Advertisement

ಸಂಗೀತ ಶಿಕ್ಷಕರ ನೇಮಕಾತಿಗೆ ಆಗ್ರಹಿಸಿ ಮನವಿ

12:29 PM Feb 02, 2020 | Suhan S |

ರಾಮದುರ್ಗ: ಶಿಕ್ಷಣದ ಎಲ್ಲಾ ಹಂತದಲ್ಲಿ ಸಂಗೀತ ಶಿಕ್ಷಕರ ನೇಮಕಾತಿ ಮಾಡುವಂತೆ ಒತ್ತಾಯಿಸಿ ಅಖೀಲ ಕರ್ನಾಟಕ ಗಾನಯೋಗಿ ಸಂಗೀತ ಪರಿಷತ್‌ ತಾಲೂಕು ಘಟಕದ ನೇತೃತ್ವದಲ್ಲಿ ನಿರುದ್ಯೋಗಿ ಸಂಗೀತ ಶಿಕ್ಷಕರು ತಹಶೀಲ್ದಾತರ್‌ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

Advertisement

ಕಳೆದ 10 ವರ್ಷಗಳಿಂದ ಸಂಗೀತ ಶಿಕ್ಷಕರ ನೇಮಕಾತಿ ನಡೆದಿಲ್ಲ. ಸಮಾಜ ಕಲ್ಯಾಣ ಇಲಾಖೆಯ ಮೊರಾರ್ಜಿ ಶಾಲೆಗಳಲ್ಲಿ ಶಿಕ್ಷಕರ ನೇಮಕಾತಿಯು 2011ರಲ್ಲಿ 283 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಅದರಲ್ಲಿ ನೇಮಕಾತಿಯಾಗದೆ ಹಲವಾರು ಹುದ್ದೆಗಳು ಖಾಲಿ ಇವೆ. ಹಲವಾರು ನಿರುದ್ಯೋಗಿ ಸಂಗೀತಗಾರರು ವಿದ್ವತ ಪದವಿಯನ್ನು ಮುಗಿಸಿ ಸಂಗೀತ ಶಿಕ್ಷಕರಾಗುವ ಕನಸ್ಸನ್ನು ಕಾಣುತ್ತಿದ್ದಾರೆ. ಸಂಗೀತ ನಮ್ಮ ನಾಡಿದ ಸಂಸ್ಕೃತಿ ಅದನ್ನು ಉಳಿಸಿ ಬೆಳೆಸಬೇಕಿದೆ. ಸಂಗೀತ ಶಿಕ್ಷಣದ ಒಂದು ಅವಿಭಾಜ್ಯ ಅಂಗವಾಗಿದೆ. ಅಲ್ಲದೇ ಮಕ್ಕಳ ಮಾನಸಿಕ ಒತ್ತಡ ಕಡಿಮೆ ಮಾಡಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸಹಾಯಕವಾಗಿದೆ.

ಕರ್ನಾಟಕ ರಾಜ್ಯ ಪರೀಕ್ಷಾ ಕೇಂದ್ರಗಳಲ್ಲಿ ಪ್ರತಿವರ್ಷ ಸಾವಿರದಿಂದ ಎರಡೂ ಸಾವಿರ ವಿದ್ಯಾರ್ಥಿಗಳು ತೇರ್ಗಡೆ ಹೊಂದುತ್ತಿದ್ದಾರೆ. ಇಂದಿನ ಪ್ರತಿಯೊಂದು ಕಾರ್ಯಕ್ರಮಗಳಿಗೆ ಸಂಗೀತಬೇಕು. ಆದರೆ ಸಂಗೀತ ಶಿಕ್ಷಕರ ನೇಮಕಾತಿ ಮಾತ್ರ ಏಕೆ ಆಗುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ. ಸಂಸ್ಕೃತ ಮತ್ತು ಉರ್ದು ಪಾಠ ಶಾಲೆಗಳಿಗೆ ಅನುದಾನ ನೀಡುವ ಮಾದರಿಯಲ್ಲಿ ಸಂಗೀತ ಮತ್ತು ನೃತ್ಯ ಕಲಾ ಪಾಠ ಶಾಲೆಗಳಿಗೆ ಸರಕಾರ ಅನುದಾನ ನೀಡಬೇಕು. ನಿಯಮ ಬಾಹಿರವಾಗಿ ಹುಟ್ಟಿಕೊಂಡಿರುವ ಖಾಸಗಿ ಸಂಗೀತ ನೃತ್ಯ ಪಾಠ ಶಾಲೆಗಳಿಗೆ ಕಡಿವಾಣ ಹಾಕಬೇಕು. ಸಂಗೀತ ಶಿಕ್ಷಕರ ನೇಮಕಾತಿಯಲ್ಲಿ ತಾಳ ವಾದ್ಯ ಮತ್ತು ವಾದ್ಯ ಸಂಗೀತ ಶಿಕ್ಷಕರಿಗೂ ನೇಮಕಾತಿ ಮಾಡಿಕೊಳ್ಳಬೇಕು ಎಂದು ಮನವಿ ಮೂಲಕ ಸರಕಾರವನ್ನು ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಗಾನಯೋಗಿ ಸಂಗೀತ ಪರಿಷತ್‌ ತಾಲೂಕು ಸಂಘಟನಾ ಕಾರ್ಯದರ್ಶಿ ಮೈಲಾರ ಭಜಂತ್ರಿ, ನಿವೃತ್ತ ಸಂಗೀತ ಶಿಕ್ಷಕ ಪಿ.ಎಂ. ಹೂಗಾರ, ಕೆ.ಎಸ್‌. ಕೊಳದೂರ, ಎಚ್‌.ಎಸ್‌. ಮೇಟಿ, ಆಸ್ಪಾಕಸಾಬ ನದಾಫ್‌, ಇರಫಾನಬಾಯಿ ಮುಲ್ಲಾ, ಚಂದ್ರ ಬಂಡಿವಡ್ಡರ, ಸುಧಾ ಆಗಾಸಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next