ವಿಜಯಪುರ: ಕೋವಿಡ್ ಸೋಂಕು ಇಲ್ಲದ ಬಡಾವಣೆಗಳಲ್ಲಿ ಕಂಟೈನ್ಮೆಂಟ್ ಝೋನ್‌ಗಳಿಂದ ಮುಕ್ತಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ನೇತೃತ್ವ ವಹಿಸಿದ್ದ ಅಲ್ಪಸಂಖ್ಯಾತ ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್ ಮಾತನಾಡಿ, ಕೋವಿಡ್ ವೈರಸ್ ಹಾವಳಿ ಇಲ್ಲದ ಬಡಾವಣೆಗಳ ಜನತೆಯು ಲಾಕ್‌ಡೌನ್‌ಗೆ ಸುಮಾರು 55 ದಿನಗಳಿಂದ ಸಹಕಾರ ನೀಡುತ್ತ ಬಂದಿದ್ದಾರೆ. ವಿಜಯಪುರ ನಗರ ಆರೇಂಜ್ ಝೋನ್‌ನಲ್ಲಿ ಇರುವುದರಿಂದ ಬೇರೆ ಕಡೆ ದಿನನಿತ್ಯದ ಕೆಲಸ ಕಾರ್ಯಗಳು ನಡೆಯುತ್ತಿದ್ದು. ಕಂಟೈನ್ಮೆಂಟ್ ಝೋನ್ ಪ್ರದೇಶದ ಜನತೆಯ ಅಂಗಡಿಗಳು ನಿರ್ಬಂಧಿತ ಪ್ರದೇಶದ ಹೊರತಾಗಿವೆ ಎಂದರು.
ಕಂಟೈನ್ಮೆಂಟ್ ಪ್ರದೇಶದ ಜನರು ಸಂಕಷ್ಟದಲ್ಲಿದ್ದಾರೆ. ಮಧುಮೇಹ, ಕ್ಯಾನ್ಸರ್, ರಕ್ತದೊತ್ತಡ ಸೇರಿದಂತೆ ನೂರಾರು ಜನರು ಗಂಭೀರ ಕಾಯಿಲೆಗಳಿಂದ ಬಳಲುತ್ತಿದ್ದು ಚಿಕಿತ್ಸೆಗೆ ಪರದಾಡುವಂತಾಗಿದೆ. ಅನೇಕರು ಮಾನಸಿಕ ಖನ್ನತೆಗೆ ಒಳಗಾಗುತ್ತಿದ್ದಾರೆ. ಕಂಟೈನ್ಮೆಂಟ್ ಪ್ರದೇಶದಲ್ಲಿ ಕಡು ಬಡವರಿದ್ದು ದಿನಗೂಲಿ ಕಾರ್ಮಿಕರೇ ಅಧಿಕ ಸಂಖ್ಯೆಯಲ್ಲಿದ್ದಾರೆ. ದಿನನಿತ್ಯದ ಕೆಲಸ ನಿರ್ವಹಿಸಿ ತಮ್ಮ ಜೀವನ ನಡೆಸುತ್ತಿದ್ದು ಈ 55 ದಿನಗಳ ಲಾಕ್‌ಡೌನ್‌ನಿಂದ ಆರ್ಥಿಕವಾಗಿ ಕಷ್ಟದಲ್ಲಿದ್ದಾರೆ ಎಂದು ಸಮಸ್ಯೆ ವಿವರಿಸಿದರು.
ವಿಜಯಪುರ ನಗರದಲ್ಲಿರುವ ಕಂಟೈನ್ಮೆಂಟ್ ಝೋನ್ ಪ್ರದೇಶ ತುಂಬಾ ವಿಶಾಲವಾಗಿದೆ. ಇದರಲ್ಲಿ ಕೋವಿಡ್ ವೈರಸ್ ರೋಗದಿಂದ ಬಾಧೀತವಲ್ಲದ ಜುಮ್ಮಾ ಮಸ್ಜಿàದ್ ಲೈನ್‌ನಲ್ಲಿ ಬರುವ ಬಡಾವಣೆಗಳಾದ ಕೆಎಚ್‌ಬಿ ಕಾಲೋನಿ, ಕಸ್ತೂರಿ ಕಾಲೋನಿ, ಮುಬಾರಕ್ ಚೌಕ್, ಮದೀನಾ ಕಾಲೋನಿ, ಬಾಗಾಯತ ಗಲ್ಲಿ, ಝಂಡಾ ಕಟ್ಟಾ, ಇಂದಿರಾ ನಗರ, ಪೇಟಿ ಬೌಡಿ, ಹರಿಯಾಲ ಗಲ್ಲಿ, ಶೇಡಜಿ ಬಗೀಚಾ, ಜುಲೈ ಗಲ್ಲಿ, ಹಕೀಂಚೌಕ್, ಕುಂಚಿ ಕೊರವರ ಗಲ್ಲಿ, ರೋಡಗಿ ಮಡ್ಡಿ ಮುಂತಾದ ಬಡಾವಣೆಗಳು ಸೇರಿವೆ. ಈ ಪ್ರದೇಶಗಳ ಜನರು ಕೋವಿಡ್ ವೈರಸ್ ರೋಗ ಬಾಧಿ ತರಿಲ್ಲ ಎಂದು ವಿವರಿಸಿದರು.
ಕಂಟೈನ್ಮೆಂಟ್ ಝೋನ್ ಪ್ರದೇಶದಲ್ಲಿ
ಬರುವುದರಿಂದ ಸೀಲ್ ಡೌನ್‌ನಿಂದ ಜನ ಕಷ್ಟಪಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಬಾಧಿತವಲ್ಲದ ಪ್ರದೇಶವನ್ನು ಕಂಟೇನ್ಮೆಂಟ್ ಝೋನ್ ನಿರ್ಬಂಧ ತೆರವು ಮಾಡಿ, ಜನರಿಗೆ ಅನುಕೂಲ ಮಾಡಿಕೊಡುವಂತೆ ಮನವಿ ಮಾಡಿದರು. ಜಮೀರ್‌ಅಹ್ಮದ ಭಕ್ಷಿ, ಆರತಿ ಶಹಾಪುರ, ಇರ್ಫಾನ್ ಶೇಖ್, ಶಬ್ಬೀರ್ ಜಾಗೀರದಾರ, ಅಕ್ರಂ ಮಾಶ್ಯಾಳಕರ, ಸಲೀಂ ಪೀರಜಾದೆ, ಇಮಾಮಸಾಬ ಹೂಲ್ಲೂರ, ರವೀಂದ್ರ ಜಾಧವ, ಹೈದರ್ ನದಾಫ್, ಆಸ್ಮಾ ಶೇಖ್, ಧನರಾಜ, ಮಲ್ಲು ತೊರವಿ, ಸುನೀಲ ಬಿರಾದಾರ, ಹಾಜಿ ಪಿಂಜಾರ ಸೇರಿದಂತೆ ಇತರರು ಇದ್ದರು.