Advertisement

ಏತ ನೀರಾವರಿಗೆ ಆಗ್ರಹ

11:11 AM Nov 10, 2021 | Team Udayavani |

ಚಿಂಚೋಳಿ: ತಾಲೂಕಿನ ಐನಾಪುರ ಏತ ನೀರಾವರಿ ಯೋಜನೆ ಮಂಜೂರಿ ಗೊಳಿಸಿ, ಜಮೀನುಗಳಿಗೆ ನೀರು ಹರಿಸಬೇಕೆಂದು ಮುಲ್ಲಾಮಾರಿ ಏತನೀರಾವರಿ ಅಭಿವೃದ್ಧಿ ಸಂಘದ ಮುಖಂಡರು ಐನಾಪುರ ಗ್ರಾಮದ ಅಂಬೇಡ್ಕರ್‌ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಶಾಸಕ ಡಾ| ಅವಿನಾಶ ಜಾಧವಗೆ ಮನವಿ ಸಲ್ಲಿಸಿದರು.

Advertisement

ಮುಲ್ಲಾಮಾರಿ ಏತ ನೀರಾವರಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಿವಾನಂದ ಮಾಲಿಪಾಟೀಲ ಪ್ರತಿಭಟನೆ ಉದ್ದೇಶಿಸಿ ಮಾತನಾಡಿ, ಐನಾಪುರ ವಲಯದಲ್ಲಿನ ಅನೇಕ ಗ್ರಾಮ ಮತ್ತು ತಾಂಡಾಗಳಲ್ಲಿ ನೀರಾವರಿ ಸವಲತ್ತುಗಳು ಇಲ್ಲದೇ ಇರುವುದರಿಂದ ರೈತರು ಕೇವಲ ಮಳೆಯಾಶ್ರಿತ ಬೆಳೆ ಮಾತ್ರ ಬೆಳೆಯುತ್ತಾರೆ ಎಂದು ಹೇಳಿದರು.

ತೋಟಗಾರಿಕೆ ಕೃಷಿ ರೈತರಿಗೆ ಅತ್ಯಂತ ಲಾಭದಾಯಕ ಉದ್ಯೋಗ ಆಗಿದೆ. ಆದ್ದರಿಂದ ಏತನೀರಾವರಿ ಅವಶ್ಯಕವಾಗಿದೆ. ಒಟ್ಟು 3701 ಹೆಕ್ಟೇರ್‌ ಪ್ರದೇಶದಲ್ಲಿ ನೀರಾವರಿ ಪ್ರಯೋಜನ ಪಡೆದುಕೊಳ್ಳಲು ಸರ್ಕಾರ ಒಟ್ಟು 205 ಕೋಟಿ ರೂ. ಅನುದಾನ ನೀಡಬೇಕೆಂದು ನೀರಾವರಿ ನಿಗಮ ಸರ್ಕಾರಕ್ಕೆ ವರದಿ ನೀಡಿದೆ ಎಂದು ಶಾಸಕರ ಗಮನಕ್ಕೆ ತಂದರು.

ಮಾರುತಿ ಗಂಜಗಿರಿ ಮಾತನಾಡಿ ದರು. ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಡಾ| ಅವಿನಾಶ ಜಾಧವ, ಬೆಳಗಾವಿ ಅಧಿವೇಶನದಲ್ಲಿ ಈ ಕುರಿತು ಪ್ರಸ್ತಾವನೆ ಮಾಡುವೆ ಎಂದರು. ಧನರಾಜ ಮಠಪತಿ, ಮಾಣಿಕ ನಾಯಕ, ವೀರಶೆಟ್ಟಿ ಹಳ್ಳಿ, ರಾಜ ಕುಮಾರ ಮಾಡಬೂಳ, ಸುಬ್ಬಣ್ಣ ಕರಗಾರ, ಕಲ್ಲಪ್ಪ, ಧೂಳಪ್ಪ ಬಾಸ, ವೆಂಕಟ ಬೆನಕೆಪಳ್ಳಿ ರಮೇಶ ಪಡಶೆಟ್ಟಿ, ಅಶೋಕ ಪಡಶೆಟ್ಟಿ, ಗೋಪಾಲ ಗಾರಂಪಳ್ಳಿ, ಪ್ರೇಮಸಿಂಗ್‌ ಜಾಧವ, ಗೌರಿಶಂಕರ ಉಪ್ಪಿನ ಹಾಗೂ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next