ನವದೆಹಲಿ: ಕೊರೊನಾ ದೇಶದಲ್ಲಿ ಮತ್ತೂಮ್ಮೆ ಏರುಗತಿಯಲ್ಲಿ ಸಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜ.26ಕ್ಕೆ ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕೇವಲ 24,000 ಜನರು ಮಾತ್ರ ಪಾಲ್ಗೊಳ್ಳಲು ಅನುಮತಿ ನೀಡಲಾಗಿದೆ.
2020ರಲ್ಲಿ (ಆಗಿನ್ನೂ ಕೊರೊನಾ ತೀವ್ರವಾಗಿರಲಿಲ್ಲ) 1.25 ಲಕ್ಷ ಜನರಿಗೆ ಅವಕಾಶ ನೀಡಲಾಗಿತ್ತು. 2021ರಲ್ಲಿ 25,000 ಮಂದಿಗೆ ಅವಕಾಶವಿತ್ತು.
ಹಾಗೆಯೇ ಈ ಬಾರಿಯೂ ವಿದೇಶಿ ಗಣ್ಯರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವುದಿಲ್ಲ. ಈ ಬಾರಿ 19,000 ಮಂದಿ ಆಹ್ವಾನಿತರೇ ಇರುತ್ತಾರೆ. ಬಾಕಿ 10,000 ಮಂದಿ ಟಿಕೆಟ್ ಖರೀದಿಸಿ ಕಾರ್ಯಕ್ರಮಕ್ಕೆ ಆಗಮಿಸಬಹುದು.
ಇದನ್ನೂ ಓದಿ:ಭಾರತದ ಪ್ರಸಿದ್ಧ ಮೋಟಾರು ವಾಹನ ಸಂಸ್ಥೆಯಾದ ಮಾರುತಿ ಕಾರುಗಳ ಬೆಲೆ ಶೇ.4.3 ಏರಿಕೆ
ಈ ವೇಳೆ ಎಲ್ಲ ರೀತಿಯ ಕೊರೊನಾ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ರಕ್ಷಣಾ ಸಚಿವಾಲಯದ ಮೂಲಗಳು ಹೇಳಿವೆ.