Advertisement

ತ್ರಿವರ್ಣಕ್ಕಾದ ಅವಮಾನದಿಂದ ದೇಶ ಆಘಾತಕ್ಕೊಳಗಾಗಿದೆ : ಪ್ರಧಾನಿ

01:07 PM Jan 31, 2021 | Team Udayavani |

ನವ ದೆಹಲಿ:  ಗಣರಾಜ್ಯೋತ್ಸವದಂದು ದೆಹಲಿಯ ಕೆಂಪು ಕೋಟೆಯಲ್ಲಿ ನಡೆದ ರೈತರ ಟ್ರ್ಯಾಕ್ಟರ್ ಪರೇಡ್,  ಹಿಂಸಾಚಾರಕ್ಕೆ ತಿರುಗಿರುವುದರ  ಕುರಿತು  ಪ್ರಧಾನಿ ನರೇಂದ್ರ ಮೋದಿ ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ ನಲ್ಲಿ ವಿಷಾದ ವ್ಯಕ್ತ ಪಡಿಸಿದ್ದಾರೆ.

Advertisement

ಜನವರಿ 26 ರಂದು ಕೆಂಪು ಕೋಟೆಯಲ್ಲಿ ತ್ರಿವರ್ಣ ಧ್ವಜಕ್ಕೆ ಅವಮಾನಕ್ಕೆ  ಸಾಕ್ಷಿಯಾದ ರಾಷ್ಟ್ರವು ಆಘಾತಕ್ಕೊಳಗಾಗಿದೆ ಎಂದು ಅವರು ಹೇಳಿದ್ದಾರೆ.

ಓದಿ : ವಿಪಕ್ಷದವರು ಏನೇ ಟೀಕೆ ಮಾಡಿದರೂ ನಾವು ಸ್ವಾಗತಿಸುತ್ತೇವೆ: ಬಿ.ಎಸ್.ಯಡಿಯೂರಪ್ಪ

ಜನವರಿಯಲ್ಲಿ ರಾಷ್ಟ್ರವು ಹಲವಾರು ಉತ್ಸವಗಳನ್ನು ಆಚರಿಸಿದೆ. ಆಸ್ಟ್ರೇಲಿಯಾದ ಕ್ರಿಕೇಟ್ ಪಿಚ್ ನಲ್ಲಿ  ‘ಮೆನ್ ಇನ್ ಬ್ಲೂ’ ಅದ್ಭುತ ಗೆಲುವು ಸಾಧಿಸುವುದರ ಮೂಲಕ ಇತಿಹಾಸ ಬರೆಯಿತು. ಆದರೆ ಜನವರಿ 26 ರಂದು ತ್ರಿವರ್ಣಕ್ಕೆ ತಂದ ಅವಮಾನದಿಂದ ಬೇಸರವಾಯಿತು ಎಂದು ಪ್ರಧಾನಿ ಹೇಳಿದರು.

ಓದಿ : ವಿಕ್ಟೋರಿಯಾ ಆಸ್ಪತ್ರೆಯಿಂದ ಬಿಡುಗಡೆಯಾದ ವಿ.ಕೆ. ಶಶಿಕಲಾ : ಬಿಗುಭದ್ರತೆ

Advertisement

ಕೆಲವು ದಿನಗಳ ಹಿಂದೆ ನಾವು ಲೋಹರಿಯನ್ನು ಆಚರಿಸಿದ್ದೇವೆ, ಮಕರ ಸಂಕ್ರಾಂತಿ, ಪೊಂಗಲ್, ಬಿಹು ಆಚರಿಸಿದೆವು. ಈ ತಿಂಗಳಲ್ಲಿ ದೇಶದ ವಿವಿಧ ಭಾಗಗಳಲ್ಲಿ ಹಬ್ಬಗಳನ್ನು ಆಚರಿಸಲಾಯಿತು …. ಕ್ರಿಕೆಟ್ ಪಿಚ್‌ ನಿಂದ ನಮಗೆ ಶುಭ ಸುದ್ದಿ ಸಿಕ್ಕಿತು. ಭಾರತೀಯ ಕ್ರಿಕೇಟ್ ತಂಡವು ವೈಭವಯುತವಾಗಿ ಪುಟಿದೇಳುವ ಮೂಲಕ ಆಸ್ಟ್ರೇಲಿಯಾದಲ್ಲಿ ಸರಣಿಯನ್ನು ಗೆದ್ದಿತು. ನಮ್ಮ ತಂಡದ ಕಠಿಣ ಪರಿಶ್ರಮ ನಿಜಕ್ಕೂ ಸ್ಪೂರ್ತಿದಾಯಕವಾಗಿದೆ.

ಈ ಎಲ್ಲದರ ಮಧ್ಯೆ, ಜನವರಿ 26 ರಂದು ನಡೆದ ತ್ರಿವರ್ಣದ ಅವಮಾನಕ್ಕೆ ಸಾಕ್ಷಿಯಾದ ದೇಶ ಆಘಾತಕ್ಕೊಳಗಾಯಿತು, “ಮುಂಬರುವ ದಿನಗಳನ್ನು ನಾವು ಭರವಸೆ ಮತ್ತು ನವೀನತೆಯಿಂದ ತುಂಬಬೇಕಾಗಿದೆ” ಎಂದು ಅವರು ಹೇಳಿದ್ದಾರೆ.

ಓದಿ : ಕೆಲವು ಅವಧಿಯ ನಂತರ ಸ್ಟ್ರೀಮಿಂಗ್ ಮಾಡುವುದನ್ನು ನಿಲ್ಲಿಸಲಿದೆ ನೆಟ್ ಪ್ಲಿಕ್ಸ್ ..!?

 

 

Advertisement

Udayavani is now on Telegram. Click here to join our channel and stay updated with the latest news.

Next