Advertisement

Govt.,ಆದಾಯ ಮೂಲಕ್ಕೆ ಸಮಿತಿ ರಚಿಸಿದ ಸರಕಾರ

12:02 AM Sep 10, 2024 | Team Udayavani |

ಬೆಂಗಳೂರು: ರಾಜ್ಯದ ಬೊಕ್ಕಸಕ್ಕೆ ಆದಾಯ ತಂದುಕೊಡಬಲ್ಲ ಮೂಲಗಳನ್ನು ಹುಡುಕಲು ನಿವೃತ್ತ ಐಎಎಸ್‌ ಅಧಿಕಾರಿ ಕೆ.ಪಿ. ಕೃಷ್ಣನ್‌ ನೇತೃತ್ವದಲ್ಲಿ ತಜ್ಞರ ಸಮಿತಿ ರಚಿಸಿರುವ ಸರಕಾರ, 1 ವರ್ಷದೊಳಗೆ ಅಗತ್ಯ ಶಿಫಾರಸುಗಳೊಂದಿಗೆ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿದೆ.

Advertisement

ಗ್ಯಾರಂಟಿ ಸೇರಿದಂತೆ ಹಲವು ಯೋಜನೆಗಳ ಹೊರೆ ಹೊತ್ತುಕೊಂಡಿರುವ ರಾಜ್ಯ ಸರಕಾರ, ಆದಾಯ ಮೂಲಗಳನ್ನು ಹುಡುಕಲು ಶುರು ಮಾಡಿದೆ. 2024-25ನೇ ಸಾಲಿನ ಬಜೆಟ್‌ನಲ್ಲಿ ಇಂಥದೊಂದು ಸಮಿತಿ ರಚಿಸುವ ಸುಳಿವನ್ನೂ ಸರಕಾರ ಕೊಟ್ಟಿತ್ತು. ಅಲ್ಲದೆ, ಬೆಂಗಳೂರು ಸುತ್ತಮುತ್ತ ಇರುವ ಆಸ್ತಿಗಳ ನಗದೀಕರಣದ ಬಗ್ಗೆಯೂ ಚಿಂತನೆಗಳು ನಡೆದಿದ್ದವು. ಈ ಹಿನ್ನೆಲೆಯಲ್ಲಿ ಸಮಿತಿಯೂ ಕಾರ್ಯ ನಿರ್ವಹಿಸುವ ಲಕ್ಷಣಗಳಿವೆ.

ಕೇಂದ್ರದ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್‌ ಮಂಡಳಿ ಅಧ್ಯಕ್ಷರಾಗಿದ್ದ ನಜೀಬ್‌ ಶಾಹ್‌, ನಿವೃತ್ತ ಐಎಎಸ್‌ ಅಧಿಕಾರಿ ಎಚ್‌. ಶಶಿಧರ್‌, ಐಎಸ್‌ಇಸಿ ಪ್ರಾಧ್ಯಾಪಕ ಕೃಷ್ಣರಾಜು, ಆರ್ಥಿಕ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅತೀಕ್‌ ಅವರು ಸಮಿತಿ ಸದಸ್ಯರಾಗಿದ್ದು, ತೆರಿಗೆಯೇತರ ಆದಾಯ ಮೂಲಗಳನ್ನು ಹುಡುಕುವ ಟಾಸ್ಕ್ ಅವರಿಗೆ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next