Advertisement

ಸರ್ಕಾರಿ ಭೂಮಿ ಒತ್ತುವರಿ ತೆರವಿಗೆ ಮನವಿ

01:07 PM Dec 27, 2019 | Suhan S |

ಕೋಲಾರ: ಜಿಲ್ಲೆಯ ಕೆಜಿಎಫ್‌ ತಾಲೂಕು ಕ್ಯಾಸಂಬಳ್ಳಿ ಹೋಬಳಿ ಬೆನ್ನವಾರ ಗ್ರಾಮದ ಸರ್ವೇ ನಂಬರ್‌ಗಳಾದ 65ರಲ್ಲಿ 137 ಎಕರೆ ಮತ್ತು ಸರ್ವೇ ನಂ.45 ಗೋಮಾಳದಲ್ಲಿ 107 ಎಕರೆ ಜೊತೆಗೆ ಗುಂಡುತೋಪು, ಸ್ಮಶಾನ ಒತ್ತುವರಿ ಮಾಡಿಕೊಂಡಿದ್ದು, ತೆರವು ಮಾಡಿಸುವಂತೆ ಕೋರಿ ಜನಾಧಿಕಾರ ಸಂಘಟನೆಯಿಂದ ರಾಜ್ಯ ಕಂದಾಯ ಇಲಾಖೆ ಪ್ರಧಾನ ಕಾರ್ಯ ದರ್ಶಿ ಮಂಜುನಾಥ್‌ ಪ್ರಸಾದ್‌ರಿಗೆ ಮನವಿ ಸಲ್ಲಿಸಲಾಗಿದೆ.

Advertisement

ಮನವಿ ಸಲ್ಲಿಸಿ ಮಾತನಾಡಿದ ಸಂಘಟನೆಯ ಮುಖಂಡರು, ಇದರ ಜತೆಗೆ ಮಿಟ್ಟಕೊತ್ತೂರು ಗ್ರಾಮದ ಸರ್ವೇನಂ 35ರಲ್ಲಿ ನಕಲಿ ದಾಖಲೆಗಳ ಆಧಾರದ ಮೇಲೆ 3 ಎಕರೆ ಮತ್ತು ಉಳಿಕೆ ಗೋಮಾಳವನ್ನು ಹಾಗೂ ಸರ್ಕಾರಿ ಭೂಮಿ ಗಳನ್ನು ಬಲಾಡ್ಯರು ಅಕ್ರಮ ದಾಖಲೆಗಳನ್ನು ಸೃಷ್ಟಿಸಿ ಕಬಳಿಕೆಮಾಡಿಕೊಂಡಿದ್ದು, ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಭೂ ಕಬಳಿಕೆದಾರರಾದ ಜಿಪಂ ಸದಸ್ಯ ಜಯ ಪ್ರಕಾಶ್‌ ನಾಯ್ಡು ಉರುಫ್‌ ಬುಜ್ಜಿ ನಾಯ್ಡು ಹಾಗೂ ಅವರ ಕುಟುಂಬ ವರ್ಗದವರು ಮತ್ತು ಫಾರೂಕ್‌ ಬಿನ್‌ ನವಾಬ್‌ ಸಾಬ್‌ ಎಂಬುವರು ಸರ್ಕಾರಿ ಜಮೀನು ಕಬಳಿಸಿ, ನೂರಾರು ಎಕರೆ ತಮ್ಮ ಸ್ವಾಧೀನಕ್ಕೆ ತೆಗೆದುಕೊಂಡಿರುತ್ತಾರೆ ಎಂದು ದೂರಿದರು.

ಆ ಗ್ರಾಮದ ಸುತ್ತಮುತ್ತ ಗ್ರಾಮಗಳವರೆಗೂ ಭೂ ಹೀನ ದಲಿತ ಹಿಂದುಳಿದವರಿಗೂ ಭೂಮಿ ಹಕ್ಕು ಸ್ವಾಧೀನ ಸಿಕ್ಕದಂತೆ ಸಂವಿಧಾನ ಆಶಯಗಳಿಗೆ ಹಾಗೂ ಕಂದಾಯ ಅಧಿನಿಯಮಗಳ ಕಾನೂನು ಉಲ್ಲಂ ಸಿ ಹಗಲು ದರೋಡೆ ರೀತಿಯಲ್ಲಿ ಅಧಿಕಾರ ಮತ್ತು ಹಣ ಉಪ ಯೋಗಿಸಿ ಸಂಬಂಧಪಟ್ಟ ಕಂದಾಯ ಇಲಾಖೆಯ ಅಧಿಕಾರಿಗಳನ್ನು ಶಾಮೀಲು ಮಾಡಿಸಿಕೊಂಡು ಭೂಮಿ ಒತ್ತುವರಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಕೋಟ್ಯಂತರ ರೂ. ಬೆಲೆ ಬಾಳುವ ಭೂಮಿ ಯನ್ನು ಕಬಳಿಸಿ ಇದನ್ನು ಕೇಳಲು ಹೋದ ದಲಿತ, ಹಿಂದುಳಿದ ವರ್ಗದವರಿಗೆ ವಿನಾಕಾರಣ ಕಿರುಕುಳ ಕೊಡುತ್ತಾ ತಮ್ಮ ಗೂಂಡಾ ಪಡೆಗಳೊಂದಿಗೆ ದೌರ್ಜನ್ಯವೆಸಗಲು ಹಾಗೂ ಜಾತಿ ನಿಂದನೆ ಮಾಡಲು ಪ್ರಯತ್ನಿಸಿರುತ್ತಾರೆ ಎಂದು ದೂರಿದರು. ಇಂತಹ ಸಂದರ್ಭದಲ್ಲಿ ಬೆನ್ನವಾರ ಮತ್ತು ಸುತ್ತ ಮುತ್ತ ಗ್ರಾಮದ ಭೂ ಹೀನರಾದ ದಲಿತರು, ಹಿಂದುಳಿದವರು, ಜನಾಧಿಕಾರ ಸಂಘಟನೆಯ ಬೆಂಬಲವನ್ನು ಕೋರಿರುತ್ತಾರೆ.

Advertisement

ಈಗಾಗಲೇ ಜನಾಧಿಕಾರ ಸಂಘಟನೆಯಿಂದ ಸರ್ಕಾರದ ಜಿಲ್ಲಾಡಳಿತಕ್ಕೆ ಮನವಿ ಮತ್ತು ಕೆಜಿಎಫ್‌ ತಹಶೀಲ್ದಾರ್‌ ಕಚೇರಿ ಮುಂದೆ ಜು.26ರಂದು ಒತ್ತುವರಿ ತೆರವಿಗೆ ಸಾಂಕೇತಿಕ ಪ್ರತಿಭಟನೆಯ ಮೂಲಕ ಮನವಿ ಮಾಡಿರುತ್ತೇವೆ.

ಈ ಸಂಬಂಧ ಮನವಿ ಸ್ವೀಕರಿಸಿದ ತಹಶೀಲ್ದಾರ್‌ ಕೂಡ ಈತನಕ ಕ್ರಮ ಜರುಗಿಸಿರುವುದಿಲ್ಲ. ಸರ್ಕಾರಿ ಗೋಮಾಳವನ್ನು ಮತ್ತು ಗುಂಡು ತೋಪು, ಸ್ಮಶಾನ ಇವುಗಳನ್ನು ಒತ್ತುವರಿ ಮಾಡಿ ಕೊಂಡಿರುವ ಮೂಲಕ ಆಸಾಮಿಗಳ ಜೊತೆ ತಹಶೀಲ್ದಾರ್‌ ಶಾಮೀಲಾಗಿದ್ದಾರೆ ಎಂದು ದೂರು ಒತ್ತುವರಿ ತಡೆಗೆ ಕೋರಿದರು.

ನಿಯೋಗದಲ್ಲಿ ಜನಾಧಿಕಾರ ಸಂಘಟನೆಯ ಅಧ್ಯಕ್ಷ ಕೆ.ರಾಮಮೂರ್ತಿ, ಹಿರಿಯ ಮುಖಂಡ ಹೂವರಸನಹಳ್ಳಿ ರಾಜಪ್ಪ, ದಲಿತ ವಿಮೋ ಚನೆಯ ಮಾನವ ಹಕ್ಕುಗಳ ವೇದಿಕೆ ಬಸವ ರಾಜ್‌ ಕೌತಾಳ್‌, ಕೆಜಿಎಫ್‌ ಅಧ್ಯಕ್ಷ ಎಂ. ತಿಪ್ಪಣ್ಣ, ಕಾರ್ಯದರ್ಶಿ ಸುಬ್ರಮಣಿ, ಮುಂಂಡರಾದ ಎಂ.ಮಾರುತಿ ಪ್ರಸಾದ್‌, ರೆಹಮತ್‌ ಉಲ್ಲಾ, ನಾರಾಯಣಸ್ವಾಮಿ, ಮುನಿರಾಜು, ಶಿವಣ್ಣ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next