Advertisement

ಕಚೇರಿ ಹಾಜರಿ ಸಮಯ ವಿಸ್ತರಣೆಗೆ ಮನವಿ

10:43 PM Aug 03, 2019 | Team Udayavani |

ಬೆಂಗಳೂರು: ಸರ್ಕಾರಿ ಸಚಿವಾಲಯದ ನೌಕರರು ಕಚೇರಿ ಕೆಲಸಕ್ಕೆ ಹಾಜರಾಗುವ ಸಮಯವನ್ನು ಅರ್ಧಗಂಟೆ ವಿಳಂಬ ಮಾಡುವಂತೆ ಕೋರಿ ಸಚಿವಾಲಯ ನೌಕರರ ಸಂಘದ ಅಧ್ಯಕ್ಷರು ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್‌ ಅವರಿಗೆ ಪತ್ರ ಬರೆದಿದ್ದಾರೆ. ಬೆಂಗಳೂರಿನಲ್ಲಿ ವೈಟ್‌ ಟ್ಯಾಪಿಂಗ್‌, ಮೆಟ್ರೋ ಕಾಮಗಾರಿ, ಬೆಸ್ಕಾಂ ಕಾಮಗಾರಿಗಳು ಸೇರಿ ಅನೇಕ ಕಾಮಗಾರಿಗಳು ನಡೆಯುತ್ತಿವೆ.

Advertisement

ಅಲ್ಲದೇ ಮುಖ್ಯಮಂತ್ರಿ ಹಾಗೂ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳ ಸಂಚಾರ ಇದ್ದಾಗ ಸಾರ್ವಜನಿಕ ವಾಹನಗಳನ್ನು ತಡೆ ಹಿಡಿಯುವುದರಿಂದ ಬೆಳಗ್ಗೆ 10 ಗಂಟೆಗೆ ಕಚೇರಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಪ್ರತಿ ದಿನ ಅನೇಕ ಸಿಬ್ಬಂದಿ 10 ಗಂಟೆ 10 ನಿಮಿಷದೊಳಗೆ ಕಚೇರಿಗೆ ತಲುಪಲು ಆಗದಿರುವುದರಿಂದ ಅವರ ಹಾಜರಿಯನ್ನು ರಜೆ ಎಂದು ಪರಿಗಣಿಸಲಾಗುತ್ತಿದೆ.

ಇದರಿಂದ ನೌಕರರು ಒತ್ತಡಕ್ಕೆ ಒಳಗಾಗಿ ಆರೋಗ್ಯ ಸಮಸ್ಯೆ ಎದುರಿಸುವಂತಾಗಿದೆ. ಹೀಗಾಗಿ, ನೌಕರರಿಗೆ ಬೆಳಗ್ಗೆ ಕಚೇರಿಗೆ ಹಾಜರಾಗಲು 10.30ರ ವರೆಗೂ ಅವಕಾಶ ಕಲ್ಪಿಸಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next