Advertisement

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮನವಿ

11:52 AM Jun 29, 2018 | |

ವಿಜಯಪುರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಸ್‌ಯುಸಿಐ ಮುಖಂಡರ ನಿಯೋಗ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿತು.

Advertisement

ಎಸ್‌ಯುಸಿಐ ಕಮ್ಯೂನಿಷ್ಟ ಪಕ್ಷದ ಜಿಲ್ಲಾ ಕಾರ್ಯದರ್ಶಿ ಭಗವಾನರೆಡ್ಡಿ ನೇತೃತ್ವದ ನಿಯೋಗದಲ್ಲಿ ಮಹಾನಗರ
ಪಾಲಿಕೆಗೆ ಮನವಿ ಸಲ್ಲಿಸಿ, ವಿಜಯಪುರ ನಗರಸಭೆಯಿಂದ ಮಹಾನಗರ ಪಾಲಿಕೆಯಾಗಿ ಉನ್ನತಿಕರಿಸಲಾಗಿದೆ.

ಆದರೆ ನಗರದಲ್ಲಿ ಸ್ವತ್ಛತೆ ಕಾರ್ಯಕ್ಕೆ ಆದ್ಯತೆ ನೀಡುವಲ್ಲಿ ಪಾಲಿಕೆ ವಿಫಲವಾಗಿದೆ. ನಗರದಾದ್ಯಂತ ಕಸ ವಿಲೇವಾರಿಗೆ ಪ್ರತಿ ಮನೆಯಿಂದ ಕಸ ಸಂಗ್ರಹಿಸುವ ವಾಹನ ಒದಗಿಸಿದ್ದರೂ ನಗರದಲ್ಲಿ ಎಲ್ಲೆಲ್ಲೂ ಕಸದ ರಾಶಿ ಕಂಡು ಬರುತ್ತಿದ್ದು, ದುರ್ವಾಸನೆ ಹರಡಲು ಕಾರಣವಾಗಿದೆ ಎಂದು ದೂರಿದ್ದಾರೆ. 

ಈ ಕಸ ತುಂಬುವ ವಾಹನಗಳು ದಿನ ನಿತ್ಯ ಬಂದು ಕಸ ಸಂಗ್ರಹಿಸುತ್ತಿಲ್ಲ. ಹಲವೆಡೆ ಎರಡು ದಿನಕ್ಕೆ ಒಮ್ಮೆ ಕಸ ಸಂಗ್ರಹಿಸುತ್ತಿದ್ದು, ಮತ್ತೆ ಕೆಲವೆಡೆ 2- 3 ದಿನಗಳಿಗೊಮ್ಮೆ ಕಸ ಸಂಗ್ರಹಿಸಲಾಗುತ್ತಿದೆ. ಹಲವು ಕಡೆಗಳಲ್ಲಿ ವಾರವಾದರೂ ಕಸ ಸಂಗ್ರಹ ನಡೆಯುತ್ತಿಲ್ಲ. ಕಸದ ಗಾಡಿಗಳು ಬಂದರೂ ಸಾರ್ವಜನಿಕರಿಗೆ ಕೇಳುವಂತೆ ಹಾರ್ನ್ ಹೊಡೆಯದ ಕಾರಣ ಸಾರ್ವಜನಿಕರಿಗೆ ತಿಳಿಯುವುದೇ ಇಲ್ಲ. 

ಮತ್ತೂಂದೆಡೆ ಕಸ ಸಂಗ್ರಹಿಸುವ ವಾಹನ ಸಮಯಕ್ಕೆ ಸರಿಯಾಗಿ ಬರುವುದಿಲ್ಲ. ಇದರಿಂದ ಮನೆಗಳ ಎದುರು ಬೀದಿ
ನಾಯಿಗಳು, ಹಂದಿಗಳ ಕಾಟ ಹೆಚ್ಚಾಗುತ್ತಿದೆ ಎಂದು ದೂರಿದ್ದಾರೆ. ಕೂಡಲೇ ಮಹಾನಗರ ಪಾಲಿಕೆ ಕಸದ
ವಾಹನಗಳು ದಿನ ನಿತ್ಯವೂ ಬರುವಂತೆ ಕ್ರಮ ತೆಗೆದುಕೊಳ್ಳಬೇಕು. ವಾಹನಗಳು ಬರುವಾಗ ಹಾರ್ನ್ ಹಾಕುವುದನ್ನು ಕಡ್ಡಾಯಗೊಳಿಸಬೇಕು. ಈ ಹಿಂದೆ ಎಲ್ಲ ಓಣಿಗಳಲ್ಲಿ ಇದ್ದ ಕಸದ ತೊಟ್ಟಿಗಳನ್ನು ಮರುಸ್ಥಾಪಿಸಬೇಕು. ಇದರಿಂದಾಗಿ ಕಸದ ಗಾಡಿಗೆ ಕಸ ಹಾಕದೆ ಉಳಿದಾಗ ಸಾರ್ವಜನಿಕ ಕಸದ ತೊಟ್ಟಿಗೆ ಹಾಕಲು ಅನುಕೂಲಾಗುತ್ತದೆ. ನರದಾದ್ಯಂತ ಬಿಡಾಡಿ ದನಗಳು, ಬೀದಿನಾಯಿಗಳು ಮತ್ತು ಹಂದಿಗಳನ್ನು ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. 

Advertisement

ಬಾಳು ಜೇವೂರ, ಭರತಕುಮಾರ, ಸಿದ್ದಲಿಂಗ ಬಾಗೆವಾಡಿ, ಸುಮಾ ಹತ್ತರಕಿ, ಸುನೀಲ, ಸುರೇಖಾ, ಜ್ಯೋತಿ ಇತರರು ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next