Advertisement
ಕೋವಿಡ್ ಕರಾಳಮುಖದ ಹಿನ್ನೆಲೆಯಲ್ಲೂ ನಮ್ಮ ದೇಶದಲ್ಲಿ ಹಲವಾರು ಸಕಾರಾತ್ಮಕ ಘಟನೆಗಳು ನಡೆದವು. 16 ಡಿಸೆಂಬರ್ 2020ರಿಂದ ಬರುವ 16 ಡಿಸೆಂಬರ್ 2021ರ ವರೆಗೆ, ಸಂಪೂರ್ಣ ಒಂದು ವರ್ಷದವರೆಗೆ “ಸ್ವರ್ಣಿಮ್ ವಿಜಯ ಜಯಂತಿ ‘ ಆಚರಿಸಲಾಗುತ್ತಿದೆ.
Related Articles
Advertisement
ಈ ಸಲದ ವಿಶೇಷತೆ ಏನು ಎಂದರೆ ಈ ವಿಮಾನಗಳ ಈ ಪ್ರತಿ ಯೊಂದು ಗುಂಪಿಗೂ ಬಹಳ ಅರ್ಥಪೂರ್ಣವಾದ ಅಚ್ಚ ಭಾರತೀಯ ಹೆಸರು ಗಳನ್ನು ಕೊಡಲಾಗಿದೆ. ರಾಜಪಥದ ಪರೇಡ್ ಕರಾರುವಾಕ್ಕಾಗಿ 10:00 ಗಂಟೆಗೆ ಪ್ರಾರಂಭವಾಗು ತ್ತದೆ. ಪರೇಡ್ ಕಮಾಂಡರ್ ಅವರ ಜೀಪ್ ರಾಷ್ಟ್ರಪತಿಗಳು ನಿಂತಿರುವ ಗೌರವ ಸಲಾಮಿ ಮಂಟಪದ ಮುಂದೆ ಹಾದು ಹೋಗುವಾಗ ಸಮಯ 10:04 ಆಗಿರುತ್ತದೆ. ಅದೇ ಸಮಯಕ್ಕೆ ಸುಮಾರು ಹತ್ತು ಸೆಕೆಂಡುಗಳ ಅಂತರ ದಲ್ಲಿ “ನಿಶಾನ್’ ಎನ್ನುವ ನಾಲ್ಕು ಹೆಲಿಕಾಪ್ಟರ್‌ಗಳ (Mi17 1V5) ಗುಂಪು ಭಾರತೀಯ ರಾಷ್ಟ್ರೀಯ ಧ್ವಜ ಮತ್ತು ಸೇನೆಯ ಮೂರು ಅಂಗಗಳ ಧ್ವಜಗಳನ್ನು ಹಾರಿಸುತ್ತಾ ರಾಷ್ಟ್ರಪತಿಗಳಿಗೆ ವಂದಿಸುತ್ತಾ ಮುಂದೆ ಸಾಗುತ್ತವೆ. ಈ ಹೆಲಿಕಾಪ್ಟರ್‌ಗಳ ಹಿಂದೆಯೇ ಭೂಸೇನೆಯ ನಾಲ್ಕು “ಧ್ರುವ’ ಹೆಲಿಕಾಪ್ಟರ್‌ಗಳು ಸಾಗುತ್ತವೆ. ಮೂರನೇ ವಿಮಾನಗಳ ಗುಂಪೇ ಈ ವರ್ಷದ “ಸ್ವರ್ಣಿಮ್ ವಿಜಯ ಜಯಂತಿ’ ಸಮಾರಂಭದ ಸಂಕೇತ. ಇದರಲ್ಲಿ ಮುಂದೆ ಒಂದು ಡಕೋಟಾ(dc 3) ವಿಮಾನ ಮತ್ತು ಎಡ ಬಲಕ್ಕೆ ಎರಡು ಹೆಲಿಕಾಪ್ಟರ್‌ಗಳು(Mi 17 lV) ಹಾರುತ್ತಾ ಹೋಗುತ್ತಿರುವಾಗಲೇ ಕೆಳಗೆ ಬಂಗ್ಲಾದೇಶದ 122 ಸೈನಿಕರ ತುಕಡಿ ರಾಷ್ಟ್ರಪತಿಯವರಿಗೆ ವಂದಿಸುತ್ತಾ ಸಾಗುತ್ತಿರುತ್ತದೆ, ಆಗ ಸಮಯ 10:20 ಆಗಿರುತ್ತದೆ.
ಇನ್ನು ಎರಡನೇ ಕಂತಿನ ವಾಯುಪ್ರದರ್ಶನ 11:20ಕ್ಕೆ ಅಂದರೆ ಇನ್ನು ಒಂದು ಗಂಟೆಯ ತನಕ ಸೈನ್ಯದ, ಅರೆಸೈನ್ಯದ, ಪೊಲೀಸರ, Ncc ಕೆಡೆಟ್‌ಗಳ ಪಥಸಂಚಲನ ಮತ್ತು ವಿವಿಧ ರಾಜ್ಯಗಳ ಸ್ತಬ್ದಚಿತ್ರಗಳು ಸಾಗಲಿವೆ. ಈ ಸಲ 60ರ ವಯಸ್ಸಿನ ಮೇಲಿನ ಸೈನಿಕರು ಭಾಗವಹಿಸುವಂತಿಲ್ಲ. ಹಾಗಾಗಿ ಪರಮವೀರ ಚಕ್ರ ವಿಜೇತ ಕ್ಯಾಪ್ಟನ್ ಬಾಣಾಸಿಂಗ್ ಭಾಗವಹಿಸುತ್ತಿಲ್ಲ.
ಈ ಸಲದ ವಾಯುಸೇನೆಯ ಸ್ತಬ್ದಚಿತ್ರವೂ ವಿಶೇಷ ಆಕರ್ಷಣೆ. ಇದರಲ್ಲಿ ಆತ್ಮನಿರ್ಭರತೆಯ ಪ್ರದರ್ಶನ ಎದ್ದು ಕಾಣುತ್ತದೆ. ನಮ್ಮ ದೇಶದಲ್ಲಿ ನಿರ್ಮಿತವಾದ ಲಘು ಯುದ್ಧ ವಿಮಾನ “ತೇಜಸ್’ನ ಪ್ರಮಾಣಿತ ಮಾದರಿಯ ವಿಮಾನವಿರುತ್ತದೆ. ತೇಜಸ್ವಿನಿ ಅನಂತ್ ಕುಮಾರ್ ವ್ಯಕ್ತಿತ್ವಕ್ಕೆ ಮೆಚ್ಚಿದ ವಾಜಪೇಯಿಯವರು ತೇಜಸ್ ಎನ್ನುವ ಹೆಸರನ್ನು ಸೂಚಿಸಿದ್ದರಂತೆ! ಇನ್ನು ರೋಹಿಣಿ ರಡಾರ್, ರುದ್ರ ಹೆಲಿಕಾಪ್ಟರ್, ಆಕಾಶ್ ಮತ್ತು ಬ್ರಹೋಸ್ ಕ್ಷಿಪಣಿಗಳ ಪ್ರದರ್ಶನವೂ ಇರುತ್ತದೆ. ಇವುಗಳ ನಡುವೆ ಹೆಮ್ಮೆಯಿಂದ ನಿಂತು ರಾಷ್ಟ್ರಪತಿಯವರಿಗೆ ಖಡಕ್ ಸಲ್ಯೂಟ್ ಹೊಡೆಯುತ್ತಿರುವವರೇ ರಫೇಲ್ ಯುದ್ಧ ವಿಮಾನದ ಪೈಲಟ್ ಫ್ಲೈಟ್ ಲೆಫ್ಟಿನೆಂಟ್ ಭಾವನಾ ಖಾಂತ್…ಇದೂ ಸಹಾ ಮೊಟ್ಟಮೊದಲ ಬಾರಿಗೆ ಯುದ್ಧವಿಮಾನದ ಮಹಿಳಾ ಪೈಲಟ್ ಗಣತಂತ್ರ ಪರೇಡಿನಲ್ಲಿ ಭಾಗವಹಿಸುತ್ತಿರುವುದು. ಶಿವಾಂಗಿ ಸಿಂಗ್ ರಫೇಲ್ ಯುದ್ಧ ವಿಮಾನದ ಇನ್ನೊಬ್ಬ ಮಹಿಳಾ ಪೈಲಟ್. ಇವರಿಬ್ಬರೂ ವಿಂಗ್ ಕಮಾಂಡರ್ ಅಭಿನಂದನ್ ಅವರಿಂದ ತರಬೇತಿ ಪಡೆದವರು.
11:20 ಕ್ಕೆ ವಾಯುಪ್ರದರ್ಶನದ ಎರಡನೇ ಕಂತು ಪ್ರಾರಂಭ…ಎಲ್ಲರೂ ಆಕಾಶದತ್ತ ದೃಷ್ಟಿ ನೆಟ್ಟುಕೊಂಡಿರುವಾಗಲೇ ಮೊದಲಿಗೆ ಬರುತ್ತದೆ “ಸುದರ್ಶನ’ ಮತ್ತು “ರಕ್ಷಕ’ ಫಾರ್ಮೇಶನ್. ಒಂದು ಚಿನೂಕ್ ಮತ್ತು ಇಬ್ಬದಿಗೆ ಒಂದೊಂದು Mi17 ಹೆಲಿಕಾಪ್ಟರ್‌ಗಳು ಸುದರ್ಶನದಲ್ಲಿದ್ದರೆ, ರಕ್ಷಕದಲ್ಲಿ ಒಂದು Mi17 ಮತ್ತು ನಾಲ್ಕು ಚಿನೂಕ್ ಆಕ್ರಮಣ ಹೆಲಿಕಾಪ್ಟರ್‌ಗಳು ಇರುತ್ತವೆ. ಇದರ ಹಿಂದೆ ಬರುತ್ತವೆ ಮೂರು ಇ-130 ಹರ್ಕುಲಿಸ್ ವಿಮಾನಗಳ “ಭೀಮ’ ಫಾರ್ಮೇಶನ್. ಇದರ ಹಿಂದೆ ಬರುವುದು ಗಜಗಾತ್ರದ “ಗರುಡ’ ಫಾರ್ಮೇಶನ್. ಗ್ಲೋಬ್ ಮಾಸ್ಟರ್ ಇ-17 ಎನ್ನುವ ದೊಡ್ಡ ವಿಮಾನಕ್ಕೆ ಅಂಟಿಕೊಂಡಂತೇ ಎರಡೆರಡು Mಜಿಜ 29 ಮತ್ತು ಖukಜಟಜಿ 30 ವಿಮಾನಗಳು.
ಅನಂತರ ಪ್ರಪ್ರಥಮವಾಗಿ ರಫೇಲ್ ವಿಮಾನದ ಆಗಮನವಾಗುತ್ತದೆ. “ಏಕಲವ್ಯ’ ಎನ್ನುವ ಈ ಫಾರ್ಮೇಶನ್ನಿನ ಮಂಚೂಣಿಯಲ್ಲಿ ರಫೇಲ್ ವಿಮಾನ ಮತ್ತು ಇಕ್ಕೆಲಗಳಲ್ಲಿ ಎರಡು Mig29 ವಿಮಾನಗಳಿರುತ್ತವೆ. ಹಿಂದೆ ಬಂದ ಮೂರು sukhoi 30 ವಿಮಾನಗಳು ಆಕಾಶದಲ್ಲಿ ತ್ರಿಶೂಲದ ಚಿತ್ರ ಬಿಡಿಸಿ ಹೋಗುತ್ತವೆ. ಆ ತ್ರಿಶೂಲದ ಕೆಳಗೇ ನೇತ್ರಾ ಮತ್ತು ಸಾರಂಗ್ ಹೆಲಿಕಾಪ್ಟರ್‌ಗಳು ಹಾರಿ ಕಣ್ಮರೆಯಾಗುವವಷ್ಟರಲ್ಲಿ ಸಮಯ 11:43 ಆಗಿರುತ್ತದೆ. ಇನ್ನುಳಿದಿ ರುವುದು ಭವ್ಯ ಮುಕ್ತಾಯದ ಪ್ರದರ್ಶನ. ಗೌರವ ಮಂಟಪದ ಮುಂದೆ ಬಂದು ಒಮ್ಮೆಲೇ ಮೇಲಕ್ಕೆ ಜಿಗಿದು ಸುರುಳಿ ಸುತ್ತುತ್ತಾ ಆಕಾಶವನ್ನು ಸೀಳಿ ಕೊಂಡು ಹೋಗುವ ಈ ಪ್ರದರ್ಶನಕ್ಕೆ vertical Charlie ಎನ್ನುತ್ತಾರೆ. ಈ ಸಲ ಮೊಟ್ಟ ಮೊದಲಿಗೆ ರಫೇಲ್ ವಿಮಾನ ಇದರ ಪ್ರದರ್ಶನ ನೀಡಲಿದೆ. ಇಲ್ಲಿವ ರೆಗೂ ಉಸಿರು ಬಿಗಿಹಿಡಿದು ನೋಡುತ್ತಿದ್ದ ಜನಗಣ, ಗಣತಂತ್ರ ಸಮಾರೋಹ ಸಮಾಪ್ತಿಯಾದ ಸಂತೃಪ್ತಿಯಿಂದ ತಮ್ಮ ಮನೆಗೆ ಮರಳುತ್ತಾರೆ.
–ವಿಂಗ್ ಕಮಾಂಡರ್ ಸುದರ್ಶನ