Advertisement

ಗಣರಾಜ್ಯೋತ್ಸವ ಸರಳ ಆಚರಣೆ

06:59 PM Jan 27, 2021 | Team Udayavani |

ಅಂಕೋಲಾ: ಗಣರಾಜ್ಯೋತ್ಸವ ತಾಲೂಕಿನಲ್ಲಿ ಸರಳವಾಗಿ ಆಚರಿಸಲಾಯಿತು. ಪುರಸಭೆ ಅಧ್ಯಕ್ಷೆ ಶಾಂತಲಾ ಅರುಣ ನಾಡಕರ್ಣಿ ಸಮಾಜ ಮಂದಿರದ ಎದುರಲ್ಲಿ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿದರು.

Advertisement

ಬಳಿಕ ಮಾತನಾಡಿದ ಅವರು, ನಮ್ಮ ಸಂವಿಧಾನವನ್ನು 1950 ರ ಜ.26 ರಂದು ಇಡೀ ದೇಶಕ್ಕೆ ಏಕೈಕ ಪೌರತ್ವವನ್ನು ಉಪಬಂಧಿಸಿ, ಎಲ್ಲಾ ಪೌರರಿಗೆ ಮೂಲಭೂತ ಹಕ್ಕುಗಳನ್ನು ದಯಪಾಲಿಸಿ, ಪ್ರಜೆಗಳು ಜವಾಬ್ದಾರಿಯುತವಾಗಿ ವರ್ತಿಸಲು ಮೂಲಭೂತ ಕರ್ತವ್ಯಗಳನ್ನು ಸಹ ಸಂವಿಧಾನವು ನೀಡಿದೆ.ನಮ್ಮ ರಾಷ್ಟ್ರವನ್ನು ಇನ್ನಷ್ಟು ಅಭ್ಯುದಯದ ಪಥದಲ್ಲಿಮುನ್ನಡೆಸುವುದು ಪ್ರತಿಯೊಬ್ಬ ಭಾರತೀಯನ ಮೂಲಭೂತ ಕರ್ತವ್ಯವಾಗಿದೆ ಎಂದರು.

ಇದನ್ನೂ ಓದಿ:ಸಂವಿಧಾನ ದೇಶದ ಭದ್ರ ಬುನಾದಿ: ನಯನಾ

ತಾಪಂ ಅಧ್ಯಕ್ಷೆ ಸುಜಾತಾ ಗಾವಂಕರ, ತಹಶೀಲ್ದಾರ್‌ ಉದಯಕುಮಾರ ಕುಂಬಾರ, ಪುರಸಭೆ ಮುಖ್ಯಾಧಿಕಾರಿ ಬಿ.ಪ್ರಹ್ಲಾದ, ಪೊಲೀಸ್‌ ನಿರೀಕ್ಷಕ ಕೃಷ್ಣಾನಂದ ನಾಯಕ, ಉಪಸ್ಥಿತರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next