ಚಿಕ್ಕೋಡಿ: ತಾಲೂಕಿನ ನಾಗರಮುನ್ನೋಳ್ಳಿ ಗ್ರಾಮದಲ್ಲಿ ಸಮರ್ಪಕ ಬಸ್ ನಿಲ್ಲಿಸಬೇಕೆಂದು ಒತ್ತಾಯಿಸಿ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಂಘಟನೆಯಿಂದ ಗುರುವಾರ ಬೆಳಗ್ಗೆ ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ಗ್ರಾಮದಿಂದ ಚಿಕ್ಕೋಡಿಗೆ ದಿನ ನಿತ್ಯ ನೂರಾರೂ ವಿಧ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಹೋಗುತ್ತಿದಾರೆ. ಗ್ರಾಮದಿಂದ ಚಿಕ್ಕೋಡಿಗೆ ಹೋಗುವ ವಿದ್ಯಾರ್ಥಿಗಳಿಗೆ ಕಳೆದ ಎರಡು ವರ್ಷದಿಂದ ಬೆಳಗಿನ ಸಮಯಲ್ಲಿ ಹೆಚ್ಚುವರಿಯಾಗಿ ಬಸ್ ಆಗಮಿಸುತ್ತಿತು. ಆದರೆ ಕಳೆದ 15 ದಿನಗಳಿಂದ ಬಸ್ ಬಾರದ ಹಿನ್ನಲೆಯಲ್ಲಿ ಬಸ್ ಸಮಸ್ಯೆಯಿಂದ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಪರೀಕ್ಷಾ ಕೇಂದ್ರಕ್ಕೆ ಹೊಗಲು ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಈಗಾಗಲೇ ಇಲ್ಲಿರುವ ಸಮಸ್ಯೆ ಕುರಿತು ಅನೇಕ ಬಾರಿ ಸಂಬಂದಪಟ್ಟ ಅಧಿಕಾರಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಆದರಿಂದ್ದ ಶೀಘ್ರವೇ ಸಾರಿಗೆ ಇಲಾಖೆ ಅಧಿಕಾರಿಗಳು ಕೂಡಲೇ ಪ್ರತಿಭಟಣಾ ಸ್ಥಳಕ್ಕೆ ಆಗಮಿಸಬೇಕು ಎಂದು ಪಟ್ಟು ಹಿಡಿದರು. ಸ್ಥಳಕ್ಕೆ ಆಗಮಿಸಿದ ಸಾರಿಗೆ ಇಲಾಖೆ ಅಧಿಕಾರಿಗಳನ್ನು ವಿದ್ಯಾರ್ಥಿಗಳು ತರಾಟೆ ತೆಗೆದುಕೊಂಡು ಮುಂದಿನ ದಿನಗಳಲ್ಲಿ ಸಮಸ್ಯೆ ಬಗ್ಗೆ ಹರಿಯದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ನಂತರ ಸ್ಥಳಕ್ಕೆ ಆಗಮೀಸಿದ ಸಾರಿಗೆ ಇಲಾಖೆಯ ವ್ಯವಸ್ಥಾಪಕ ಅಧಿಕಾರಿ ಸಂಗಪ್ಪ ಮನವಿ ಸ್ವೀಕರಿಸಿ ಮಾತನಾಡಿ, ಪರಿûಾ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದ ರೀತಿ ದಿನ ನಿತ್ಯ ಬಸ್ ವ್ಯವಸ್ಥೆ ಮಾಡಿಕೊಂಡಲಾಗುವದು ಎಂದರು. ಪ್ರತಿಭಟನೆಯಲ್ಲಿ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತಿನ ರಾಜ್ಯ ಕಾರ್ಯಕಾರಣಿ ಸದಸ್ಯರಾದ ಮಲ್ಲಿಕಾರ್ಜುನ ಈಟಿ, ನ್ಯಾಯವಾದಿ ರಮೇಶ ಕಾಳನ್ನವರ, ಚನ್ನಬಸು ಮನಗೂಳಿ, ಅಕ್ಷಯ ಹಿರೆಮಠ, ಮಂಜುನಾಥ ಆಲೂರೆ, ಸುದೀಪ ಬಿರನಗಡ್ಡಿ, ಮಂಜು ಮಾನಗಾವಿ,ಅಕ್ಷತಾ ಹಿರೆಮಠ ಶೋಭಾ ಕಾಳನ್ನವರ, ದಾನೇಶ್ವರಿ ಬೆಳಗಲಿ, ಕಾಜು ಮುಲ್ತಾನಿ,ಸಲ್ಲಿಮ್ ಜಮಾದರ, ಆರತಿ ಇಟನಾಳೆ, ಲಕ್ಷ್ಮೀ ಬೀಡದವರ, ಲಕ್ಷ್ಮಣ ಖಗನ್ನವರ, ಮಂಜುನಾಥ ನೇರಲಗಿ, ಸೋಮಲಿಂಗ ಮಾಳಿ, ಉಪಸ್ಥರಿದರು.