Advertisement
ಮಂಜೇಶ್ವರ ಹಾರ್ಬರ್‌ನಲ್ಲಿ ಮತ್ತು ಆಸುಪಾಸಿನ ಪ್ರದೇಶಗಳಲ್ಲಿ ರಾತ್ರಿಕಾಲಗಳಲ್ಲಿ ಮರಳು ಹೂಳೆತ್ತುವಿಕೆ ವ್ಯಾಪಕವಾಗಿ ನಡೆಯುತ್ತಿದ್ದು, ಇದನ್ನು ತಡೆಯುವುದಾಗಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು. ಚೆರುವತ್ತೂರು ಮಡಕ್ಕರದಲ್ಲಿ ನಿರ್ಮಿಸಲಾಗುತ್ತಿರುವ ಕೃತಕ ದ್ವೀಪದ ಬಳಿಯೂ ಅಕ್ರಮ ಮರಳು ಹೂಳೆತ್ತುವಿಕೆ ಅಧಿಕವಾಗಿದೆ. ವಲಿಯಪರಂಬ ಗ್ರಾಮ ಪಂಚಾಯತ್‌ನ ಅಸ್ತಿತ್ವಕ್ಕೆ ಧಕ್ಕೆ ತರುವ ರೀತಿ ಅಕ್ರಮ ಮರಳು ದಂಧೆ ನಡೆಯುತ್ತಿದೆ ಎಂದು ಸಭೆ ಖಂಡನೆ ವ್ಯಕ್ತಪಡಿಸಿದೆ. ಇದು ಭಾರೀ ಪ್ರಕೃತಿ ದುರಂತಕ್ಕೆ ಕಾರಣವಾಗಲಿದೆ ಎಂದು ಸಭೆ ಕಳಕಳಿ ವ್ಯಕ್ತಪಡಿಸಿದೆ.
Related Articles
Advertisement
ಅಕ್ರಮ ಗೂಡಂಗಡಿ, ಹೊಟೇಲ್ ಇತ್ಯಾದಿಗಳನ್ನು ಮುಚ್ಚುವಂತೆ ಸಭೆ ಆಗ್ರಹಿಸಿದೆ. ಆಹಾರ ಸುರಕ್ಷತೆಯ ಗುಣಮಟ್ಟ ಹೊಂದಿರದೇ ಇರುವ ಈ ಸಂಸ್ಥೆಗಳ ವಿರುದ್ಧ ಕ್ರಮಕೈಗೊಂಡಿರುವುದಾಗಿ ಸಂಬಂಧಪಟ್ಟ ಇಲಖೆ ಸಿಬ್ಬಂದಿ ಸಭೆಯಲ್ಲಿ ತಿಳಿಸಿದರು. ಮೀನುಗಾರಿಕೆ ಇಲಾಖೆಯ ಯೋಜನೆ ಪ್ರಕಾರ ಮೀನುಗಾರರಿಗೆ ಜಾಗ ಒದಗಿಸುವ ಯೋಜನೆ ಚುರುಕಿನಿಂದ ಸಾಗುವಂತೆ ಮಾಡಲು ಸಭೆ ಆದೇಶಿಸಿದೆ. ಕಡಲತೀರದ 50 ಮೀಟರ್ ಅಂತರದಲ್ಲಿ ವಾಸಿಸುತ್ತಿರುವ ಎಲ್ಲರನ್ನೂ ಸ್ಥಳಾಂತರ ನಡೆಸಲಾಗಿದೆ. ಸ್ವಂತ ಮನೆ ಕಟ್ಟಿಕೊಳ್ಳುವ ನಿಟ್ಟಿನಲ್ಲಿ 4 ಲಕ್ಷ ರೂ., ಸ್ವಂತ ಜಾಗ-ಮನೆ ಇಲ್ಲದವರಿಗೆ 3 ಸೆಂಟ್ಸ್ ಜಾಗ, ಮನೆ ಕಟ್ಟಿಕೊಳ್ಳಲು 6 ಲಕ್ಷ ರೂ.(ಒಟ್ಟು 10 ಲಕ್ಷ ರೂ.) ಆರ್ಥಿಕ ಸಹಾಯ ಮಂಜೂರು ಮಾಡಲಾಗುವುದು. ಕರಾವಳಿಯ 200 ಮೀಟರ್ ಅಂತರದಲ್ಲಿ ವಾಸಿಸುವ ಮಂದಿಯನ್ನು ಈ ನಿಟ್ಟಿನಲ್ಲಿ ಪರಿಶೀಲಿಸಲಾಗುವುದು ಎಂದು ತಿಳಿಸಲಾಯಿತು.
2018-19 ರಾಜ್ಯ ವಾರ್ಷಿಕ ಯೋಜನೆಯಲ್ಲಿ ಶೇ.100 ಸಾಧನೆ ನಡೆಸಿದ 15 ಇಲಾಖೆಗಳ ಸಿಬ್ಬಂದಿಯನ್ನು ಅಭಿನಂದಿಸಲಾಯಿತು. ಶಾಸಕರು ಅಭಿನಂದನೆ ನಡೆಸಿದರು. ಜಿಲ್ಲಾ ಯೋಜನೆ ಅಧಿಕಾರಿ ಎಸ್.ಸತ್ಯಪ್ರಕಾಶ್ ವರದಿ ವಾಚಿಸಿದರು
ಮಣ್ಣು ಅಗೆಯಲು ಪರವಾನಗಿ ಬೇಕು
ಜಿಲ್ಲೆಯಲ್ಲಿ 300 ಚದರ ಅಡಿ ವಿಸ್ತೀರ್ಣ ವರೆಗಿನ ಜಾಗಗಳಲ್ಲಿ ಮಣ್ಣು ಅಗೆಯುವ ವಿಚಾರಕ್ಕೆ ಸಂಬಂಧಿಸಿ ಸ್ಥಳೀಯಾಡಳಿತ ಸಂಸ್ಥೆಗಳು ಲ್ಯಾಂಡ್ ಡೆವೆಲಪ್‌ಮೆಂಟ್ ಪರವಾನಗಿ ನೀಡುವಂತೆ ಜಿಲ್ಲಾ ಅಭಿವೃದ್ಧಿ ಸಮಿತಿ ಸಭೆ ಆದೇಶಿಸಿದೆ.
ಜಿಲ್ಲಾಧಿಕಾರಿ ಕಚೇರಿ ಕಿರು ಸಭಾಂಗಣದಲ್ಲಿ ನಡೆದ ಸಭೆ ಈ ವಿಚಾರ ತಿಳಿಸಿದೆ. ಪರವಾನಗಿ ಸಹಿತ ಅರ್ಜಿ ಸಲ್ಲಿಸಿದರೆ ಟ್ರಾನ್ಸಿಟಿಪಾಸ್ ನೀಡುವಲ್ಲಿ ಜಿಯಾಲಜಿಸ್ಟ್ ಸೂಕ್ತ ಕ್ರಮಕೈಗೊಳ್ಳುವಂತೆ ಸಭೆ ನಿರ್ದೇಶ ನೀಡಿದೆ.
ಈ ಸಂಬಂಧ ಜಿಲ್ಲಾ ಯೋಜನೆ ಅಧಿಕಾರಿ ಸರಕಾರಕ್ಕೆ ಪತ್ರ ರವಾನಿಸಿದ್ದಾರೆ. 300 ಚದರ ಅಡಿ ವರೆಗಿನ ಮನೆ ನಿರ್ಮಾಣಕ್ಕೆ ಜಾಗವನ್ನು ಸಮತಟ್ಟುಗೊಳಿಸುವ ನಿಟ್ಟಿನಲ್ಲಿ ಮಣ್ಣು ಅಗೆಯುವುದಿದ್ದಲ್ಲಿ ಕ್ವಾರಿಂಗ್ ಪರವಾನಗಿಯ ಅಗತ್ಯವಿಲ್ಲ. ಆದುದರಿಂದ ಜಿಲ್ಲೆಯ ಗ್ರಾಮ ಪಂಚಾಯತ್‌ಗಳಲ್ಲಿ ಈ ಪರಿಯ ಮನೆಗಳ ನಿರ್ಮಾಣಕ್ಕೆ ಮಣ್ಣು ತೆರವುಗೊಳಿಸುವುದಿದ್ದರೆ ಅಭಿವೃದ್ಧಿ ಪರವಾನಗಿ ಅನುಮತಿ ನೀಡುವಂತೆ ಸಭೆ ಗ್ರಾಮ ಪಂಚಾಯತ್ ಕಾರ್ಯದರ್ಶಿಗಳಿಗೆ ಆದೇಶ ನೀಡಿದೆ.