Advertisement
ಡಿಜಿಟಲ್ ಭಾರತದ ಕನಸು ಸಾಕಾರಗೊಳಿಸುವಲ್ಲಿ ಡಾಟಾ ಎಂಟ್ರಿ ಆಪರೇಟರ್‌ಗಳ ಶ್ರಮ ದೊಡ್ಡದು. ಸರ್ಕಾರದ ಎಲ್ಲ ವಿಧವಾದ ಯೋಜನೆಗಳ ಅನುಷ್ಠಾನಕ್ಕೆ ಪ್ರಾಮಾಣಿಕವಾಗಿ ಕೈಜೋಡಿಸುವ ಡಾಟಾ ಎಂಟ್ರಿ ಆಪರೇಟರ್‌ಗಳ ಕೆಲಸಕ್ಕೆ ಭದ್ರತೆ ಇಲ್ಲ. ಸೂಕ್ತ ವೇತನವೂ ದೊರೆಯುತ್ತಿಲ್ಲ ಎನ್ನುವುದು ಬೇಸರದ ಸಂಗತಿಯಾಗಿದೆ. ಡಾಟಾ ಎಂಟ್ರಿ ಆಪರೇಟರ್‌ಗಳ ಬದುಕಿಗೆ ಭದ್ರತೆ ಕಲ್ಪಿಸಲು ಸರ್ಕಾರಿ ನೌಕರರೆಂದು ಪರಿಗಣಿಸಬೇಕು. ಗ್ರೇಡ್-2 ಹುದ್ದೆಗೆ ಸರಿಸಮವಾಗಿ ಅವರಿಗೆ ವೇತನ ದೊರಕಿಸಿ ಕೊಡುವ ಕಾರ್ಯವಾಗಬೇಕಿದೆ ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಸುರೇಶ ಹುದ್ದಾರ, ವಿನಾಯಕ ವೆಂಕೋಜಿ, ಬಸವರಾಜ ಚವ್ಹಾಣ, ಗಿರೀಶ ಮೂಡಿ, ಸುಲೇಮಾನ್ ಹುಡೇದ, ಸುನೀಲ್ ಭಾಗಣ್ಣನವರ, ಜಗದೀಶ ದಾನಮ್ಮನವರ, ಪ್ರಶಾಂತ ರೊಟ್ಟಿ, ಮಂಜುನಾಥ ಮಡಿವಾಳರ ಸೇರಿದಂತೆ ಇತರರಿದ್ದರು. Advertisement
ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಶಾಸಕರಿಗೆ ಮನವಿ
03:01 PM Feb 03, 2020 | Suhan S |
Advertisement
Udayavani is now on Telegram. Click here to join our channel and stay updated with the latest news.