ಚಿಕ್ಕನಾಯಕನಹಳ್ಳಿ: ಸ್ವಾತಂತ್ರ್ಯ ಭಾರತಕ್ಕೆ ಸದೃಢ ಸಂವಿಧಾನ ರಚಿಸಿದ ಡಾ.ಬಿ.ಆರ್. ಅಂಬೇಡ್ಕರ್‌ಗೆ ಗೌರವ ಸಲ್ಲಿಸುವ ಸುದಿನ ಗಣರಾಜ್ಯೋತ್ಸವವಾಗಿದೆ ಎಂದು ತಹಶೀಲ್ದಾರ್ ತೇಜಸ್ವಿನಿ ಹೇಳಿದರು.
ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ, ವಿವಿಧ ಶಾಲೆಗಳು ಹಾಗೂ ವಿವಿಧ ಸಂಘಟನೆಗಳಿಂದ ನಡೆದ 71ನೇ ಗಣರಾಜ್ಯೋತ್ಸವದಲ್ಲಿ ಧ್ವಜರೋಹಣ ನೆರವೇರಿಸಿ ಮಾತನಾಡಿದರು.
ಪಹಣಿ ತಿದ್ದುಪಡಿಯಲ್ಲಿ 2019 ಅಂತ್ಯಕ್ಕೆ 4,359 ತಿದ್ದುಪಡಿ ಪ್ರಕರಣಗಳ ಪೈಕಿ 2,146 ಪ್ರಕರಣ ತಿದ್ದುಪಡಿ ಮಾಡಲಾಗಿದೆ. 22,982 ಪೈಕಿ ಪಹಣಿ ಪ್ರಕರಣ 2,331ಕ್ಕೆ ಇಳಿಸಲಾಗಿದೆ. 2,000ಕ್ಕೂ ಹೆಚ್ಚು ಫವತಿ ಖಾತೆ ಬದಲಾವಣೆ ಮಾಡಲಾಗಿದೆ. 50ಕ್ಕೂ ಹೆಚ್ಚು ಪಿಂಚಣಿ ಅದಾಲತ್, 60 ಕಂದಾಯ ಅದಾಲತ್ ಆಯೋಜಿಸಿ ಅನುಕೂಲ ಮಾಡಿಕೊಡಲಾಗಿದೆ. ಅಕ್ರಮ ಸಕ್ರಮ ಯೋಜನೆ ಚುರುಕು ಮುಟ್ಟಿಸಿ ಎಲ್ಲಾ ಪ್ರಕರಣ ವಿಲೇವಾರಿ ಮಾಡಿ ಅರ್ಹ 95 ಜನರಿಗೆ ಹಕ್ಕುಪತ್ರ ನೀಡಲಾಗಿದೆ. ತಾಲೂಕು ಸಕಾಲ ಯೋಜನೆಯಲ್ಲಿ ರಾಜ್ಯದ ಸಕಾಲ ರ್‍ಯಾಂಕಿಂಗ್‌ನಲ್ಲಿ ಮುಂಚೂಣಿಯಲ್ಲಿದ್ದು, ಇದರಿಂದ ಅಸ್ಸಾಂ ರಾಜ್ಯದ ಉನ್ನತ ಮಟ್ಟದ ಅಧಿಕಾರಿಗಳ ತಂಡ ತಾಲೂಕಿಗೆ ಆಗಮಿಸಿ ಅಧ್ಯಯನ ಮಾಡಿದ್ದರು ಎಂದು ಹೇಳಿದರು.
ಪೊಲೀಸ್ ಹಾಗೂ ಗೃಹರಕ್ಷಕ ದಳ ಮತ್ತು ವಿವಿಧ ಶಾಲೆಗಳಿಂದ ಪಥ ಸಂಚಲನನಡೆಸುವ ಮೂಲಕ ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಲಾಯಿತು. ರೋಟರಿ, ನವೋದಯ, ಸರ್ಕಾರಿ ಪ್ರೌಢಶಾಲೆ, ಡಿ.ವಿ.ಪಿ, ಕೌಸಲ್ಯ ಶಾಲೆಯ ಮಕ್ಕಳಿಂದ ಕ್ರೀಡಾಂಗಣದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆಯಿತು.
ತಾಪಂ ಅಧ್ಯಕ್ಷೆ ಚೇತನ ಗಂಗಾಧರ್, ಸಿಪಿಐ ವೀಣಾ, ಕ್ಷೇತ್ರ ಶಿಕ್ಷಣಾಧಿಕಾರಿ ಕಾತ್ಯಾಯಿನಿ, ಇಒ ನಾರಾಯಣಸ್ವಾಮಿ, ಪುರಸಭೆ ಸಿಒ ಶ್ರೀನಿವಾಸ್, ವಿವಿಧ ಶಾಲೆಯ ಶಿಕ್ಷಕರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳಿದ್ದರು