಿ ಲೈಟ್ ಫಿಶಿಂಗ್‌ನಿಂದ ಸಣ್ಣ ಮೀನುಗಳು, ಮೀನುಮರಿ ನಾಶವಾಗುತ್ತವೆ ಎನ್ನು ವುದು ಸತ್ಯಕ್ಕೆ ದೂರವಾದ ವಿಷಯ ಎಂದು ಸ್ಪಷ್ಟಪಡಿಸಿದರು.
Related Articles
Advertisement
ಕೆಲವು ಸಮಯದವರೆಗೆ ಲೈಟ್ ಫೀಶಿಂಗ್ ನಿಲ್ಲಿಸುವಂತೆ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಆದೇಶವನ್ನು ಕೇಂದ್ರ ಸರಕಾರಕ್ಕೂ ಕಳುಹಿಸಿಕೊಟ್ಟಿದೆ. ಕೇಂದ್ರ ಸರಕಾರ ಅದೇ ಆದೇಶವನ್ನು ಹೊರಡಿಸಿದೆ. ಎರಡೂ ಮನವಿಗಳನ್ನು ಮತ್ತು ಆದೇಶಗಳನ್ನು ಜತೆಗಿರಿಸಿ ಕೇಂದ್ರದ ಜತೆಗೆ ಮಾತನಾಡುತ್ತೇನೆ. ಎರಡೂ ಬಗೆಯ ಮೀನುಗಾರರನ್ನು ಸೇರಿಸಿಕೊಂಡು ಸಮಸ್ಯೆಯನ್ನು ಹೇಗೆ ಬಗೆಹರಿಸಬಹುದೆನ್ನುವುದರ ಬಗ್ಗೆ ಚರ್ಚಿಸುವುದಾಗಿ ತಿಳಿಸಿದ್ದಾರೆ.
ಲಾಲಾಜಿ ಆರ್. ಮೆಂಡನ್, ಬಿಜೆಪಿ ಮುಖಂಡರಾದ ಉದಯ್‌ಕುಮಾರ್ ಶೆಟ್ಟಿ, ಕುತ್ಯಾರು ನವೀನ್ ಶೆಟ್ಟಿ, ಸುರೇಶ್ ಪಿ. ಶೆಟ್ಟಿ ಗುರ್ಮೆ, ಯಶಪಾಲ್ ಸುವರ್ಣ, ಶ್ಯಾಮಲಾ ಕುಂದರ್, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಶಿಲ್ಪಾ ಸುವರ್ಣ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.