Advertisement

ಹಡಗಲಿ ಪ್ರೌಢಶಾಲೆ ಕಟ್ಟಡ ನಿರ್ಮಾಣಕ್ಕೆ ಆಗ್ರಹಿಸಿ ಮನವಿ

02:41 PM Jul 15, 2019 | Team Udayavani |

ರೋಣ: ತಾಲೂಕಿನ ಯಾ.ಸ. ಹಡಗಲಿ ಗ್ರಾಮದಲ್ಲಿ ಉನ್ನತೀಕರಿಸಿದ ಪ್ರೌಢಶಾಲೆ ಪ್ರಾರಂಭವಾಗಿ ಆರೇಳು ವರ್ಷಗಳು ಕಳೆದಿದೆ. ಇದುವರೆಗೂ ನೂತನ ಕಟ್ಟಡ ನಿರ್ಮಿಸಿಲ್ಲ. ಕೂಡಲೇ ಕಟ್ಟಡ ನಿರ್ಮಿಸಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿ ಯಾ.ಸ. ಹಡಗಲಿ ಗ್ರಾಮಸ್ಥರು ತಹಶೀಲ್ದಾರ ಶರಣಮ್ಮ ಕಾರಿ ಅವರಿಗೆ ಮನವಿ ಸಲ್ಲಿಸಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಬಸವರಾಜ ಹಾದಿಮನಿ, 2013 ರಲ್ಲಿ ಗ್ರಾಮದಲ್ಲಿ ಉನ್ನತೀಕರಿಸಿದ ಪ್ರೌಢಶಾಲೆ ಪ್ರಾರಂಭವಾಗಿದೆ. ಗ್ರಾಮದ ಹಾಗೂ ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಶಾಲೆ ಪ್ರಾರಂಭಿಸಿರುವುದು ಸ್ವಾಗತಾರ್ಹ. ಆದರೆ 7 ವರ್ಷಗಳು ಕಳೆದರು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇದುವರೆಗೂ ಇತ್ತ ಗಮನಹರಿಸುತ್ತಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಕಟ್ಟಡ ನಿರ್ಮಾಣಕ್ಕೆ 1. 10 ಎಕರೆ ಜಾಗ ಗುರುತಿಸಲಾಗಿದೆ.ಎಲ್ಲ ಅನುಕೂಲತೆಗಳಿದ್ದರು ಕಟ್ಟಡ ನಿರ್ಮಾಣ ಮಾಡಲು ಹಿಂದೇಟು ಹಾಕುತ್ತಿರುವುದು ಖಂಡನೀಯ.

ಸ್ವಂತ ಕಟ್ಟಡವಿಲ್ಲದಿರುವುದರಿಂದ ಶಿಕ್ಷಕರು ಪ್ರಾಥಮಿಕ ಶಾಲೆ ಕೊಠಡಿಯಲ್ಲಿ ಪಾಠ ಮಾಡುವಂತ ಸ್ಥಿತಿ ನಿರ್ಮಾಣವಾಗಿದೆ.ಆದ್ದರಿಂದ ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಧರಣಿ ಸತ್ಯಾಗ್ರಹ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಶರಣಪ್ಪ ಬೇವಿನಕಟ್ಟಿ, ಮೆಹಬೂಬ್‌ ನದಾಫ್‌, ಶರಣಪ್ಪ ಕೊಪ್ಪದ, ಗುರುಶಾಂತಪ್ಪ ಸೂಡಿ, ನಿಂಗಪ್ಪ ಹೊನ್ನಾಪುರ, ಭೀಮಣ್ಣ ಇಂಗಳಿ, ರುದ್ರೇಶ ಮಾದರ, ಗದ್ದೇಶ ಹಿರೇಮನಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next