Advertisement

ಒತ್ತುವರಿ ತೆರವಿಗೆ ಆಗ್ರಹ

03:34 PM Dec 12, 2019 | Team Udayavani |

ಗಂಗಾವತಿ: ನಗರದ ಮಹಾತ್ಮ ಗಾಂಧಿ  ವೃತ್ತ ಸೇರಿ ಪ್ರಮುಖ ವೃತ್ತಗಳಲ್ಲಿ ನಗರಸಭೆಯ ಫುಟ್‌ಪಾತ್‌ ಒತ್ತುವರಿ ತೆರವುಗೊಳಿಸುವಂತೆ ಒತ್ತಾಯಿಸಿ ಕರವೇ (ಪ್ರವೀಣ ಶೆಟ್ಟಿ) ಬಣದ ಕಾರ್ಯಕರ್ತರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿ ನಗರಸಭೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

Advertisement

ಅಮೃತ್‌ ಸಿಟಿ ಯೋಜನೆಯಡಿ ನಿರ್ಮಾಣಗೊಂಡಿರುವ ಫುಟ್‌ಪಾತ್‌ ಜಾಗೆ ಒತ್ತುವರಿ ಮಾಡಿ ಅಂಗಡಿ ಸಾಮಾನು ಇರಿಸಲಾಗುತ್ತಿದೆ. ಕೇಂದ್ರ ಬಸ್‌ ನಿಲ್ದಾಣದ ಎದುರಿಗಿದ್ದ ಬಡ ಮತ್ತು ಸಣ್ಣ ವ್ಯಾಪಾರಿಗಳನ್ನು ಒಕ್ಕಲೆಬಿಸಲಾಗುತ್ತಿದೆ. ಆಟೋಚಾಲಕರಿಗೆ ಆಟೋ ನಿಲ್ಲಿಸಲು ಜಾಗ ಕೊಡುತ್ತಿಲ್ಲ. ನಗರದಲ್ಲಿ ಅಮೃತ ಸಿಟಿ ಯೋಜನೆಯಲ್ಲಿ ಹಲವಾರು ಯೋಜನೆಗಳನ್ನು ಕೈಗೊಳ್ಳಲಾಗಿದ್ದು ಕಾಮಗಾರಿ ಕಳಪೆಯಾಗಿವೆ.

ಜಿಲ್ಲಾಡಳಿತದ ನೆಪ ಹೇಳಿ ನಗರಸಭೆ ಫುಟ್‌ಪಾತ್‌ ವ್ಯಾಪಾರಿಗಳಿಗೆ ಜಾಗೆ ಖಾಲಿ ಮಾಡಿಸಿ ತೊಂದರೆ ನೀಡಲಾಗುತ್ತಿದೆ. ಸಿಬಿಎಸ್‌ ವೃತ್ತದಿಂದ ಗಾಂಧಿ ಸರ್ಕಲ್‌ವರೆಗೆ ಫುಟ್‌ಪಾತ್‌ ನಿರ್ಮಾಣಗೊಂಡಿದ್ದು, ಈ ಫುಟ್‌ ಪಾತ್‌ ಯಾವುದೇ ಸಾರ್ವಜನಿಕರಿಗೆ ಉಪಯೋಗವಾಗುವ ರೀತಿಯಲ್ಲಿ ನಿರ್ಮಿಸಿಲ್ಲ. ಶ್ರೀಮಂತರ ಮಳಿಗೆಗಳ ಮೆಟ್ಟಿಲುಗಳಿಗಾಗಿ ನಿರ್ಮಾಣವಾಗಿದೆ. ರಸ್ತೆ ಅಗಲೀಕರಣ ವಿಷಯದಲ್ಲಿ ನಗರಸಭೆ ತಾರತಮ್ಯ ನೀತಿ ಅನುಸರಿಸಿರುವುದು ಕಂಡುಬಂದಿದೆ. ಕಳಪೆ ಕಾಮಗಾರಿ ಕೂಡಲೇ ನಿಲ್ಲಿಸಬೇಕು. ಆಟೋದವರಿಗೆ ನಿಲ್ದಾಣದ ವ್ಯವಸ್ಥೆ ಮಾಡಬೇಕು. ಗೂಡಂಗಡಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡುವಂತೆ ಒತ್ತಾಯಿಸಲಾಯಿತು.

ಪ್ರತಿಭಟನೆಯಲ್ಲಿ ಪಂಪಣ್ಣ ನಾಯಕ, ಹುಸೇನಸಾಬ್‌, ಮಹೇಂದ್ರ, ಶಂಕರ ಪೂಜಾರಿ, ಹುಲುಗಪ್ಪ ಹಸೇನಸಾಬ್‌, ಸಿದ್ದು ನಾಯಕ, ಅಫ್ಜಲ್‌, ಕೃಷ್ಣ, ಪರಶುರಾಮ, ಅಂಜಿ ಪೂಜಾರಿ ಸೇರಿ ಹಲವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next