Advertisement

ಬೆಳೆ ಹಾನಿ ಪರಿಹಾರಕ್ಕೆ ಆಗ್ರಹಿಸಿ ಮನವಿ

03:13 PM Jan 30, 2021 | Team Udayavani |

ಕುಂದಗೋಳ: ತಾಲೂಕಿನ ಗುಡಗೇರಿ ಗ್ರಾಮದಲ್ಲಿ ಬೆಳೆ ವಿಮೆ ಹಾಗೂ ಬೆಳೆ ಹಾನಿ ಪರಿಹಾರ ಇದುವರೆಗೂ ರೈತರಿಗೆ ದೊರೆತಿಲ್ಲ. ಕೂಡಲೇ ಬಿಡುಗಡೆಗೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿ ಗ್ರಾಮದ ರೈತ ಬೆಳೆ ರಕ್ಷಕ ಸಂಘದವರು ತಹಶೀಲ್ದಾರ್‌ ಬಸವರಾಜ ಮೇಳವಂಕಿಯವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.

Advertisement

2018-19 ಹಾಗೂ 2019-20ರ ಬೆಳೆ ವಿಮೆ ಪರಿಹಾರ ಹಣ ಗುಡಗೇರಿ ವ್ಯಾಪ್ತಿಯಲ್ಲಿ ಸರಿಯಾಗಿ ರೈತರಿಗೆ ದೊರೆತಿಲ್ಲ. 2019-20 ಮಂಜೂರಾದ ಬೆಳೆ ಹಾನಿ ಪರಿಹಾರ ಹಣವೂ ಸಮರ್ಪಕವಾಗಿ ರೈತರಿಗೆ ದೊರೆಯದೆ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕೂಡಲೇ ಪರಿಹಾರ ಮೊತ್ತ ಮಂಜೂರು ಮಾಡಬೇಕೆಂದು ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ.

ಇದನ್ನೂ ಓದಿ:ವಕೀಲರ ಸಂಘದ ಕಟ್ಟಡ ಉದ್ಘಾಟನೆ

ಸಂಘದ ಅಧ್ಯಕ್ಷ ಸಂಜು ತಿಮ್ಮನಗೌಡ್ರ, ಉಪಾಧ್ಯಕ್ಷ ಪೂರ್ವಾಚಾರಿ ಸುತಾರ, ಫಕ್ಕೀರಗೌಡ ಮರಶಿದ್ದನವರ, ರಾಜು ಹೊಂಬಳ, ಮಾಂತೇಶ ಸುರಪುರಮಠ, ಪ್ರಕಾಶ ಗಿರಿಮಲ್ಲ, ರಮೇಶ ತಿರ್ಲಾಪುರ, ಹೂವನಗೌಡ ಹಿರೇಗೌಡ್ರ, ಹೊಳಲಪ್ಪಗೌಡ ಹರವಿ,ಚಂದ್ರು ಮಳಲಿ, ಪ್ರಕಾಶ ಕೊಪ್ಪದ, ಹನಮಂತಗೌಡ ಹಿರೇಗೌಡ್ರ, ಎಂ.ಐ. ಶಿಗ್ಲಿ ಮತ್ತಿತರರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next