Advertisement

Ballari: ಕೊನೆಗೂ ನಟ ದರ್ಶನ್‌ ಸೆಲ್‌ಗೆ ಟಿವಿ; ಡಿಡಿ ಚಾನೆಲ್‌ ಮಾತ್ರ

09:04 PM Sep 18, 2024 | Team Udayavani |

ಬಳ್ಳಾರಿ: ನಗರದ ಜೈಲಲ್ಲಿರುವ ನಟ ದರ್ಶನ್‌ ಸೆಲ್‌ಗೆ ಕೊನೆಗೂ ಟಿವಿ ನೀಡಲಾಗಿದ್ದು, ಹಲವು ದಿನಗಳ ಬೇಡಿಕೆ ಈಡೇರಿದಂತಾಗಿದೆ.

Advertisement

ಜೈಲ್‌ನ ಹೈಸೆಕ್ಯುರಿಟಿ ಸೆಲ್‌ನಲ್ಲಿ ಆ.29ರಿಂದ ಇರುವ ದರ್ಶನ್‌ಗೆ ಒಂಟಿತನ ಕಾಡುತ್ತಿದ್ದ ಹಿನ್ನೆಲೆಯಲ್ಲಿ ಟಿವಿ ನೀಡುವಂತೆ ಜೈಲಧಿ ಕಾರಿಗಳ ಬಳಿ ಬೇಡಿಕೆ ಇಟ್ಟಿದ್ದರು.

ಆರಂಭದಿಂದಲೂ ನೀಡುವುದಾಗಿ ಹೇಳುತ್ತಿದ್ದ ಜೈಲ ಧಿಕಾರಿಗಳು, ಟಿವಿ ರಿಪೇರಿ ನೆಪದಲ್ಲಿ ನೀಡಿರಲಿಲ್ಲ. ಬಳ್ಳಾರಿ ಜೈಲಿಗೆ ಬಂದು ತಿಂಗಳ ಹೊಸ್ತಿಲಲ್ಲಿರುವ ದರ್ಶನ್‌ಗೆ ಬುಧವಾರ ಟಿವಿ ನೀಡಲಾಗಿದೆ. ದೂರದರ್ಶನ ಚಾನೆಲ್‌ ಮಾತ್ರ ವೀಕ್ಷಿಸಬಹುದಾಗಿದೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next