Advertisement

ಬಸ್‌ ಸೌಲಭ್ಯ ಕಲ್ಪಿಸಲು ಆಗ್ರಹ

12:23 PM Aug 10, 2018 | Team Udayavani |

ಶಹಾಪುರ: ತಾಲೂಕಿನ ನಾಗನಟಿಗಿ, ಬಾಣತಿಹಾಳ ಮತ್ತು ಸೈದಾಪುರ ಗ್ರಾಮಗಳಿಗೆ ನಿಗದಿತ ಸಮಯಕ್ಕೆ ವಿದ್ಯಾರ್ಥಿಗಳ ಅನುಕೂಲ ಅನುಸಾರ ಬಸ್‌ ಸಂಚಾರ ಒದಗಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ಸೇನೆ
ಹಾಗೂ ವಿದ್ಯಾರ್ಥಿಗಳು ಇಲ್ಲಿನ ಬಸ್‌ ಡಿಪೋ ಘಟಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.
 
ಈ ಸಂದರ್ಭದಲ್ಲಿ ಮಾತನಾಡಿದ ಸೇನೆಯ ಮುಖಂಡ ಮೌನೇಶ ಸುರಪುರಕರ್‌, ನಾಗನಟಗಿ, ಬಾಣತಿಹಾಳ ಮತ್ತು ಸೈದಾಪುರ ಗ್ರಾಮಗಳಿಗೆ ಸಮರ್ಪಕವಾಗಿ ನಿಗದಿತ ಸಮಯನುಸಾರ ಬಸ್‌ ಸಂಚಾರ ಸೌಲಭ್ಯವಿಲ್ಲದ ಕಾರಣ ವಿದ್ಯಾರ್ಥಿಗಳು ಸೇರಿದಂತೆ ಗ್ರಾಮಸ್ಥರಿಗೆ ತೊಂದರೆಯಾಗಿದೆ. ಕಾರಣ ಕೂಡಲೇ ಬಸ್‌ ಸಂಚಾರ ಸಮಯದಲ್ಲಿ ಬದಲಾವಣೆ ಮಾಡಬೇಕು. ಅಲ್ಲದೆ ಹೆಚ್ಚಿನ ಸೌಕರ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

Advertisement

ಕಳೆದ ಎರಡು ಮೂರು ವರ್ಷದಿಂದ ಈ ಕುರಿತು ಜನಪ್ರತಿನಿಧಿಗಳು ಮತ್ತು ಬಸ್‌ ಡಿಪೋ ಘಟಕ ವ್ಯವಸ್ಥಾಪಕರ
ಗಮನ ಸೆಳೆದರು ಯಾವುದೇ ಪ್ರಯೋಜನವಾಗಿಲ್ಲ. ಬಸ್‌ ಸಂಚಾರ ವೇಳೆ ಬೆಳಗಿನ 7:00 ಗಂಟೆಗೆ ಮಧ್ಯಾಹ್ನ
2:00 ಗಂಟೆ ಬಸ್‌ ಸೌಕರ್ಯ ಕಲ್ಪಿಸಿದ್ದು, ಇದು ವಿದ್ಯಾರ್ಥಿಗಳಿಗೂ ಮತ್ತ ಸಾರ್ವಜನಿಕರಿಗೂ ಅನುಕೂಲವಾಗುತ್ತಿಲ್ಲ. ಕೂಡಲೇ ಬಸ್‌ ಸಂಚಾರ ವೇಳೆ ಬದಲಾಯಿಸಬೇಕು. 

ವಿದ್ಯಾರ್ಥಿಗಳ ಶಾಲಾ ಸಮಯ ಅನುಸಾರ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು. ವಿದ್ಯಾರ್ಥಿಗಳು
ನಿತ್ಯ ನೂರಾರು ರೂಪಾಯಿ ಖರ್ಚು ಮಾಡಿ ಆಟೋ ಮೂಲಕ ಪಟ್ಟಣಕ್ಕೆ ಬರುವಂತಾಗಿದೆ. ಬಡ ವಿದ್ಯಾರ್ಥಿಗಳ
ಗೋಳು ಕೇಳುವವರಿಲ್ಲದೆ, ಶಾಲಾ ಕಾಲೇಜು ಬಿಟ್ಟು ಮನೆಯಲ್ಲಿ ಕಾಲ ಕಳೆಯುವಂತಾಗಿದೆ. ಹೀಗಾಗಿ ಬಡ ಮಕ್ಕಳು ಶೈ ಕ್ಷಣಿಕವಾಗಿ ವಂಚಿತಗೊಂಡಿದ್ದಾರೆ. ಅಲ್ಲದೆ ನಿತ್ಯ ಶಾಲಾ ಕಾಲೇಜಿಗೆ ಬರಲುಪರದಾಡುವಂತಾಗಿದೆ. ಕಾರಣ ಅಧಿಕಾರಿಗಳು ಸಮರ್ಪಕ ಬಸ್‌ ಸಂಚಾರ ಕಲ್ಪಿಸುವ ಮೂಲಕ ಈ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟ ಸುಧಾರಿಸುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಸೈದಾಪುರ, ನಾಗನಟಗಿ ಮತ್ತು ಬಾಣತಿಹಾಳ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next