Advertisement

Republic Day: 40 ವರ್ಷಗಳ ಬಳಿಕ ಬಂದ ಸಾರೋಟು!

12:46 AM Jan 27, 2024 | Team Udayavani |

ಬರೋಬ್ಬರಿ 40 ವರ್ಷಗಳ ಬಳಿಕ ಗಣರಾಜ್ಯೋತ್ಸವದ ದಿನ ಸಾಂಪ್ರದಾಯಿಕ ಸಾರೋಟು ಬಳಕೆಯಾಗಿದೆ. ಶುಕ್ರವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಫ್ರಾನ್ಸ್‌ ಅಧ್ಯಕ್ಷ ಮ್ಯಾಕ್ರನ್‌ “ಕುದುರೆಗಳ ಸಾರೋಟಿ’ನಲ್ಲಿ ಕರ್ತವ್ಯಪಥಕ್ಕೆ ಆಗಮಿಸಿದರು. ಅವರಿಗೆ 21 ಗನ್‌ ಸೆಲ್ಯೂಟ್‌ಗಳ ಮೂಲ ಕ ಗೌರವ ವಂದನೆ ಅರ್ಪಿಸಿ ಪರೇಡ್‌ಗೆ ಅಧಿಕೃತ ಚಾಲನೆ ನೀಡಲಾಯಿತು. ಈ ಸಾರೋಟಿನ ಕುರಿತು ಒಂದಿಷ್ಟು ಮಾಹಿತಿ ಇಲ್ಲಿದೆ.

Advertisement

ಸಾರೋಟಿನ ಇತಿಹಾಸ: ಕಪ್ಪು-ಬಣ್ಣದ ಈ ಸಾರೋಟು ಚಿನ್ನ ಲೇಪಿತ ರಿಮ್‌ಗಳು ಮತ್ತು ವೆಲ್ವೆಟ್‌ ಒಳಾಂಗಣವನ್ನು ಹೊಂದಿದೆ. ಇದರಲ್ಲಿ ಅಶೋಕ ಚಕ್ರವನ್ನು ಕೆತ್ತಲಾಗಿದೆ. ಆರು ಕುದುರೆ ಗಳ ಮೂಲಕ ಈ ಸಾರೋಟು ಸಂಚರಿಸುತ್ತದೆ. ಬ್ರಿಟಿಷರ ಆಳ್ವಿಕೆ ಅವಧಿಯಲ್ಲಿ ಭಾರತದ ವೈಸ್‌ರಾಯ್‌ ಈ ಸಾರೋಟನ್ನು ಬಳಸುತ್ತಿದ್ದರು.

ಟಾಸ್‌ ಹಾಕಿ ಅದೃಷ್ಟ ಪರೀಕ್ಷೆ: ಬ್ರಿಟಿಷ್‌ ಆಡಳಿತ ಕೊನೆಗೊಂಡ ಬಳಿಕ, ಭಾರತ ಮತ್ತು ಪಾಕಿಸ್ಥಾನದ ನಡುವೆ ಸಾರೋಟಿಗಾಗಿ ಕಚ್ಚಾಟ ಆರಂಭವಾಯಿತು. ಕೊನೆಗೆ “ಟಾಸ್‌ ಹಾಕುವ’ ನಿರ್ಧಾರಕ್ಕೆ ಬರಲಾಯಿತು. ನಾಣ್ಯ ವೊಂದನ್ನು ಚಿಮ್ಮಿಸಿ ಟಾಸ್‌ ಹಾಕಿದಾಗ, ಅದೃಷ್ಟ ಭಾರತದ ಕಡೆಗೆ ಒಲಿದಿತು.

ಬಳಕೆ ನಿಂತಿದ್ದು ಏಕೆ?: ಪ್ರಧಾನಿ ಇಂದಿರಾಗಾಂಧಿ ಹತ್ಯೆಯ ಬಳಿಕ ಭದ್ರತಾ ದೃಷ್ಟಿಯಿಂದ ಬಳಕೆ ಸ್ಥಗಿತಗೊಳಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next