Advertisement

ಶಾಲಾ ಕಾಂಪೌಂಡ್‌ ನಿರ್ಮಾಣಕ್ಕೆ ಆಗ್ರಹ

02:54 PM Nov 18, 2019 | Suhan S |

ಕಾರಟಗಿ: ಪಟ್ಟಣದ ರಾಜೀವಗಾಂಧಿ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಆವರಣಗೋಡೆ ಇಲ್ಲದೇ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಶಾಲೆಯ ಶಿಕ್ಷಕರುಮತ್ತು ಎಸ್‌ಡಿಎಂಸಿಯವರು ಶಾಸಕರ ಬಸವರಾಜ ದಢೇಸುಗೂರು ಅವರಿಗೆ ಮನವಿ ಸಲ್ಲಿಸಿದರು.

Advertisement

ಶಾಲೆಯ ಮುಖ್ಯೋಪಾಧ್ಯಾಯ ಕೀರು ಪವಾರ ಮಾತನಾಡಿ, ಶಾಲೆಯ ನಿವೇಶನದ ವಿಸ್ತೀರ್ಣಒಂದು ಎಕರೆ ಇದ್ದು, ಶಾಲೆಯ ಅಕ್ಕಪಕ್ಕದಲ್ಲಿ ಗದ್ದೆಗಳಿದ್ದುದರಿಂದ ಗದ್ದೆಗಳಿಗೆ ಕ್ರೀಮಿನಾಶಕ ಸಿಂಪಡಿಸಿದಾಗ ಅದರ ವಾಸನೆ ಬರುತ್ತದೆ.

ಇದರಿಂದ ಮಕ್ಕಳ ಆರೋಗ್ಯದ ಮೇಲೆ ಹಾಗೂ ಬಿಸಿಯೂಟ ತಯಾರಿಕೆ ಮೇಲೂ ದುಷ್ಪರಿಣಾಮ ಬೀರುವ ಸಾಧ್ಯತೆ ಹೆಚ್ಚು. ಹಾವು, ಚೇಳು ಸೇರಿದಂತೆ ಇತರೆ ವಿಷಜಂತುಗಳ ಭಯ ಒಂದೆಡೆಯಾದರೆ ಆವರಣದಲ್ಲಿ ಹಂದಿಗಳ ಕಾಟ ಹೆಚ್ಚಾಗಿದೆ. ಶಾಲೆ ಬಿಟ್ಟ ನಂತರ ಕೆಲ ಪುಂಡ ಯುವಕರು ಆವರಣದಲ್ಲಿ ಶಾಲೆಯ ಕೋಠಡಿ ಮುಂದೆ ಇಸ್ಪೀಟ್‌ ಆಡುತ್ತಾರೆ. ಮದ್ಯ ಸೇವನೆ ಹೀಗೆ ಹಲವಾರು ಅನೈತಿಕ ಚಟುವಟಿಕೆಗಳನ್ನು ನಡೆಸುತ್ತಿದ್ದು, ಯಾರ ಮಾತಿಗೂ ಬೆಲೆ ಕೊಡುತ್ತಿಲ್ಲ. ಮಳೆ ಬಂದರೆ ಆವರಣ ನೀರಿನಿಂದ ತುಂಬಿಕೊಂಡಿರುತ್ತದೆ. ಬಿಸಿಯೂಟದ ಅಡುಗೆ ಕೊಠಡಿಯಲ್ಲೂ ನೀರು ನುಗ್ಗುತ್ತದೆ. ಹೀಗೆ ಹತ್ತು ಸಮಸ್ಯೆಗಳಿವೆ. ಕೂಡಲೇ ಶಾಲೆಯ ಆವರಣಕ್ಕೆ ಮರಮ್‌ ಹಾಕಿಸಿ ಆವರಣ ಗೋಡೆ ನಿರ್ಮಾಣ ಮಾಡಿಸಬೇಕು ಎಂದು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next