Advertisement

20 ಯುನಿಟ್‌ ರಕ್ತ ಸಂಗ್ರಹ, ರಕ್ತದಾನಕ್ಕೆ ಮನವಿ

10:26 PM Apr 22, 2020 | Sriram |

ಉಡುಪಿ: ಕೋವಿಡ್-19 ಲಾಕ್‌ಡೌನ್‌ ಸಮಸ್ಯೆಯಿಂದ ಅಜ್ಜರಕಾಡು ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರದಲ್ಲಿ ರಕ್ತದ ಕೊರತೆ ಕಂಡು ಬಂದಿದ್ದು, ನಿಷೇಧಾಜ್ಞೆಯ ಕಾರಣದಿಂದ ರಕ್ತದಾನ ಶಿಬಿರಗಳನ್ನು ಸಂಘ ಸಂಸ್ಥೆಗಳು ನಡೆಸದಿರುವುದು ರಕ್ತದ ಕೊರತೆ ಎದುರಾಗಲು ಮುಖ್ಯ ಕಾರಣವಾಗಿದೆ.

Advertisement

ರಕ್ತನಿಧಿ ಕೇಂದ್ರದಲ್ಲಿ ರಕ್ತದ ಕೊರತೆ ಇರುವ ವಿಚಾರ ತಿಳಿದು ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರು ಮಂಗಳವಾರ ತುರ್ತು ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಜಿಲ್ಲಾಸ್ಪತ್ರೆಯಲ್ಲಿ ಆಯೋಜಿಸಿದರು. ಸ್ವಯಂಪ್ರೇರಿತ 20 ರಕ್ತದಾನಿಗಳಿಂದ ರಕ್ತದಾನ ಮಾಡಿಸುವ ಮೂಲಕ ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರಕ್ಕೆ 20 ಯುನಿಟ್‌ ರಕ್ತವನ್ನು ಒದಗಿಸಿ ಸಹಕರಿಸಿದ್ದಾರೆ. ತುರ್ತು ರಕ್ತದಾನ ಮಾಡಿದ ರಕ್ತದಾನಿಗಳಿಗೆ ಹಾಗೂ ತುರ್ತು ಶಿಬಿರ ಆಯೋಜಿಸಿದ ವಿಶು ಶೆಟ್ಟಿ ಅವರಿಗೆ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ| ವೀಣಾ ಅವರು ಅಭಿನಂದಿಸಿದ್ದಾರೆ.

ರಕ್ತದಾನಿಗಳಿಗೆ ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರದಲ್ಲಿ ರಕ್ತದಾನ ಮಾಡಲು ನಿತ್ಯವು ಅವಕಾಶ ಒದಗಿಸಲಾಗಿದ್ದು, ನಿಷೇಧಾಜ್ಞೆಯ ಸಮಯದಲ್ಲಿ ಬಂದು ಹೋಗಲು ಪಾಸ್‌ ವ್ಯವಸ್ಥೆ ಮಾಡಲಾಗಿದೆ. ರಕ್ತದಾನಿಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ಮುಖಕ್ಕೆ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಕರೆ ಮಾಡಿ ಹೆಸರು ನೋಂದಾಯಿಸಿದ್ದಲ್ಲಿ ದಾನಿಗಳಿಗೆ ಪಾಸನ್ನು ವಾಟ್ಸಾಪ್‌ ಸಂಖ್ಯೆಗೆ ರವಾನಿಸಲಾಗುತ್ತದೆ ಎಂದು ವಿಶು ಶೆಟ್ಟಿ ತಿಳಿಸಿದ್ದಾರೆ.

ಹೆಸರು ನೋಂದ‌ಣಿ, ಪಾಸ್‌ ಪಡೆಯಲು ರಕ್ತನಿಧಿ ಕೇಂದ್ರಯ ದೂ.ಸಂ.:-08202531633ಕ್ಕೆ ಸಂಪರ್ಕಿಸಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next