Advertisement

ಎಕ್ಸ್‌ ಲ್‌ ಕಾಸ್ತ ಹರಾಜು ರದ್ದತಿಗೆ ಮನವಿ

08:39 AM Jun 23, 2020 | Suhan S |

ರಾಯಚೂರು: ತಾಲ್ಲೂಕಿನ ಮರ್ಚೆಡ್‌ ಗ್ರಾಮದ ಸರ್ಕಾರಿ ಭೂಮಿಯನ್ನು ಭೂಹೀನರಿಗೆ ಹಂಚಿಕೆ ಮಾಡದಿದ್ದರೆ, ಏಕ್ಸ್‌ಲ್‌ ಕಾಸ್ತ ಹರಾಜು ರದ್ದುಪಡಿಸುವಂತೆ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಸದಸ್ಯರು ಸೋಮವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

Advertisement

ಮರ್ಚೆಡ್‌ ಗ್ರಾಮದ ಸರ್ವೇ ನಂಬರ್‌ 262, 424ಗಳಲ್ಲಿ 20 ಕುಟುಂಬಗಳು ಐದು ದಶಕದಿಂದ ಫಾರಂ ನಂಬರ್‌ 50, 53 ಹಾಗೂ 57 ಅರ್ಜಿ ಸಲ್ಲಿಸುತ್ತಾ ಸಾಗುವಳಿ ಮಾಡಿಕೊಂಡು ಬರುತ್ತಿದ್ದಾರೆ. ಈ ಬಗ್ಗೆ ಅನೇಕ ಹೋರಾಟಗಳ ಮೂಲಕ ಜಿಲ್ಲಾಡಳಿತ, ತಾಲೂಕು ಆಡಳಿತದ ಗಮನಕ್ಕೆ ತರಲಾಗಿದೆ ಎಂದು ವಿವರಿಸಿದರು.

ಆದರೆ, ತಾಲೂಕು ಆಡಳಿತವು ಈ ಸರ್ವೇ ನಂಬರ್‌ಗಳಲ್ಲಿ ಏಕ್ಸ್‌ಲ್‌ ಕಾಸ್ತ ಹರಾಜನ್ನು ಪ್ರತಿವರ್ಷ ಹಾಕಿ ಬಡವರಿಂದ ಹಣ ಪಡೆಯುತ್ತಿದೆ. ಕೋವಿಡ್‌-19ನಿಂದಾಗಿ ಬಡ ರೈತರು ಉದ್ಯೋಗವಿಲ್ಲದೇ ಸಂಕಷ್ಟ ಎದುರಿಸುತ್ತಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಏಕ್ಸ್‌ಲ್‌ ಕಾಸ್ತ ಹರಾಜು ಪುನಾರಾಂಭಿಸಲಾಗಿದೆ. ಇದರಿಂದ ಬಡವರಿಗೆ ಸಮಸ್ಯೆಯಾಗುತ್ತದೆ ಎಂದು ದೂರಿದರು.

ಸಮಿತಿ ಮುಖಂಡರಾದ ಮಾರೆಪ್ಪ ಹರವಿ, ನರಸಿಂಹ ಕುರಬದೊಡ್ಡಿ, ಆಂಜನೇಯ ಕುರುಬದೊಡ್ಡಿ, ಗೋವಿಂದದಾಸ್‌ ಸೇರಿ ಅನೇಕರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next