Advertisement

ಕನ್ನಡ ಭವನ ಬಾಕಿ ಕಾಮಗಾರಿಗೆ ಅನುದಾನ ನೀಡಲು ಮನವಿ

04:53 PM Aug 16, 2022 | Team Udayavani |

ಕಲಬುರಗಿ: ನಗರದ ಕನ್ನಡ ಭವನದ ಸುಂದರೀಕರಣಕ್ಕಾಗಿ ಬಾಕಿ ಉಳಿದ ಕಾಮಗಾರಿಗಳನ್ನು ಮುಗಿಸಿಕೊಡಲು ಸೂಕ್ತ ಅನುದಾನ ಕೋರಿ ಜಿಲ್ಲಾ ಉಸ್ತುವಾರಿ ಸಚಿವ ಡಾ| ಮುರುಗೇಶ ನಿರಾಣಿ ಅವರಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ ಮನವಿ ಸಲ್ಲಿಸಿದರು.

Advertisement

ಕನ್ನಡ ಭವನದಲ್ಲಿನ ಬಾಪುಗೌಡ ದರ್ಶನಾಪುರ ರಂಗಮಂದಿರದಲ್ಲಿ ಶಾಶ್ವತ ಧ್ವನಿವರ್ಧಕ ಅಳವಡಿಸುವಿಕೆ, ಆಸನಗಳ ವ್ಯವಸ್ಥೆ, ಆವರಣದಲ್ಲಿ ಸುಂದರ ಮತ್ತು ಸ್ವತ್ಛವಾದ ಹಸಿರು ತುಂಬಿ ಉದ್ಯಾನವನವನ್ನು ನಿರ್ಮಿಸಲು ಉದ್ದೇಶಿಸಲಾಗಿದ್ದು, ಅದರ ಬಗ್ಗೆ ಜಿಲ್ಲೆಯ ಶಾಸಕರುಗಳಿಂದಲೂ ಕೂಡ ಅನುದಾನ ಪಡೆಯಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ತೇಗಲತಿಪ್ಪಿ ಮನವಿ ಮಾಡಿದರು.

ಮನವಿ ಸ್ವೀಕರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಡಾ| ಮುರುಗೇಶ ನಿರಾಣಿ ಅವರು ಕನ್ನಡ ಭವನದ ಸುಂದರೀಕರಣಕ್ಕಾಗಿ ಬೇಕಾದ ಸವಲತ್ತು ಮಾಡಿಕೊಡುವುದಾಗಿ ಭರವಸೆ ನೀಡಿದರು.

ಎಂಎಲ್ಸಿ ಶಶೀಲ್‌ ಜಿ.ನಮೋಶಿ, ಶಾಸಕರಾದ ರಾಜಕುಮಾರ ಪಾಟೀಲ ತೆಲ್ಕೂರ, ಸುಭಾಷ್‌ ಆರ್‌.ಗುತ್ತೇದಾರ, ಜಿಲ್ಲಾಧಿಕಾರಿ ಯಶ್ವಂತ ಗುರುಕರ್‌, ಪ್ರಮುಖರಾದ ರಾಘವೇಂದ್ರ ಕುಲಕರ್ಣಿ, ಲಕ್ಷ್ಮಣ ದಸ್ತಿ, ಶಾಮರಾವ ಪ್ಯಾಟಿ, ಸಿದ್ರಾಮಪ್ಪಾ ಪಾಟೀಲ ಧಂಗಾಪುರ ಸೇರಿದಂತೆ ಅನೇಕರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next