ಹೊಸದಿಲ್ಲಿ: ಪ್ರಸಕ್ತ ಸಾಲಿನ ಗಣರಾಜ್ಯ ದಿನದಂದು ಇದೇ ಮೊದಲ ಬಾರಿಗೆ ಹತ್ತು ಆಸಿಯಾನ್ ರಾಷ್ಟ್ರಗಳ ಮುಖ್ಯಸ್ಥರು ಭಾಗವಹಿ ಸಲಿದ್ದಾರೆ. ಇದುವೇ ಒಂದು ದಾಖಲೆ ಯಾಗಿದ್ದರೆ, ಮತ್ತೂಂದು ದಾಖಲೆಯೂ ನಿರ್ಮಾಣವಾಗಲಿದೆ. ಹತ್ತು ನಾಯಕರು ಭಾಗವಹಿಸಲಿಕ್ಕಾಗಿ 100 ಅಡಿ ಅಗಲದ ವೇದಿಕೆ ಸಿದ್ಧಪಡಿಸಲಾಗುತ್ತಿದೆ. ಅಂದರೆ ಕಳೆದ ವರ್ಷ ಸಿದ್ಧಪಡಿಸಿದ್ದಕ್ಕಿಂತ ಮೂರು ಪಟ್ಟು ಅಧಿಕ ಅಳತೆಯ ವೇದಿಕೆಯಾಗಲಿದೆ. ಅದರ ಸುತ್ತಲೂ 100 ಅಡಿ ಅಗಲ ಗುಂಡು ನಿರೋ ಧಕ ಗಾಜಿನ ಪರದೆ ಅಳವಡಿಸಲಾಗುತ್ತದೆ.
ತಾಜ್ ಪ್ಯಾಲೇಸ್, ತಾಜ್ ಮಾನ್‌ಸಿಂಗ್, ಮೌರ್ಯ ಶೆರ್ಯಟನ್, ದ ಲೀಲಾ ಪ್ಯಾಲೇಸ್ ಮತ್ತು ದ ಒಬೆರಾಯ್ ಹೊಟೇಲ್ ಗಳಲ್ಲಿ ಹತ್ತು ರಾಷ್ಟ್ರಗಳ ಸರಕಾರಿ ಮುಖ್ಯಸ್ಥರು ಮತ್ತು ಅವರ ನಿಯೋಗ ತಂಗಲಿದೆ.
ದಿಲ್ಲಿ ಪೊಲೀಸರಿಗಂತೂ ಈ ಬಾರಿಯ ಗಣರಾಜ್ಯ ದಿನ ಭದ್ರತೆಗೆ ಸಂಬಂಧಿಸಿದಂತೆ ಭಾರೀ ಸವಾಲೇ ಆಗಿದೆ. ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟ (ಆಸಿಯಾನ್)ದ ಸದಸ್ಯ ರಾಷ್ಟ್ರಗಳಾಗಿರುವ ಥಾಯ್ಲೆಂಡ್, ವಿಯೆಟ್ನಾಂ, ಇಂಡೋನೇಷ್ಯಾ, ಮಲೇಷ್ಯಾ, ಫಿಲಿಪ್ಪೀನ್ಸ್, ಸಿಂಗಾಪುರ, ಮ್ಯಾನ್ಮಾರ್, ಕಾಂಬೋಡಿಯಾ, ಲಾವೋಸ್ ಮತ್ತು ಬ್ರೂನೈನ ಸರಕಾರಿ ಮುಖ್ಯಸ್ಥರು ಆಗಮಿಸಲಿದ್ದಾರೆ.
ಜ.25ರಂದು ಆಸಿಯಾನ್ ಮತ್ತು ಭಾರತದ ಮೈತ್ರಿಗೆ 25 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ವಿಶೇಷ ಸಮಾವೇಶ ಆಯೋಜಿಸಲಾಗಿದೆ. ಜ.26ರಂದು ಎಲ್ಲ ಹೊಟೇಲ್‌ಗಳಿಂದ ಸರಕಾರಿ ಮುಖ್ಯಸ್ಥರು ನೇರವಾಗಿ ರಾಷ್ಟ್ರಪತಿ ಭವನಕ್ಕೆ ತೆರಳಲಿದ್ದಾರೆ. ಅಲ್ಲಿಂದ ಪರೇಡ್ ನಡೆಯುವ ರಾಜ್‌ಪಥ್‌ಗೆ ಪತ್ಯೇಕವಾಗಿ ಆಗಮಿಸಲಿದ್ದಾರೆ. ಹೀಗಾಗಿ, ಪ್ರತಿಯೊಬ್ಬ ಮುಖ್ಯಸ್ಥರ ಆಗಮನದ ವೇಳೆ ತೊಂದರೆಯಾಗದ ರೀತಿಯಲ್ಲಿ ನಿರ್ವಹಿ ಸುವ ಸವಾಲು ಪೊಲೀಸರಿಗೆ ಇದೆ.