Advertisement

ಬೆಳೆ ವಿಮೆಗಾಗಿ ಸಿಎಂಗೆ ಮನವಿ

11:49 AM Jul 28, 2017 | |

ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿವಿಧ ಸಂಘ-ಸಂಸ್ಥೆಗಳ ವತಿಯಿಂದ ನಗರದ ವಿಮಾನ ನಿಲ್ದಾಣದಲ್ಲಿ ಮನವಿ ಸಲ್ಲಿಸಲಾಯಿತು. 2016-17ನೇ ಸಾಲಿನ ವಿಮೆ ಪರಿಹಾರವನ್ನು ಕೂಡಲೇ ವಿತರಿಸಬೇಕೆಂದು ಗದಗ ಜಿಲ್ಲೆಯ ಬರಪೀಡಿತ ರೈತ ಸಮುದಾಯದ ವತಿಯಿಂದ ಮನವಿ ನೀಡಲಾಯಿತು. ಬೆಳೆವಿಮೆ ಕಂತನ್ನು ಭರಿಸಲಾಗಿದ್ದರೂ ಗದಗ ಜಿಲ್ಲೆಯ ರೈತರಿಗೆ ಬೆಳೆವಿಮೆ ಪರಿಹಾರ ನೀಡಿಲ್ಲ.

Advertisement

ಜಿಲ್ಲೆಗೆ ನಿಯೋಜಿತಗೊಂಡಿರುವ ವಿಮೆ ಕಂಪನಿಯಾದ ಯೂನಿವರ್ಸಲ್‌ ಸೋಂಪು ಕಂಪನಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿ ನೂತನ ಬೆಳೆ ಕಟಾವು ಪದ್ಧತಿಗೆ ಅನುಗುಣವಾಗಿ ಪರಿಹಾರ ನೀಡಬೇಕು. ಮುಖ್ಯಮಂತ್ರಿಗಳು ರೈತರ ಆತ್ಮಹತ್ಯೆ ತಡೆದು ರೈತ ಸಮುದಾಯದಲ್ಲಿ ಆತ್ಮವಿಶ್ವಾಸ ಮೂಡಿಸುವ ಕೆಲಸ ಮಾಡಬೇಕು ಎಂದು ಮನವಿ ಮಾಡಲಾಯಿತು.

ಅ.ಕ.ಗ್ರಾಹಕರ ಜಾಗೃತಿ ವೇದಿಕೆ: ನಗರದಲ್ಲಿ ಹಿಂದೂಸ್ತಾನ್‌ ಇನ್‌ಫ್ರಾಕಾನ್‌ ಇಂಡಿಯಾ ಲಿಮಿಟೆಡ್‌ ಕಂಪನಿ ನೂರಾರು ಜನರಿಂದ ಕೋಟ್ಯಂತರ ರೂ. ಹಣ ಲಪಟಾಯಿಸಿದ್ದು, ನೊಂದವರಿಗೆ ನ್ಯಾಯ ಒದಗಿಸಿ ಕೊಡಬೇಕೆಂದು ಅಖೀಲ ಕರ್ನಾಟಕ ಗ್ರಾಹಕರ ಜಾಗೃತಿ ವೇದಿಕೆ ವತಿಯಿಂದ ಮನವಿ ಮಾಡಲಾಯಿತು.

ಜಿಲ್ಲೆಯ ನೂರಾರು ಜನರು ಸೈಟ್‌, ಮನೆಗಾಗಿ ಹಣ ಹೂಡಿಕೆ ಮಾಡಿದ್ದು, ಸಂಸ್ಥೆ ಹಣ ಮರಳಿಸಲು ಹಿಂದೇಟು ಹಾಕುತ್ತಿದೆ. ಸಂಸ್ಥೆಯನ್ನು ಮುಟ್ಟುಗೋಲು ಹಾಕಬೇಕು ಎಂದು ಆಗ್ರಹಿಸಲಾಯಿತು. ಸುಶ್ಮಾ ಬಿಲವಲಕರ, ಯಲ್ಲಮ್ಮ ಕಡಬಿನ ಇದ್ದರು.

ರಕ್ತದಲ್ಲಿ ಪತ್ರ ಬರೆದು ಮನವಿ: ಗಿರಿಯಾಲ ಗ್ರಾಮದ ಮನೆಯ ಹಿತ್ತಲಿನ ಜಾಗವನ್ನು ಅತಿಕ್ರಮಣ ಮಾಡಿಕೊಂಡು ನಿರಂತರ ದಬ್ಟಾಳಿಕೆ ನಡೆಸುತ್ತಿದ್ದು, ನ್ಯಾಯ ಒದಗಿಸಿಕೊಡಬೇಕೆಂದು ಒತ್ತಾಯಿಸಿ ಪರಶುರಾಮ ನಾಗಣ್ಣವರ ರಕ್ತದಲ್ಲಿ ಬರೆದ ಪತ್ರವನ್ನು ಮುಖ್ಯಮಂತ್ರಿಗೆ ನೀಡಿದರು. 

Advertisement

ಮಂಜು ಮೋರೆ, ಅರ್ಜುನ ಮೋರೆ, ರಾಮಚಂದ್ರ ಕಮಲನವರ ನಮ್ಮ ಜಾಗವನ್ನು ಅತಿಕ್ರಮಿಸಿಕೊಂಡು ಬೇಲಿ ಕಟ್ಟಿಕೊಂಡಿದ್ದಲ್ಲದೇ ಶೌಚಾಲಯ ನಿರ್ಮಿಸಿಕೊಂಡಿದ್ದಾರೆ. ನಮ್ಮ ಜಾಗವನ್ನು ನಮಗೆ ಕೊಡಿಸಬೇಕು ಎಂದು ಪರಶುರಾಮ ಹಾಗೂ ಅವರ ಕುಟುಂಬದ ಸದಸ್ಯರು ಸಿಎಂ ಸಿದ್ದರಾಮಯ್ಯಗೆ ಮನವಿ ಮಾಡಿದರು. 

Advertisement

Udayavani is now on Telegram. Click here to join our channel and stay updated with the latest news.

Next