Advertisement

ರಾಜಕಾಲುವೆಗೆ ಅತಿಕ್ರಮ ಕಾಂಪೌಂಡ್ ಗೋಡೆ ತೆರವುಗೊಳಿಸಲು ಮನವಿ

02:40 PM Nov 30, 2021 | Team Udayavani |

ಕುಷ್ಟಗಿ: ಪಟ್ಟಣದ ಬಸವೇಶ್ವರ ವೃತ್ತದ ಬಳಿ ರಾಜಕಾಲುವೆಗೆ ಅತಿಕ್ರಮ ಕಾಂಪೌಂಡ್ ಗೋಡೆ ತೆರವುಗೊಳಿಸಿ ಎರಡನೇ ವಾರ್ಡ ಸಂಪರ್ಕ ರಸ್ತೆ ಕಲ್ಪಿಸಬೇಕೆಂದು ಆಗ್ರಹಿಸಿ ವಾರ್ಡಿನ ಸದಸ್ಯರು ಪುರಸಭೆ ಅಧ್ಯಕ್ಷ ಗಂಗಾಧರಸ್ವಾಮಿ ಹಿರೇಮಠ, ಮುಖ್ಯಾಧಿಕಾರಿ ಉಮೇಶ ಕೆ. ಹಿರೇಮಠ ಅವರಿಗೆ ಮನವಿ ಸಲ್ಲಿಸಿದರು.

Advertisement

ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಪೊಲೀಸ್ ಇಲಾಖೆ, ತೊಟಗಾರಿಕೆ ಇಲಾಖೆ ಮದ್ಯೆ ಇರುವ ರಾಜಕಾಲುವೆಗೆ ಹೊಂದಿಕೊಂಡು ಕಾಂಪೌಂಡ್ ಗೋಡೆ ನಿರ್ಮಿಸಲಾಗಿದೆ. ರಾಜಕಾಲುವೆಯಲ್ಲಿ ಚರಂಡಿ ನೀರು ಸುಗಮವಾಗಿ ಹರಿಯಲು ಆಸ್ಪದ ಇಲ್ಲ. ಸದರಿ ಚರಂಡಿಯಲ್ಲಿ ತ್ಯಾಜ್ಯ ತುಂಬಿದ್ದು ದುರ್ವಾಸನೆಗೆ ಕಾರಣವಾಗಿದೆ.

ಈಗಾಗಲೇ ಬಂದ್ ಆಗಿರುವ ರಾಜಕಾಲುವೆ ವ್ಯವಸ್ಥಿತವಾಗಿ ಹರಿಯಲು ಹಾಗೂ ಅದರ ಮೇಲೆ ರಸ್ತೆ ನಿರ್ಮಿಸಿ 2 ನೇ ವಾರ್ಡಗೆ ಸಂಪರ್ಕ ರಸ್ತೆ ಕಲ್ಪಿಸಲು ಪುರಸಭೆ ಯೋಜಿಸಿದೆ. ಪೊಲೀಸ್ ಹಾಗೂ ತೋಟಗಾರಿಕೆ ಇಲಾಖೆ ಕಾಂಪೌಂಡ್ ಗೋಡೆ ತೆರವುಗೊಳಿಸದೇ ವ್ಯವಸ್ಥಿತ ರಾಜಕಾಲುವೆ ಹಾಗೂ ಸಂಪರ್ಕ ರಸ್ತೆ ಸಾದ್ಯವಿಲ್ಲ. ಈ ಹಿನ್ನೆಲೆಯಲ್ಲಿ ತುರ್ತಾಗಿ ಅತಿಕ್ರಮ ಕಂಪೌಡ್ ತೆರವುಗೊಳಿಸಿ ಮುಂದಿನ ಕಾರ್ಯಯೋಜನೆಗೆ ಅನುಕೂಲ ಕಲ್ಪಿಸಬೇಕು. ಈ ವಿಷಯದಲ್ಲಿ ವಿಳಂಬ ಧೋರಣೆ ಅನುಸರಿಸಿದರೆ ಪುರಸಭೆಗೆ ಮುತ್ತಿಗೆ ಹಾಕುವುದಾಗಿ ಸ್ಥಳೀಯರು ಎಚ್ಚರಿಸಿದ್ದಾರೆ.

ವಾರ್ಡಿನ ಸದಸ್ಯ ರಾಜೇಶ ಪತ್ತಾರ, ವೀರೇಶಗೌಡ ಬೆದವಟ್ಟಿ ಅಮೀನುದ್ದೀನ್ ಮುಲ್ಲಾ, ಹುಲಗಪ್ಪ ಮೇದರ್ ರಮೇಶ ಮೇದರ್ ಮಹ್ಮದ್ ರಫಿ, ಅನ್ವರ್ ಅತ್ತಾರ, ಬಸವರಾಜ ಗಾಣಗೇರ, ಬಾವುದ್ದೀನ್, ರಮೇಶ ಚಲವಾದಿ, ರಾಮಣ್ಣ ನೆರೆಬೆಂಚಿ, ಹನುಮೇಶ ಕುಲಕರ್ಣಿ ಮೊದಲಾದವರು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next