ಚನ್ನರಾಯಪಟ್ಟಣ: ಪಶು ಪಾಲನಾ ಹಾಗೂ ವೈದ್ಯಕೀಯ ಸೇವಾ ಇಲಾಖೆಯ ಅಧಿಕಾರಿಗಳ ಕೊರತೆ ನೀಗಿಸುವಲ್ಲಿ ರಾಜ್ಯ ಬಿಜೆಪಿ ಸರ್ಕಾರ ವಿಫಲವಾಗಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ವ್ಯಂಗ್ಯ ವಾಡಿದರು.
ಪಟ್ಟಣದಲ್ಲಿನ ಪಶು ಪಾಲನಾ ಮತ್ತು ವೈದ್ಯಕೀಯ ಸೇವಾ ಇಲಾಖೆಯಿಂದ ಕೇಂದ್ರ ಸರ್ಕಾರದ 17ನೇ ಸುತ್ತಿನ ಕಾಲು ಬಾಯಿ ಜ್ವರ ವಿರೋಧಿ ಲಸಿಕಾಕಾರ್ಯಕ್ರಮಕ್ಕೆಚಾಲನೆ ನೀಡಿ ಮಾತನಾಡಿ, ತಾಲೂಕಿನಲ್ಲಿ 28 ವೈದ್ಯಾಧಿಕಾರಿಗಳಲ್ಲಿ 15 ಖಾಲಿ ಇದ್ದು, ಭರ್ತಿ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದರೂ ಯಾವುದೇ ಪ್ರಯೋಜವಾಗಿಲ್ಲ ಎಂದು ದೂರಿದರು.
ಜಾನುವಾರುಗಳಿಂದ ಕೇವಲ ಆದಾಯವನ್ನಷ್ಟೇ ನಿರೀಕ್ಷಿಸದೆ, ಅವುಗಳ ಆರೋಗ್ಯದ ಕಡೆಗೂ ಹೆಚ್ಚಿನ ಆದ್ಯತೆ ನೀಡಲು ಹೈನುಗಾರರು ಮುಂದಾಗಬೇಕು, ಮಾನವನ ಆರೋಗ್ಯದ ರೀತಿಯಲ್ಲಿ ಪಶುಗಳ ಆರೋಗ್ಯಕ್ಕೆಮುತುವರ್ಜಿನೀಡಬೇಕು,ರಾಸುಗಳು ಆರೋಗ್ಯ ತಪ್ಪಿದಾಗ ನಿರ್ಲಕ್ಷ್ಯ ಮಾಡದೆ, ಕೂಡಲೇಸಮೀಪದ ಪಶು ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಬೇಕು, ಗ್ರಾಮೀಣ ಭಾಗದಲ್ಲಿ ಹೈನುಗಾರಿಕೆಮೂಲಕ ಹಲವು ಕುಟುಂಬಗಳು ಬದುಕು ಕಟ್ಟಿ ಕೊಂಡಿವೆ ಎಂದು ಆರೋಪಿಸಿದರು.
ಬಾಗೂರು ಹೋಬಳಿ ಬಿದರೆ ಹಾಗೂ ಶ್ರವಣ ಬೆಳಗೊಳ ಹೋಬಳಿ ಜುಟ್ಟನಹಳ್ಳಿ ಗ್ರಾಮದಲ್ಲಿ 45 ಲಕ್ಷ ರೂ. ವೆಚ್ಚ ಮಾಡಿ ಪಶು ಆಸ್ಪತ್ರೆ ನಿರ್ಮಿಸಿದ್ದು,ಶೀಘ್ರದಲ್ಲಿ ಉದ್ಘಾಟನೆ ಮಾಡಲಾಗುವುದು, ಎಂ.ಶಿವರ ಹಾಗೂ ಚೋಳೇನಹಳ್ಳಿ ಗ್ರಾಮದಲ್ಲಿಪಶು ಆಸ್ಪತ್ರೆಯ ಕಟ್ಟಡ ನಿರ್ಮಾಣಕ್ಕೆ ತಲಾ34 ಲಕ್ಷ ರೂ. ಹಣವನ್ನು ಸರ್ಕಾರ ಮಂಜೂರು ಮಾಡಿದೆ.ತಗಡೂರು ಗ್ರಾಮದಲ್ಲಿ ಪಶು ಆಸ್ಪತ್ರೆಕಟ್ಟಡ ನಿರ್ಮಿಸಲು ಸೂಕ್ತ ನಿವೇಶನದ ಕೊರತೆ ಇದೆ. ಆದಷ್ಟು ಬೇಗ ಗುರುತಿಸಲಾಗುವುದು ಎಂದು ತಿಳಿಸಿದರು. ತಾಲೂಕು ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ.ಎಲ್.ಜಿ.ಸೋಮಶೇಖರ್ ಮಾತನಾಡಿ, ತಾಲೂಕಿನ 375 ಗ್ರಾಮಗಳಲ್ಲಿ 1,23,851 ರಾಸು ಗಳಿವೆ,45 ದಿನ ಲಸಿಕೆ ನೀಡುವಕಾರ್ಯ ನಿರಂತರವಾಗಿ ನಡೆಯುತ್ತದೆ. ಈಗಾಗಲೇ 61 ಸಿಬ್ಬಂದಿ ಒಳ ಗೊಂಡ 10 ತಂಡ ರಚನೆ ಮಾಡಲಾಗಿದೆ. ಇನ್ನು ಹಾಸನ ಹಾಲು ಒಕ್ಕೂಟವು ಲಸಿಕಾಕಾರ್ಯಕ್ರಮಕ್ಕೆ ಆರು ತಂಡ, ವಾಹನ ವ್ಯವಸ್ಥೆ ನೀಡಿದೆ ಎಂದು ತಿಳಿಸಿದರು.
ಪ್ರತಿ ಹಳ್ಳಿಗಳಲ್ಲಿ ಹತ್ತು ತಂಡಗಳು ಸಂಚಾರ ಮಾಡಿ, ಶೇ.100ಕಾರ್ಯಕ್ರಮ ಯಶಸ್ವಿ ಮಾಡಲು ಈಗಾಗಲೇ ಸಕಲ ತಯಾರಿ ಮಾಡಲಾಗಿದೆ. ಕೋವಿಡ್ ವೇಳೆಯಲ್ಲಿ ರಾಸುಗಳ ಆರೋಗ್ಯವನ್ನು ಉತ್ತಮವಾಗಿ ಕಾಪಾಡುವುದು ಪ್ರತಿಯೊಬ್ಬ ಪಶುವೈದ್ಯರಕರ್ತವ್ಯವಾಗಿದೆ. ಹಾಗಾಗಿ ಎಲ್ಲರೂ ಟೊಂಕ ಕಟ್ಟಿ ನಿಂತಿದ್ದೇವೆ ಎಂದು ಭರವಸೆ ನೀಡಿದರು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ನಿರ್ದೇಶಕ ವಿ.ಎನ್.ಮಂಜುನಾಥ್, ಟಿಎಪಿಸಿಎಂಎಸ್ ನಿರ್ದೇ ಶಕ ಕೃಷ್ಣೇಗೌಡ, ತಾಲೂಕು ಅರ್ಚಕ ಸಂಘದಅಧ್ಯಕ್ಷ ಶ್ರೀಧರ್‌ಮೂರ್ತಿ, ಮುಖ್ಯ ಪಶು ವೈದ್ಯಾಧಿಕಾರಿ ಡಾ.ಸುಬ್ರಹ್ಮಣ್ಯ, ಜಾನುವಾರು ಅಭಿವೃದ್ಧಿ ಅಧಿಕಾರಿ ಕೆ.ಸಿ.ಸೋಮಶೇಖರ್, ಹಿರಿಯ ಪಶು ವೈದ್ಯಕೀಯ ಪರೀಕ್ಷಕಿ ಶೋಭಾ, ಪಶು ವೈದ್ಯಕೀಪರೀಕ್ಷಕಿ ಅನಿತಾ, ಪಶು ವೈದ್ಯಕೀಯ ಸಹಾಯಕ ಪ್ರಶಾಂತ್ ಉಪಸ್ಥಿತರಿದ್ದರು.