Advertisement

ಕಾಲೂಕು ಕೇಂದ್ರ ಘೋಷಣೆಗೆ ಮನವಿ

05:41 PM Sep 11, 2017 | Team Udayavani |

ಕೆಂಭಾವಿ: ಸರಕಾರ ಕೆಂಭಾವಿ ಪಟ್ಟಣವನ್ನು ತಾಲೂಕು ಎಂದು ಘೋಷಣೆ ಮಾಡದೇ ಇರುವುದು ಸರಿಯಲ್ಲ. ಕೆಂಭಾವಿ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ಬರುವ ಮುದನೂರು, ಅಗ್ನಿ, ಅರಕೇರಾ (ಜೆ), ಬೈಚಬಾಳ ಗ್ರಾಪಂಗಳ ಅಧ್ಯಕ್ಷರು ಆಯಾ ಗ್ರಾಮಸ್ಥರ ಪರವಾಗಿ ನಿರ್ಣಯ ಕೈಗೊಂಡು ಕೆಂಭಾವಿ ತಾಲೂಕಿಗೆ ಬೆಂಬಲಿಸಿದ್ದಾರೆ. ಕೆಂಭಾವಿಯಲ್ಲಿ ವಿಶೇಷ ತಹಶೀಲ್ದಾರ ಕಾರ್ಯಾಲಯವನ್ನು ಸ್ಥಾಪಿಸಿ ತಾಲೂಕು ಘೋಷಣೆ ಮಾಡಬೇಕೆಂದು ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ನಿಂಗನಗೌಡ ದೇಸಾಯಿ ನೇತೃತ್ವದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಕಾರ್ಯಾಲಯಕ್ಕೆ ತೆರಳಿ ಸೆ. 6ರಂದು ರಾಜ್ಯ ಸರಕಾರ ಹೊರಡಿದ ಅಧಿಸೂಚನೆಗೆ ಆಕ್ಷೇಪ ವ್ಯಕ್ತಪಡಿಸಿ ಅರ್ಜಿ ಸಲ್ಲಿಸಲಾಯಿತು.

Advertisement

ಈ ಮೇಲ್ಕಾಣಿಸಿದ ಗ್ರಾಮಗಳು ಕೆಂಭಾವಿಗೆ ಸಮೀಪವಾಗುತ್ತಿದ್ದು, ಪೊಲೀಸ್‌ ಠಾಣೆ ಮತ್ತು ಎಲ್ಲಾ ವ್ಯವಹಾರಗಳು ಕೆಂಭಾವಿಯಿಂದ ನಡೆಯುತ್ತವೆ, ಕಾರಣ ಭಾವಿ ತಾಲೂಕು ಎಂದು ಘೋಷಣೆ ಮಾಡುವಂತೆ ಜಿಲ್ಲಾಧಿಕಾರಿಗಳ
ಮುಖಾಂತರ ಮುಖ್ಯ ಮಂತ್ರಿಗಳಿಗೆ ಆಗ್ರಹಿಸಲಾಯಿತು.

ಕೆಂಭಾವಿ ವಲಯಕ್ಕೆ ಸಾಮಾಜಿಕ ನ್ಯಾಯ ಸರಕಾರದಿಂದ ದೊರೆವುತ್ತಿಲ್ಲ ಎಂದು ನಿಯೋಗದ ಸದಸ್ಯರು ಆಕ್ರೋಶ
ವ್ಯಕ್ತಪಡಿಸಿದರು.

1957ರಿಂದ ಕೆಂಭಾವಿ ತಾಲೂಕು ಕೇಂದ್ರವನ್ನಾಗಿ ಘೋಷಿಸುವಂತೆ ಒತ್ತಾಯಿಸುತ್ತಾ ಬಂದಿದ್ದೇವೆ. ಮುಖ್ಯಮಂತ್ರಿಗಳು ಸಹ ಹೊಸ ತಾಲೂಕುಗಳ ರಚನೆ ಮಾಡುವಾಗ ನಿಮ್ಮ ಪಟ್ಟಣವನ್ನು ತಾಲೂಕು ಮಾಡುವದಾಗಿ ಹೇಳಿ, ಜಿಲ್ಲಾಧಿಕಾರಿಗಳಿಂದ ವರದಿ ಸಹ ತರಸಿಕೊಂಡಿದ್ದರು. ವರದಿಯಲ್ಲಿ ಜಿಲ್ಲಾಧಿಕಾರಿಗಳ 14 ಗ್ರಾಪಂಗಳ ಸೇರ್ಪಡೆಯೊಂದಿಗೆ ಶಿಫಾರಸ್ಸು ಮಾಡಿದ್ದು ಇತ್ತು. ಸಮಿತಿ ಶಿಫಾರಸ್ಸಿನಲ್ಲಿರದ ಗ್ರಾಮಗಳನ್ನು ತಾಲೂಕು ಘೋಷಣೆ ಮಾಡಿ ಅರ್ಹತೆ ಇರುವ ಕೆಂಭಾವಿ ಪಟ್ಟಣವನ್ನು ಘೋಷಣೆಯಿಂದ ಕೈ ಬಿಟ್ಟಿದ್ದು ಸರಿಯಲ್ಲ ಎಂದು ನಿಯೋಗ ತಿಳಿಸಿತು. ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಜಿ. ಮಂಜುನಾಥ, ಕೆಂಭಾವಿ ಪಟ್ಟಣ ಪುರಸಭೆಯಾಗಿ ಮೇಲ್ದರ್ಜೆಗೇರಿದ್ದು, 14 ಗ್ರಾಪಂಗಳನ್ನು ಒಳಪಡುತ್ತಿದ್ದು ದೊಡ್ಡ ಹೊಬಳಿ ಕೇಂದ್ರವಾಗಿದೆ. ನಿಮ್ಮ ಮನವಿಯನ್ನು
ಶಿಫಾರಸ್ಸಿನೊಂದಿಗೆ ಸರಕಾರಕ್ಕೆ ಕಳುಹಿಸಲಾಗುವುದು.

ನಿಯೋಗದಲ್ಲಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಲಿಂಗನಗೌಡ ಮಾಲಿ ಪಾಟೀಲ್‌, ಕೆಂಭಾವಿ ಹಿರೇಮಠದ ಚನ್ನಬಸವ
ಶಿವಾಚಾರ್ಯರರು, ಸಿದ್ರಾಮರಡ್ಡಿ ಯಡಹಳ್ಳಿ, ವಿಜಯರಡ್ಡಿ ಪಾಟೀಲ್‌, ಶಿವರಾಜ ಬೂದೂರು, ಶರಣಪ್ಪ ಬಂಡೋಳಿ,
ನಿಂಗನಗೌಡ ಅಮಲಿಹಾಳ, ಬಸವರಾಜಪ್ಪಗೌಡ ಬೊಮ್ಮನಹಳ್ಳಿ, ಮಶಾಕಸಾಬ್‌ ಸಾಸನೂರು, ಸಿದ್ದನಗೌಡ ಪಾಟೀಲ್‌, ಸಿದ್ರಾಮರಡ್ಡಿ ಗೂಗಲ್‌, ಮುದಕಣ್ಣ ಚಿಂಚೋಳಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next