Advertisement

Govt., ಹಳೆಯ ಮೊಬೈಲ್‌, ಟಿವಿ ಮರು ಖರೀದಿ ಕಡ್ಡಾಯ: ಸರಕಾರ ಚಿಂತನೆ

11:38 PM Sep 10, 2024 | Team Udayavani |

ಬೆಂಗಳೂರು: ಮನೆಗಳಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಟಿವಿ, ಮೊಬೈಲ್‌ನಂತಹ ಇ-ತ್ಯಾಜ್ಯಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಸರಕಾರ ಇನ್ನು ಮುಂದೆ ವಿದ್ಯುನ್ಮಾನ ಉಪಕರಣಗಳ ವಹಿವಾಟಿನಲ್ಲಿ “ಹಳೆಯ ಉತ್ಪನ್ನಗಳ ಮರುಖರೀದಿ’ ಕಡ್ಡಾಯಗೊಳಿಸುವ ಬಗ್ಗೆ ಚಿಂತನೆ ನಡೆಸಿದೆ.

Advertisement

ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಈ ಕುರಿತು ಪ್ರಸ್ತಾವನೆಯೊಂದನ್ನು ಮಂಡಿಸಿದ್ದು, ಸಾಧಕ ಬಾಧಕಗಳ ಅಧ್ಯಯನ ನಡೆಸುವಂತೆ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿ ಪತ್ರ ಬರೆದಿದ್ದಾರೆ.

ಇ-ತ್ಯಾಜ್ಯದ ನಿಯಂತ್ರಣಕ್ಕಾಗಿ, ಯಾವುದೇ ವಿದ್ಯುನ್ಮಾನ ಉಪಕರಣ ಖರೀದಿಸುವಾಗ ಗ್ರಾಹಕರು ಇಚ್ಛಿಸಿದಲ್ಲಿ, ಅವರ ಹಳೆಯ ವಿದ್ಯುನ್ಮಾನ ಉಪಕರಣಗಳನ್ನು ಮಾರಾಟಗಾರರು ಕಡ್ಡಾಯವಾಗಿ ಕನಿಷ್ಠ ಬೆಲೆಯಲ್ಲಿ ಖರೀದಿಸುವ ನಿಯಮ ಜಾರಿಗೊಳಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ.

ಕಂಪ್ಯೂಟರ್‌, ಮೊಬೈಲ್‌ ದತ್ತಾಂಶಗಳು ದುರ್ಬಳಕೆ ಆಗದ ರೀತಿಯಲ್ಲಿ ಹಳೆಯ ವಿದ್ಯುನ್ಮಾನ ಸಲಕರಣೆಗಳ ಮರುಖರೀದಿಯ ಸಾಧಕ-ಬಾಧಕ ಮತ್ತು ಅನುಷ್ಠಾನ ಕುರಿತಂತೆ ತಮಗೆ ಮುಂದಿನ 30 ದಿನಗಳಲ್ಲಿ ಪ್ರಸ್ತಾವನೆ ಸಲ್ಲಿಸುವಂತೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಸಚಿವ ಖಂಡ್ರೆ ಸೂಚನೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next