Advertisement
ಎಲ್ಲ ಬೆಳವಣಿಗೆ ನಡುವೆ ಫೇಸ್‌ಬುಕ್ ಜಾಲತಾಣದಲ್ಲಿ ಕೆಲವು ಸಾಹಿತಿಗಳು, ಪ್ರಗತಿಪರ ಚಿಂತಕರು ಮತ್ತು ಯುವ ಬರಹಗಾರರು 3 ದಿನಗಳ ಕಾರ್ಯಕ್ರಮಕ್ಕೆ 25 ಕೋಟಿ ರೂ. ಯಾಕೆ ಎಂಬ ಪ್ರಶ್ನೆ ಮುಂದಿಟ್ಟು ಚರ್ಚೆಗೆ ಮುನ್ನುಡಿ ಬರೆದಿದ್ದಾರೆ. ಅನಗತ್ಯ ವೈಭವ, ದುಂದುವೆಚ್ಚ ಕೈಬಿಟ್ಟು ಸರಳ ಸಮಾರಂಭ ಮಾಡಬೇಕು. ಸರಕಾರ ಸಾಹಿತ್ಯ ಸಮ್ಮೇಳನಕ್ಕೆ ಕೋಟ್ಯಂತರ ರೂ. ಖರ್ಚು ಮಾಡುವುದಕ್ಕಿಂತಲೂ ಸಾಹಿತ್ಯ ಸಮ್ಮೇಳನ ಘೋಷಣೆ ಆಗಿರುವ ಜಿಲ್ಲೆಗಳ ನೂರು ಕನ್ನಡ ಶಾಲೆಗಳ ಅಭಿವೃದ್ಧಿ ಕಾಯಕದಲ್ಲಿ ತೊಡಗಲಿ ಎಂಬ ಸಲಹೆಗಳನ್ನು ನೀಡಿದ್ದಾರೆ.
ಇತ್ತೀಚೆಗೆ ಕನ್ನಡ ಶಾಲೆಗಳಲ್ಲಿ ಶೌಚಾಲಯ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಇಲ್ಲದ ಕಾರಣದಿಂದಾಗಿ ಹೈಕೋರ್ಟ್ ಸರಕಾರಕ್ಕೆ ಛೀಮಾರಿ ಹಾಕಿದೆ. ಸಾಹಿತ್ಯ ಸಮ್ಮೇಳನಕ್ಕೆ ಕೋಟ್ಯಂತರ ರೂ. ಖರ್ಚು ಮಾಡುವ ಬದಲು ಇದೇ ಹಣದಿಂದ ವರ್ಷಕ್ಕೆ ಕನಿಷ್ಠ ಸಾವಿರ ಕನ್ನಡ ಶಾಲೆಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸಬಹುದು. ಇದು ನಿಜವಾದ ಕನ್ನಡದ ಅಭಿವೃದ್ಧಿಯ ಕೆಲಸ ಎಂದು ಸಾಹಿತಿ ಜಗದೀಶ ಕೊಪ್ಪ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ 5 ಕೋಟಿ ರೂ.ಗಿಂತ ಹೆಚ್ಚು ಖರ್ಚು ಮಾಡುವುದಾದರೆ, ಸಮ್ಮೇಳನ ಬೇಡ ಎಂದಿದ್ದಾರೆ. ಇದಕ್ಕೆ ಸಹಮತ ವ್ಯಕ್ತಪಡಿಸಿರುವ ಹಿರಿಯ ಸಾಹಿತಿ ರಾಘವೇಂದ್ರ ಪಾಟೀಲ್, ಕನ್ನಡ ಸಾಹಿತ್ಯ ಪರಿಷತ್ತು ಈ ಸಂದರ್ಭವನ್ನು ಬಳಸಿಕೊಂಡು ಹೊಸ ಸ್ವರೂಪದ ಸಾರ್ಥಕ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸಲಿ. ಮಹಾರಾಷ್ಟ್ರದಲ್ಲಿ ನಡೆಯುವ ಸ್ವಾಭಿಮಾನಿ ಸಾಹಿತ್ಯ ಸಮ್ಮೇಳನಗಳ ಸ್ವರೂಪದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳಗಳ ಆಯೋಜನೆಯ ಬಗೆಗೆ ಚಿಂತಿಸುವಂತಾಗಲಿ. ಸರಕಾರವು ಈ ಬಗೆಗಿನ ತನ್ನ ನಿಲುವಿನಿಂದ ಹಿಂದೆ ಸರಿಯಬಾರದು ಎಂದು ಆಗ್ರಹಿಸಿದ್ದಾರೆ.
ಅಧ್ಯಕ್ಷರ ಸಚಿವ ಪದವಿ ರದ್ದಾಗಬೇಕು
Related Articles
Advertisement
ಕೊಪ್ಪಳ ಕಸಾಪದ ಜಿಲ್ಲಾಧ್ಯಕ್ಷರು ಯಾರನ್ನಾದರೂ ಆಹ್ವಾನಿಸಿ ಭಾಷಣ ಮಾಡಿಸಬೇಕು ಎಂದಾದರೆ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಅನುಮತಿ ಕೇಳಬೇಕಾದ ಪರಿಸ್ಥಿತಿ ಇದೆಯಂತೆ. ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಚಾಮರಾಜಪೇಟೆಯ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ನೀವು ಬೇರೆ ಕಡೆ ಹೋಗಿ ಎಂದು ಹೇಳಲಾಗುತ್ತಿದೆ. ಅವರು ಎಲ್ಲಿಗೆ ಹೋಗಬೇಕು ಹಾಗೂ ಯಾಕೆ ಹೋಗಬೇಕು ಎಂದು ಪ್ರಶ್ನೆ ಮಾಡುತ್ತಾರೆ.
ಯಾವ ಸಮ್ಮೇಳನಕ್ಕೆ ಎಷ್ಟು ಅನುದಾನ? ಈ ಹಿಂದೆ ಹಾವೇರಿಯಲ್ಲಿ ನಡೆದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರಕಾರ 20 ಕೋಟಿ ರೂ., ಮೈಸೂರಿನಲ್ಲಿ ನಡೆದಿದ್ದ 83ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 8 ಕೋಟಿ ರೂ., ಧಾರವಾಡದಲ್ಲಿ ನಡೆದಿದ್ದ 84ನೇ ಸಾಹಿತ್ಯ ಸಮ್ಮೇಳನಕ್ಕೆ 10 ಕೋಟಿ ರೂ., ಕಲಬುರಗಿಯಲ್ಲಿ ನಡೆದಿದ್ದ 85ನೇ ಸಮ್ಮೇಳನಕ್ಕೆ 10 ಕೋಟಿ ರೂ. ಬಿಡುಗಡೆ ಮಾಡಿತ್ತು. ಸರ್ವಾಧಿಕಾರಿಗಳನ್ನು ಪ್ರಶ್ನಿಸಬೇಕಾದ ಸಂಸ್ಥೆಯೇ ಈಗ ಸರ್ವಾಧಿಕಾರ ಧೋರಣೆ ತೋರಿದರೆ ಹೇಗೆ? ಸ್ವಯಂ ಸೇವಾ ಮಾದರಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯ ನಿರ್ವಹಿಸಬೇಕು. ಈ ಹಿಂದೆ ಜಿ. ನಾರಾಯಣ ಅಂಥವರು ಉತ್ತಮ ಕೆಲಸ ಮಾಡಿದ್ದಾರೆ. ಅವರನ್ನು ಮಾದರಿಯಾಗಿ ತೆಗೆದುಕೊಂಡು ಕೆಲಸ ಮಾಡಬೇಕಾಗಿದೆ.
– ಜಿ.ರಾಮಕೃಷ್ಣ, ಹಿರಿಯ ಸಾಹಿತಿ ದೇವೇಶ ಸೂರಗುಪ್ಪ