Advertisement

ಹಕ್ಕೊತ್ತಾಯಗಳ ಜಾರಿಗಾಗಿ ಆಗ್ರಹ

05:47 AM Jun 02, 2020 | Team Udayavani |

ಮಂಡ್ಯ: ಉದ್ಯೋಗ, ಆಹಾರ ಮತ್ತು ಹಿಂಸೆ ತಡೆಗೆ ಒತ್ತಾಯಿಸಿ ಅಖೀಲ ಭಾರತ ಜನವಾದಿ ಮಹಿಳಾ ಸಂಘಟನೆ ಕಾರ್ಯಕರ್ತರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು. ಕಚೇರಿ ಎದುರು ಜಮಾಯಿಸಿದ  ಪ್ರತಿಭಟನಾಕಾರರು ಸರ್ಕಾರ ವಿರೋಧಿ ಭಿತ್ತಿಪತ್ರಗಳನ್ನು ಹಿಡಿದು ಘೋಷಣೆ ಕೂಗಿದರು. ಮಹಿಳೆಯರ ಘನತೆಯ ಬದುಕಿಗಾಗಿ ಮಂಡಿಸಿರುವ ಹಕ್ಕೊತ್ತಾಯಗಳನ್ನು ಕೂಡಲೇ ಜಾರಿಗೊಳಿಸುವಂತೆ ಆಗ್ರಹಿಸಿದರು.

Advertisement

ಆದಾಯ  ತೆರಿಗೆಯಿಂದ ಹೊರಗಿರುವ ಎಲ್ಲ ಕುಟುಂಬಗಳ ಖಾತೆಗೆ 7500 ರೂ. ಜಮೆ ಮಾಡುವು ದು. ಪ್ರತಿಯೊಬ್ಬರಿಗೂ ತಲಾ 10 ಕೆಜಿಯಂತೆ ಆಹಾರ ಧಾನ್ಯಗಳನ್ನು 6 ತಿಂಗಳವರೆಗೆ ಉಚಿತವಾಗಿ ನೀಡಬೇಕು. ಆಹಾರ ಧಾನ್ಯಗಳ ಜೊತೆಗೆ ಇತರೆ ಜೀವ ನಾವಶ್ಯಕ  ವಸ್ತುಗಳು, ಮಹಿಳೆಯರಿಗೆ ಸ್ಯಾನಿಟರಿ, ನ್ಯಾಪ್‌ಕಿನ್‌ಗಳನ್ನು ಪಡಿತರ ಅಂಗಡಿಗಳ ಮೂಲಕ ಉಚಿತವಾಗಿ ವಿತರಿಸುವಂತೆ ಒತ್ತಾಯಿಸಿದರು.

ಉದ್ಯೋಗಖಾತರಿ ಯೋಜನೆಯನ್ನು ನಗರ ಪಂಚಾಯ್ತಿಗಳಿಗೂ ವಿಸ್ತರಿಸುವುದು, ಕ್ವಾರಂಟೈನ್‌ಗೆ ಒಳಗಾದವರಿಗೆ ಮೂಲ ಸೌಲಭ್ಯ, ತುರ್ತು ಟೆಸ್ಟ್‌ ಮಾಡಿ ಅವಧಿ ಮುಗಿದವರನ್ನು ಗೌರವಯುತವಾಗಿ ಬಿಡುಗಡೆ ಮಾಡಬೇಕು. ಗರ್ಭನಿರೋಧಕ ಸಾಧನಗಳ ಉಚಿತ ವಿತರಣೆ, ಕೆಲಸ ಬಯಸುವ ಎಲ್ಲ ವಯಸ್ಕರರಿಗೆ ನರೇಗಾ ಅಡಿಯಲ್ಲಿ  ಕನಿಷ್ಠ 200 ದಿನಗಳ ಮೇಲ್ಪಟ್ಟು ಕೆಲಸ ಒದಗಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ರಾಜ್ಯಾಧ್ಯಕ್ಷೆ ದೇವಿ, ಜಿಲ್ಲಾಧ್ಯಕ್ಷೆ ಶೋಭಾ, ಜಿಲ್ಲಾ ಕಾರ್ಯದರ್ಶಿ ಸುಶೀಲಾ, ಮಂಜುಳಾ, ಸುನೀತಾ, ಲತಾ, ಕೆ.ಎಸ್‌.ಸುನೀತಾ, ಚಂದ್ರಮ್ಮ, ರಾಣಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next