Advertisement
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಘೋಷಣೆ ಕೂಗಿದ ಕಾರ್ಯಕರ್ತರು, ಬಳಿಕ ಜಿಲ್ಲಾಧಿ ಕಾರಿಗೆ ಮನವಿ ಸಲ್ಲಿಸಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಹತ್ವದ ಯೋಜನೆಗಳಾದ ಸಂಧ್ಯಾ ಸುರಕ್ಷಾ, ವಿಧವಾ ವೇತನ, ಒಎಪಿ ಅಂಗವಿಕಲರ ಪಿಂಚಣಿ ಯೋಜನೆಗಳಲ್ಲಿ ಸಾಕಷ್ಟು ಸಮಸ್ಯೆಯಾಗುತ್ತಿದೆ. ಎರಡು ವರ್ಷದಿಂದ ಫಲಾನುಭವಿಗಳ ಖಾತೆಗೆ ಪಿಂಚಣಿ ಹಣವೇ ಜಮಾ ಮಾಡಿಲ್ಲ. ಆದರೆ, ಇದನ್ನೇ ನಂಬಿ ಜೀವನ ದೂಡುತ್ತಿರುವವರಿಗೆ ಇದರಿಂದ ಸಾಕಷ್ಟು ಸಮಸ್ಯೆಯಗುತ್ತಿದೆ ಎಂದು ದೂರಿದರು. ಮೊದಲಾದರೆ 2-3 ತಿಂಗಳಿಗೆ ಒಮ್ಮೆಯಾದರೂ ಪಿಂಚಣಿ ಬರುತ್ತಿತ್ತು. ಆದರೆ, ಈಗ ವರ್ಷಾನುಗಟ್ಟಲೇ ಹಣ ಬಾರದಿದ್ದರೆ ಫಲಾನುಭವಿಗಳಿಗೆ ಸಾಕಷ್ಟು ಕಷ್ಟವಾಗಲಿದೆ. ಇಲ್ಲವಾದರೆ ಅವರೆಲ್ಲ ಪರಾವಲಂಬಿಗಳಾಗಬೇಕಾಗುತ್ತದೆ. ಈ ಕುರಿತು ಖಜಾನೆ ಅಧಿಕಾರಿಗಳು ಹಾಗೂ ತಹಶೀಲ್ದಾರ್ ಕಚೇರಿ ಅ ಧಿಕಾರಿಗಳನ್ನು ಕೇಳಿದರೆ ಹಾರಿಕೆ ಉತ್ತರ ನೀಡುತ್ತಾರೆ. ಸರ್ಕಾರ ಕೂಡಲೇ ಈ ಎಲ್ಲ ಯೋಜನೆಗಳ ಫಲಾನುಭವಿಗಳಿಗೆ ಪಿಂಚಣಿ ನೀಡಲು ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
Advertisement
ಪಿಂಚಣಿ ಬಿಡುಗಡೆಗೆ ಆಗ್ರಹ
04:15 PM Sep 24, 2019 | Suhan S |
Advertisement
Udayavani is now on Telegram. Click here to join our channel and stay updated with the latest news.