Advertisement

ಸಮರ್ಪಕ ಪಿಂಚಣಿ ನೀಡುವಂತೆ ಆಗ್ರಹಿಸಿ ಮನವಿ

11:09 AM Nov 22, 2019 | Suhan S |

ಬನಹಟ್ಟಿ: ಸಂಧ್ಯಾ ಸುರಕ್ಷಾ ಯೋಜನೆ, ವಿಧವಾ ವೇತನ ಯೋಜನೆ, ಅಂಗವಿಕಲ ವೇತನ ಯೋಜನೆ ಫಲಾನುಭವಿಗಳಿಗೆ ಸಮರ್ಪಕವಾಗಿ ಪಿಂಚಣಿ ಬರುತ್ತಿಲ್ಲ ಎಂದು ಆರೋಪಿಸಿ ಹಿರಿಯ ನಾಗರಿಕರು ಗುರುವಾರ ತಹಶೀಲ್ದಾರ್‌ ಕಚೇರಿಯಲ್ಲಿ ಗ್ರೇಡ್‌-2 ತಹಶೀಲ್ದಾರ್‌ ಎಸ್‌. ಬಿ. ಕಾಂಬಳೆ ಅವರಿಗೆ ಮನವಿ ಸಲ್ಲಿಸಿದರು.

Advertisement

ಪಿಂಚಣಿಯ ಮೇಲೆ ಇಲ್ಲಿನ ಹಿರಿಯ ಜೀವಿಗಳು, ಅಸಹಾಯಕರು ಬದುಕು ಕಟ್ಟಿಕೊಂಡಿದ್ದಾರೆ. ಹೀಗಿರುವಾಗ ಕೆಲ ತಿಂಗಳುಗಳಿಂದ ಸಾಕಷ್ಟು ಜನ ಹಿರಿಯ ಜೀವಿಗಳಿಗೆ, ವಿಧವೆಯರಿಗೆ, ಅಂಗವಿಕಲರಿಗೆ ಸರಿಯಾಗಿ ಪಿಂಚಣಿ ಬಂದಿಲ್ಲ. ಇದರಿಂದ ಪಿಂಚಣಿದಾರರು ಸಂಬಂಧಿಸಿದ ಕಚೇರಿಗಳಿಗೆ, ಬ್ಯಾಂಕ್‌ಗಳಿಗೆ, ಪೋಸ್ಟ್‌ ಆಫೀಸ್‌ಗಳಿಗೆ ಅಲೆದಾಡುವಂತಾಗಿದೆ. ಈಗ ಪಿಂಚಣಿ ಇಲ್ಲದೆ ತೊಂದರೆ ಅನುಭವಿಸುತ್ತಿದ್ದೇವೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಸಂತ್ರಸ್ತರ ಕಡೆಗೆ ಹೆಚ್ಚು ಗಮನ ಕೊಟ್ಟಿರುವ ಸರ್ಕಾರ ಹಿರಿಯ ಜೀವಗಳನ್ನು ಕಡೆಗಣಿಸಿದಂತೆ ಕಾಣುತ್ತದೆ. ಪಿಂಚಣಿಗಾಗಿ ನಿತ್ಯವೂ ಪರದಾಡುತ್ತಿರುವ ಫಲಾನುಭವಿಗಹಳಿಗೆ ಪಿಂಚಣಿ ನೀಡಿ ಬದುಕಲು ಅವಕಾಶ ಮಾಡಿ ಕೊಡಬೇಕೆಂದು ವಿವಿಧ ಸಂಘಟನೆಗಳ ಮುಖಂಡರು, ಪಿಂಚಣಿದಾರರು ಆಗ್ರಹಿಸಿದ್ದಾರೆ.

ಸಾಮಾಜಿಕ ಹೋರಾಟಗಾರರಾದ ವಿರೂಪಾಕ್ಷ ಟಿರಕಿ, ಕಾಡಪ್ಪ ಫಕೀರಪೂರ, ಮಹಾದೇವ ಹಂದಿಗುಂದ, ಮೈಹಬೂಬ ನಧಾಪ, ಸಂಗಮೇಶ ಮಠಪತಿ, ರಾಜ್ಯ ಮಾನವ ಹಕ್ಕು ಮತ್ತು ಮಾಹಿತಿ ಹಕ್ಕುಗಳ ಜಾಗೃತಿ ಹಾಗೂ ಸಾರ್ವಜನಿಕ ಸೇವಾ ಸಮಿತಿ ರಾಜ್ಯಾಧ್ಯಕ್ಷ ಕೆ. ಎಸ್‌.ರಂಗಸ್ವಾಮಿ, ಚಂದ್ರಶೇಖರ ಫಕೀರಪುರ, ಮಹದೇವಪ್ಪ ನಿಂಬರಗಿ, ಭೀಮಪ್ಪ ಚಿನಗುಂಡಿ, ಸಿದ್ದರಾಮಪ್ಪ ಮಠದ, ಈಶ್ವರ ಬೀಳಗಿ, ಭಾರತಿ ಕೊಪರ್ಡೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next