Advertisement

ಸಮುದಾಯ ಭವನಕ್ಕೆ ಅನುದಾನ ಕೋರಿಕೆ

02:21 PM Mar 16, 2022 | Team Udayavani |

ಚಿತ್ತಾಪುರ: ತಾಲೂಕು ಕೇಂದ್ರ ಸ್ಥಾನದಲ್ಲಿ ಶ್ರೀ ನಾರಾಯಣ ಗುರು ಸಮುದಾಯ ಭವನ ನಿರ್ಮಾಣಕ್ಕೆ ಒಂದು ಕೋಟಿ ರೂ. ಅನುದಾನ ನೀಡಬೇಕು ಎಂದು ತಾಲೂಕು ಆರ್ಯ ಈಡಿಗ ಸಮಾಜದ ಮುಖಂಡರ ನಿಯೋಗ ಮಾಜಿ ಸಚಿವ, ಶಾಸಕ ಪ್ರಿಯಾಂಕ್‌ ಖರ್ಗೆಗೆ ಬೆಂಗಳೂರಿನ ನಿವಾಸದಲ್ಲಿ ಭೇಟಿ ಮಾಡಿ, ಮನವಿ ಸಲ್ಲಿಸಿದರು.

Advertisement

ಈ ವೇಳೆ ಶಾಸಕ ಪ್ರಿಯಾಂಕ್‌ ಖರ್ಗೆ ಮಾತನಾಡಿ, ನಾನು ಎಲ್ಲ ಸಮಾಜಗಳಿಗೆ ಸಮುದಾಯ ಭವನ ಮಂಜೂರಿ ಮಾಡಿ ಅಗತ್ಯ ಅನುದಾನ ನೀಡಿದ್ದೇನೆ. ಈಗ ಉಳಿದಿರುವುದು ಈಡಿಗ ಸಮಾಜ ಮಾತ್ರ. ಹೀಗಾಗಿ ಸಮಾಜದ ಅಭಿವೃದ್ಧಿಗೆ ಸಿದ್ಧನಿದ್ದೇನೆ. ಪಟ್ಟಣದಲ್ಲಿ ನಾರಾಯಣ ಗುರು ಸಮುದಾಯ ಭವನ ನಿರ್ಮಾಣಕ್ಕೆ ಈಗ 50 ಲಕ್ಷ ರೂ. ಅನುದಾನ ನೀಡಲು ಕ್ರಮ ಕೈಗೊಳ್ಳುತ್ತೇನೆ. ನಂತರದ ದಿನಗಳಲ್ಲಿ ಇನ್ನೂ 50 ಲಕ್ಷ ಅನುದಾನ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

ನಿಯೋಗದಲ್ಲಿ ಈಡಿಗ ಸಮಾಜದ ಮುಖಂಡರಾದ ಶಂಕರಗೌಡ ರಾವೂರಕರ್‌, ಕಾಶಣ್ಣ ಗುತ್ತೇದಾರ, ಕಾಶಿನಾಥ ಗುತ್ತೇದಾರ, ಶ್ರೀಶೈಲ ಗುತ್ತೇದಾರ, ಶ್ರೀಮಂತ ಗುತ್ತೇದಾರ, ಹಣಮಯ್ಯ ಗುತ್ತೇದಾರ, ಶಿವರಾಜ ಗುತ್ತೇದಾರ ಹಾಗೂ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next