Advertisement

30,000 ಪರಿಸರ ಸ್ನೇಹಿ ತ್ರಿವರ್ಣ ಧ್ವಜ ವಿತರಿಸಿದ ಏರಿಂಡಿಯಾ

10:14 AM Jan 27, 2020 | Team Udayavani |

ಶ್ರೀನಗರ: ಬೆಂಗಳೂರು, ಶ್ರೀನಗರ ಸೇರಿದಂತೆ ದೇಶದ ಪ್ರಮುಖ ನಗರಗಳ ವಿಮಾನ ನಿಲ್ದಾಣಗಳಲ್ಲಿ ಬರೋಬ್ಬರಿ 30,000 ಪ್ರಯಾಣಿಕರಿಗೆ ಪರಿಸರ ಸ್ನೇಹಿ ತ್ರಿವರ್ಣ ಧ್ವಜ(ಚೆಂಡು ಹೂ ಮತ್ತು ಮೆಂತೆ ಬೀಜಗಳನ್ನು ಒಳಗೊಂಡ)ಗಳನ್ನು ನೀಡಿ ಏರ್‌ಇಂಡಿಯ ವಿನೂತನ ರೀತಿಯಲ್ಲಿ ಗಣರಾಜ್ಯೋತ್ಸವ ಆಚರಿಸಿದೆ. ಈ ಧ್ವಜಗಳನ್ನು ಮಧ್ಯಪ್ರದೇಶದ ಸಹಾರಿಯಾ ಬುಡಕಟ್ಟು ಜನಾಂಗವು ಕೈಯಿಂದಲೇ ತಯಾರಿಸಿದೆ ಎಂದು ಏರ್‌ ಇಂಡಿಯಾ ವಕ್ತಾರರು ತಿಳಿಸಿದ್ದಾರೆ. ಜತೆಗೆ ಶ್ರೀನಗರದ ಲಾಲ್‌ ಚೌಕದಲ್ಲಿ ಗಣರಾಜ್ಯೋತ್ಸವದ ಶುಭಾಶಯ ಕೋರಿ ದೊಡ್ಡ ಫ‌ಲಕವನ್ನೂ ಹಾಕಲಾಗಿತ್ತು. 370ನೇ ವಿಧಿ ರದ್ದಾದ ಬಳಿಕ ಜಮ್ಮು -ಕಾಶ್ಮೀರ ಆಚರಿಸಿದ ಮೊದಲ ಗಣರಾಜ್ಯೋತ್ಸವವಿದು.

Advertisement
Advertisement

Udayavani is now on Telegram. Click here to join our channel and stay updated with the latest news.

Next