ದಾಂಡೇಲಿ: ನಗರದ ಬಸ್ ನಿಲ್ದಾಣದ ಎದುರುಗಡೆ ಕಾನೂನು ಬಾಹಿರವಾಗಿ ಕಟ್ಟಡ ನಿರ್ಮಾಣವಾಗುತ್ತಿದ್ದು, ನಿಗಧಿಗಿಂತ ಹೆಚ್ಚುವರಿಯಾಗಿ ಜಾಗವನ್ನು ಅತಿಕ್ರಮಿಸಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಈ ಕೂಡಲೆ ಕಾನೂನು ಬಾಹಿರವಾಗಿ ನಿರ್ಮಿಸಲಾಗುತ್ತಿರುವ ಕಟ್ಟಡವನ್ನು ತೆರವುಗೊಳಿಸಬೇಕೆಂದು ನಗರದ ಕರ್ನಾಟಕ ಬಹುಜನ ಚಳುವಳಿ ಸಂಘದ ಬಾಂಬೂಗೇಟ್ ಬಳಿಯಿರುವ ಕಚೇರಿಯಲ್ಲಿ ಸಂಘಟನೆಯ ಅಧ್ಯಕ್ಷರಾದ ದೇವೇಂದ್ರ ಮಾದರ ಅವರು ಗುರುವಾರ ಮಾದ್ಯಮದ ಮೂಲಕ ನಗರ ಸಭೆಯನ್ನು ಆಗ್ರಹಿಸಿದ್ದಾರೆ.
ಒಂದು ವೇಳೆ ತೆರವುಗೊಳಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಬಸ್ ನಿಲ್ದಾಣದ ಮುಂದೆ ಉಪವಾಸ ಸತ್ಯಾಗ್ರಹ ಮಾಡಬೇಕಾಗುತ್ತದೆ ಎಂದು ದೇವೇಂದ್ರ ಮಾದರ ಅವರು ನಗರ ಸಭೆಗೆ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಪ್ರಮುಖರುಗಳಾದ ಸಾಧಿಕ್ ಮುಲ್ಲಾ, ಸಿದ್ದರಾಮಯ್ಯ, ದುಂಡಪ್ಪ ಪಾಟೀಲ, ಸಂಗಣ್ಣ ಬೋವಿ, ಮುನ್ನಾ ಸಾಂಕ್ಲಾ, ರಾಮಚಂದ್ರ ಕಾಂಬಳೆ ಮೊದಲಾದವರಿದ್ದರು.
ಸದ್ರಿ ಕಟ್ಟಡ ನಿರ್ಮಾಣದ ಆರಂಭದಲ್ಲಿ ಕಟ್ಟಡ ನಿರ್ಮಾಣವನ್ನು ಸ್ಥಗಿತಗೊಳಿಸುವಂತೆ ಆಗ್ರಹಿಸಿದ್ದರು. ಇದೀಗ ಕಟ್ಟಡ ನಿರ್ಮಾಣ ಕಾರ್ಯದ ಅಂತಿಮ ಹಂತದಲ್ಲಿ ತೆರವಿಗೆ ಆಗ್ರಹಿಸಿರುವುದು ಚರ್ಚೆಗೆ ಕಾರಣವಾಗಿದೆ.
ಕಟ್ಟಡ ನಿರ್ಮಾಣವಾಗುತ್ತಿರುವ ಸಂದರ್ಭದಲ್ಲೇ ನಿರ್ಮಾಣವನ್ನು ತಡೆಯುತ್ತಿದ್ದಲ್ಲಿ ಇಂದು ಈ ಪರಿಸ್ಥಿತಿ ಬರುತ್ತಿರಲಿಲ್ಲ. ಅದು ಬಿಟ್ಟು ಕಟ್ಟಡ ನಿರ್ಮಾಣವಾಗುವವರೆಗೆ ಸುಮ್ಮನಿದ್ದು, ಕಟ್ಟಡ ನಿರ್ಮಾಣದ ಅಂತಿಮ ಹಂತದಲ್ಲಿ ತೆರವಿಗೆ ಆಗ್ರಹಿಸುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.