Advertisement

ನೇಕಾರರ ಸಮಸ್ಯೆ ಪರಿಹಾರಕ್ಕೆ ಆಗ್ರಹ

12:32 PM Jan 18, 2020 | Suhan S |

ಬನಹಟ್ಟಿ: ರಾಜ್ಯದಲ್ಲಿ ನೇಕಾರಿಕೆಯನ್ನೇ ನಂಬಿ ಉಪಜೀವನ ಸಾಗಿಸುತ್ತಿರುವ ನೇಕಾರ ಸಮುದಾಯದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸಬೇಕೆಂದು ರಾಜ್ಯ ನೇಕಾರ ಸೇವಾ ಸಂಘವು ಒತ್ತಾಯಿಸಿತು. ಇಲ್ಲಿನ ತಹಶೀಲ್ದಾರ್‌ ಕಚೇರಿಯಲ್ಲಿ ಉಪತಹಶೀಲ್ದಾರ್‌ ಸಂಗಮೇಶ ಕಾಗಿಯವರರಿಗೆ ಶುಕ್ರವಾರ ಮನವಿ ಸಲ್ಲಿಸಲಾಯತು.

Advertisement

ಈ ವೇಳೆ ಮಾತನಾಡಿದ ರಾಜ್ಯಾಧ್ಯಕ್ಷ ಶಿವಲಿಂಗ ಟಿರಕಿ, ಎಲ್ಲ ರಂಗಗಳಲ್ಲಿಯೂ ನೇಕಾರ ಸಮುದಾಯ ವಂಚಿತಗೊಂಡಿವೆ. ನೇಕಾರರಿಂದಲೇ ಸಾಕಷ್ಟು ರಾಜಕೀಯ, ಆರ್ಥಿಕ ಹೀಗೆ ಹಲವಾರು ರಂಗಗಳನ್ನು ಪ್ರವೇಶ ಮಾಡಿರುವ ಜನಪ್ರತಿನಿಧಿ ಗಳು ನೇಕಾರ ಪರ ಕಾಳಜಿ ಕಿಂಚಿತ್ತೂ ವಹಿಸದೆ ನಿರ್ಲಕ್ಷಕ್ಕೆ ಕಾರಣರಾಗಿದ್ದಾರೆ. ಕೆಎಚ್‌ಡಿಸಿಗೆ ಆವೃತ್ತ ನಿಧಿ, ನೇಕಾರ ಸಮುದಾಯಕ್ಕೆ ಮೂಲ ಸೌಲಭ್ಯ, ಡಚ್‌ ಕಾಲೋನಿಯ ಕುಟುಂಬಗಳಿಗೆ ಸಿಟಿಎಸ್‌ ಉತಾರೆ, ಅಕ್ರಮ ಸಕ್ರಮಪೂರ್ಣಗೊಳಿಸುವುದು, ಗುಡಿ ಕೈಗಾರಿಕೆ ಎಂದು ಪರಿಗಣನೆ, ವಿದ್ಯುತ್‌ ಚಾಲಿತ ಮಗ್ಗಕ್ಕೆ 50 ಸಾವಿರ ರೂ. ಸಹಾಯಧನ ನೀಡುವುದು ಸೇರಿದಂತೆ ಅನೇಕ ಸಮಸ್ಯೆಗಳಿಗೆ ಸರ್ಕಾರ ತಕ್ಷಣವೇ ಸ್ಪಂದಿಸಬೇಕು. ಮುಂಬರುವ ಜ.21ರಂದು ಬೆಂಗಳೂರು ವಿಧಾನಸೌಧ ಚಲೋ ಬೃಹತ್‌ ಪ್ರತಿಭಟನಾ ರ್ಯಾಲಿ ನಡೆಯಲಿದೆ ಎಂದು ಟಿರಕಿ ತಿಳಿಸಿದರು.

ಸಂತೋಷ ಮಾಚಕನೂರ, ಶ್ರೀಶೈಲ ಮುಗಳೊಳ್ಳಿ, ಕೋಪರ್ಡೆ, ಮಲ್ಲಿಕಾರ್ಜುನ ಜೋತಾವರ, ಕೆ.ಎಸ್‌. ಮುನ್ನೋಳ್ಳಿ, ಅರ್ಜುನ ಗುರ್ಟಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next