Advertisement

ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿಗೆ ಆಗ್ರಹ

02:34 PM Jan 24, 2022 | Team Udayavani |

ಹುಳಿಯಾರು: ಹುಳಿಯಾರು ಬಸ್‌ ನಿಲ್ದಾಣದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿ ಮಾಡಿಸಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

Advertisement

ಹುಳಿಯಾರು ಬಸ್‌ ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯಕಲ್ಪಿಸಲುವಾಗಿ ಸಂಸದರಾಗಿದ್ದ ಕಾಲದಲ್ಲಿ ಎಸ್‌.ಪಿ.ಮುದ್ದಹನುಮೇಗೌಡರು ಬಸ್‌ ನಿಲ್ದಾಣ ದಲ್ಲಿ ಕಿರು ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಿದ್ದರು.

ಈ ಘಟಕಕ್ಕೆ ಹುಳಿಯಾರು ಪಪಂನಿಂದ ನೀರು ಸರಬರಾಜು ಮಾಡುತ್ತಿತ್ತು. ಆದರೆ, ಕಳೆದ ಮೂರುವರ್ಷಗಳಿಂದ ಕುಡಿವ ನೀರಿನ ಘಟಕ ಕೆಟ್ಟು ಹೋಗಿನೀರು ಬರದಂತ್ತಾ ಗಿದೆ. ಪರಿಣಾಮ ಬಸ್‌ನಿಲ್ದಾಣಕ್ಕೆ ಬರುವ ವಿದ್ಯಾರ್ಥಿಗಳು. ಮಹಿಳೆಯರು, ವೃದ್ಧರು ನೀರಿಲ್ಲದೆ ಪರದಾಡುವಂತ್ತಾಗಿದೆ.

ದುಡ್ಡು ಕೊಟ್ಟು ನೀರು ಖರೀದಿ: ಈ ಹಿಂದೆ ಬಸ್‌ ನಿಲ್ದಾಣದಲ್ಲಿ ಟೀ ಅಂಗಡಿಗಳು, ಕೆರೆ ದಡದಲ್ಲಿ ಹೋಟೆಲ್‌ ಇದ್ದವು. ನೀರಿನ ಘಟಕ ಕೆಟ್ಟಿದ್ದರೂ, ಅಲ್ಲಿಗೆ ಹೋಗಿ ನೀರು ಕುಡಿಯುತ್ತಿದ್ದರು. ಆದರೆ, ಬಸ್‌ ನಿಲ್ದಾಣದಲ್ಲಿನ ಗೂಡಂಗಡಿಗಳನ್ನು ತೆರವು ಮಾಡಿದ ನಂತರ ನೀರಿರುವ ಒಂದೇ ಒಂದು ಸ್ಥಳಇಲ್ಲಿ ಇಲ್ಲದಂತ್ತಾಗಿದೆ. ಪರಿಣಾಮ ಬಾಯಾರಿಕೆತಡೆಯಲಾಗದೆ ದುಡ್ಡು ಕೊಟ್ಟು ನೀರಿನ ಬಾಟಲ್‌ ಖರೀದಿಸುತ್ತಿದ್ದಾರೆ.

ಸಾರ್ವಜನಿಕರ ಮನವಿ: ಈಗ ಬಿಸಿಲ ಝಳ ಸಹಹೆಚ್ಚಿದ್ದು, ಹಳ್ಳಿಗಳಿಂದ ಪಟ್ಟಣಕ್ಕೆ ಬರುವ ಜನರಿಗೆ ನೀರಿನ ಅಗತ್ಯತೆ ಹೆಚ್ಚಾಗಿದೆ. ಬಸ್‌ ಸುಂಕ, ಫುಟ್‌ ಪಾತ್‌ ಸುಂಕ ಸಂಗ್ರಹಿಸುವ ಪಟ್ಟಣ ಪಂಚಾಯ್ತಿಮೂಲ ಸೌಕರ್ಯ ಕಲ್ಪಿಸುವ ಹೊಣೆ ನಮ್ಮದೆನ್ನುವುದನ್ನು ಮರೆತಿದೆ. ಪ್ರಯಾಣಿಕರ ಅನುಕೂಲದದೃಷ್ಟಿಯಿಂದ ನೀರಿನ ಘಟಕ ದುರಸ್ತಿಗೆಮುಂದಾಗಲಿ ಎಂಬುದು ಸಾರ್ವಜನಿಕರ ಮನವಿಯಾಗಿದೆ.

Advertisement

ಪಟ್ಟಣವು ವಾಣಿಜ್ಯವಾಗಿ ಮೂರ್ನಲ್ಕು ಜಿಲ್ಲೆಗಳ ಗಡಿಭಾಗದ ಜನರಿಗೆ ಆಸರೆಯಾಗಿದೆ. ಪರಿಣಾಮ ನಿತ್ಯ ಸಾವಿರಾರು ಜನರು ಬಸ್‌ ನಿಲ್ದಾಣಕ್ಕೆ ಬಂದೋಗುತ್ತಾರೆ. ಬಸ್‌ ಬರುವವರೆಗಿಗೂ ಪ್ರಯಾಣಿಕರು ನಿಲ್ದಾಣದಲ್ಲಿ ಕಾಯುತ್ತಾರೆ. ಈ ಸಂದರ್ಭ ಬಾಯಾರಿಗೆ ಯಾದಾಗಕುಡಿಯಲು ನೀರಿನ ಸೌಲಭ್ಯವೇ ಪಂಚಾಯ್ತಿ ಮಾಡಿಲ್ಲ. ನೀರಿನ ಘಟಕ ಕೆಟ್ಟಿದ್ದರೂ, ದುರಸ್ತಿ ಮಾಡಿಲ್ಲ. ಈ ಬಗ್ಗೆ ಪಂಚಾಯ್ತಿ ಅಧಿಕಾರಿಗಳಿಗೆ ಹೇಳಿ ಸಾಕಾಗಿ ಹೋಗಿದೆ. ಚನ್ನಕೇಶವ, ಖಾಸಗಿ ಬಸ್‌ ಏಜೆಂಟ್‌

ನಾನಿನ್ನೂ ಹೊಸದಾಗಿ ಪಟ್ಟಣ ಪಂಚಾಯ್ತಿ ಅಧ್ಯಕ್ಷನಾಗಿದ್ದೇನೆ. ಬಸ್‌ ನಿಲ್ದಾಣದ ನೀರಿನ ಸಮಸ್ಯೆ ನನ್ನ ಗಮನಕ್ಕೆ ಬಂದಿರಲಿಲ್ಲ. ಶೌಚಾಲಯದ ಸಮಸ್ಯೆ ನನ್ನ ಗಮನಕ್ಕೆ ಬಂದಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುತ್ತಿದ್ದೇನೆ. ಈಗ ಮಾಧ್ಯಮದವರಿಂದ ನೀರಿನ ಸಮಸ್ಯೆ ನನ್ನ ಗಮನಕ್ಕೆಬಂದಿದ್ದು, ತುರ್ತು ಆದ್ಯತೆ ಮೇರೆಗೆ ನೀರಿನ ಘಟಕ ದುರಸ್ತಿ ಮಾಡಿಸಿ ಪ್ರಯಾಣಿಕರಿಗೆ ಶುದ್ಧ ನೀರು ಕೊಡುತ್ತೇವೆ. ಕೆಎಂಎಲ್‌ ಕಿರಣ್‌, ಅಧ್ಯಕ್ಷ, ಪಟ್ಟಣ ಪಂಚಾಯ್ತಿ

Advertisement

Udayavani is now on Telegram. Click here to join our channel and stay updated with the latest news.

Next