Advertisement
ಹೀಗೆಂದು ಗಣರಾಜ್ಯ ದಿನದ ಪರೇಡ್ ಕಮಾಂಡರ್ ಮೇಜರ್ ಜನರಲ್ ಅಲೋಕ್ ಕಕ್ಕರ್ ತಿಳಿಸಿದ್ದಾರೆ. ಈವರೆಗೆ ಇದ್ದ ಸಂಪ್ರದಾಯದ ಪ್ರಕಾರ, ಪ್ರಧಾನಿಯು ಗಣರಾಜ್ಯ ದಿನದಂದು ಬೆಳಗ್ಗೆ ಅಮರ್ ಜವಾನ್ ಜ್ಯೋತಿಯಲ್ಲಿ ಹುತಾತ್ಮ ಯೋಧರಿಗೆ ಪುಷ್ಪನಮನ ಸಲ್ಲಿಸುತ್ತಿದ್ದರು. ಆದರೆ, ಇನ್ನು ಮುಂದೆ ಅಮರ್ ಜವಾನ್‌ನಲ್ಲಿ ಈ ಪ್ರಕ್ರಿಯೆ ನಡೆಯುವುದಿಲ್ಲ. ಬದಲಿಗೆ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲೇ ಹುತಾತ್ಮರಿಗೆ ನಮನ ಸಲ್ಲಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಗಣರಾಜ್ಯ ದಿನದಂದೇ ಲಂಡನ್‌ನಲ್ಲಿ ಭಾರತದ ಸಂವಿಧಾನಕ್ಕೆ ಬೆಂಕಿ ಹಚ್ಚಲು ಪಾಕಿಸ್ತಾನದ ಗುಂಪೊಂದು ನಿರ್ಧರಿಸಿದೆ ಎನ್ನಲಾಗಿದ್ದು, ಈ ಕುರಿತು ಅಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಯುಕೆ ಗೃಹ ಸಚಿವೆ ಪ್ರೀತಿ ಪಟೇಲ್‌ಗೆ ಕರೆ ಮಾಡಿ ಕಳವಳ ವ್ಯಕ್ತಪಡಿಸಿದೆ. ಈ ಪ್ರತಿಭಟನೆಗೆ ಅವಕಾಶ ನೀಡದಂತೆ ಭಾರತೀಯ ಸಮುದಾಯದ ಹಲವರು ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.